ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯಸರ್ಕಾರ; ಎನ್​.ವಿಷ್ಣುವರ್ಧನ್​ ಇನ್ಮುಂದೆ ಉಡುಪಿ ಜಿಲ್ಲಾ ಎಸ್​ಪಿ

IPS 1 Jan 2020
Published on

ಬೆಂಗಳೂರು: ಮೂವರು ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು ನಗರಾಡಳಿತ ಡಿಸಿಪಿಯಾಗಿದ್ದ ಎನ್​.ವಿಷ್ಣುವರ್ಧನ್​ ಅವರನ್ನು ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ (ಎಸ್​ಪಿ)ಯನ್ನಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.

ಅಲ್ಲದೆ, ಚಿತ್ರದುರ್ಗ ಎಸ್​ಪಿಯಾಗಿದ್ದ ಡಾ. ಅರುಣ್​ ಕೆ.ಅವರನ್ನು ಬೆಂಗಳೂರು ಕೆಎಸ್​ಆರ್​ಪಿ 9ನೇ ಬೆಟಾಲಿಯನ್​ ಕಮಾಂಡಂಟ್​ ಆಗಿ ಹಾಗೂ ಇಲ್ಲಿಯವರೆಗೆ 9ನೇ ಬೆಟಾಲಿಯನ್ ಕಮಾಂಡಂಟ್​ ಆಗಿದ್ದ ಎಸ್​.ಗಿರೀಶ್​ ಅವರನ್ನು ಚಿತ್ರದುರ್ಗ ಎಸ್​ಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net