Missile Strike| ಇರಾನ್​ ಅತಿದೊಡ್ಡ ತಪ್ಪು ಮಾಡಿದೆ, ತಕ್ಕ ಬೆಲೆ ತೆರಬೇಕಾಗುತ್ತೆ: ನೆತನ್ಯಾಹು

Netanyahu
Published on

ನವದೆಹಲಿ: ಇಸ್ರೇಲ್​ ಮೇಲೆ ಕ್ಷಿಪಣಿ ದಾಳಿ (Missile Strike) ಮಾಡುವ ಮೂಲಕ ಇರಾನ್​ ಅತಿದೊಡ್ಡ ತಪ್ಪು ಮಾಡಿದೆ. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತೆ ಎಂದು ಇಸ್ರೇಲ್​ಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್​ಗೆ ಎಚ್ಚರಿಕೆ ನೀಡಿದ್ದಾರೆ.

ಹಿಜ್ಬುಲ್ಲಾ ಸಂಘಟನೆ ಮುಖ್ಯಸ್ಥ ಸಯ್ಯದ್‌ ಹಸನ್ ನಸ್ರಲ್ಲಾ ಹತ್ಯೆ ನಂತರ ಮಂಗಳವಾರ ರಾತ್ರಿ ಇಸ್ರೇಲ್‌ ಮೇಲೆ ಇರಾನ್ 180 ಕ್ಷಿಪಣಿ ದಾಳಿ (Missile Attack) ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ತೀವ್ರಗೊಂಡಿದೆ.

ಈ ಕುರಿತು ಮಾತನಾಡಿರುವ ನೆತನ್ಯಾಹು, ಇಸ್ರೇಲ್​ ಮೇಲೆ ಕ್ಷಿಪಣಿ ದಾಳಿ (Missile Attack) ಮಾಡುವ ಮೂಲಕ ಇರಾನ್​ ಅತಿದೊಡ್ಡ ತಪ್ಪು ಮಾಡಿದೆ. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತೆ. ವಿಶ್ವದಲ್ಲೇ ಅತ್ಯಂತ ಸುಧಾರಿತ ವಾಯು ರಕ್ಷಣಾ ವ್ಯವಸ್ಥೆಯನ್ನು ಇಸ್ರೇಲ್ ಹೊಂದಿದ್ದು, ಇರಾನ್ ಕ್ಷಿಪಣಿ ದಾಳಿಯನ್ನು ನಮ್ಮ ವಾಯುಪಡೆ ವಿಫಲಗೊಳಿಸಿದೆ. ಅದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ.

ಇಸ್ರೇಲ್​ ಮೇಲೆ ಕ್ಷಿಪಣಿ ದಾಳಿ (Missile Attack) ಬೆನ್ನಲ್ಲೇ ಭದ್ರತಾ ಇಲಾಖೆಯ ಪ್ರಮುಖರ ಜತೆ ನೆತನ್ಯಾಹು ಸಭೆ ನಡೆಸಿದ್ದು, ಲಕ್ಷಾಂತರ ಇಸ್ರೇಲಿಗಳು ಬಾಂಬ್ ಶಲ್ಟರ್‌ನಲ್ಲಿ ಆಶ್ರಯ ಪಡೆದಿದ್ದಾರೆ. ಹುತಾತ್ಮ ನಾಯಕ ಸಯ್ಯದ್ ಹಸನ್ ನಸ್ರಲ್ಲಾ ಅವರ ಹತ್ಯೆಗೆ ಪ್ರತೀಕಾರವಾಗಿ ಆಕ್ರಮಣಕಾರರ ಹೃದಯವನ್ನು ಗುರಿಯಾಸಿಕೊಂಡಿದ್ದೇವೆ ಎಂದು ಇರಾನ್ ಪ್ರಕಟಣೆಯನ್ನು ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net