ಅಣುಬಾಂಬ್​ ತಯಾರಿಕೆ ಪ್ರಕ್ರಿಯೆಯನ್ನು ಕೈಬಿಡಲ್ಲ ಎಂದು ಇರಾನ್ ಸಚಿವ ಅಬ್ಬಾಸ್ ಅರಘ್ಚಿ!Abbas Araghchi!

Abbas Araghchi
Published on

Abbas Araghchi: ಅಮೆರಿಕ ಮತ್ತು ಇಸ್ರೇಲ್​ ವಾಯುದಾಳಿಗಳಿಂದ ಇರಾನ್​​ನಲ್ಲಿ ಹಾನಿ ಸಂಭವಿಸಿದ್ದರೂ, ನಾವು ಅಣು ಬಾಂಬ್ ತಯಾರಿಕಾ ಕಾರ್ಯಕ್ರಮವನ್ನು ಕೈಬಿಡುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.

ಅಣು ಸ್ಥಾವರದ ಮೇಲಿನ ದಾಳಿಯ ಬಗ್ಗೆ ಬುಧವಾರ ಮಾತನಾಡಿ ಅಬ್ಬಾಸ್ ಅರಘ್ಚಿ, ಯೂರೇನಿಯಂ ನೆಲೆ ಮೇಲೆ ದಾಳಿಯಾಗಿರುವುದು ನಿಜ. ಅದರೆ, ನಾವು ಯಾವುದೇ ಕಾರಣಕ್ಕೂ ಕಾರ್ಯಕ್ರಮವನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದು ನಮ್ಮ ವಿಜ್ಞಾನಿಗಳ ಸಾಧನೆಯಾಗಿದೆ. ಅಲ್ಲದೆ, ಈ ಕಾರ್ಯಕ್ರಮವು ರಾಷ್ಟ್ರಕ್ಕೆ ಹೆಮ್ಮೆಯ ವಿಷಯ ಎಂದಿದ್ದಾರೆ.

ಇರಾನ್​ ಪರಮಾಣು ಕಾರ್ಯಕ್ರಮವು ಶಾಂತಿಯುತವಾಗಿದೆ ಮತ್ತು ಶಾಶ್ವತವಾಗಿ ಶಾಂತಿಯುತವಾಗಿರುತ್ತದೆ. ಇರಾನ್​ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಿಲ್ಲ ಎಂದು ಸಾಬೀತುಪಡಿಸಲು ಅಗತ್ಯವಿರುವ ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ನಾವು ಸಿದ್ಧ. ಇದಕ್ಕೆ ಪ್ರತಿಯಾಗಿ ಅಮೆರಿಕ ತಮ್ಮ ಮೇಲಿನ ನಿರ್ಬಂಧಗಳನ್ನು ತಗೆದುಹಾಕುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net