

ನವದೆಹಲಿ: ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಐಎಎಸ್ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಯಿದು ಎಂಬ ಶೀರ್ಷಿಕೆಯಲ್ಲಿ ಕೆಲ ಕಠಿಣ ಪ್ರಶ್ನೆಗಳು ಹರಿದಾಡುತ್ತಿರುವುತ್ತವೆ. ಅಂತೆಯೇ ಅದಕ್ಕೆ ಕಂಡುಕೊಳ್ಳಲು ಓದುಗರು ಪ್ರಯತ್ನಪಟ್ಟಿದ್ದು ವರದಿಯಾಗಿರುತ್ತದೆ.
ಈಗ ಅಂಥದ್ದೇ ಒಂದು ಪ್ರಶ್ನೆ ಹಾಗೂ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಹಾಗಂಥ ಐಎಎಸ್ ಸಂದರ್ಶನದಲ್ಲಿ ಕೇಳಿದ ಪ್ರಶ್ನೆ ಎಂಬ ಹಣೆಪಟ್ಟಿ ಇದಕ್ಕಿಲ್ಲ. ಬದಲಾಗಿ, ಐಪಿಎಸ್ ಅಧಿಕಾರಿಯೊಬ್ಬರಿಗೆ ಯುಪಿಎಸ್ಸಿ ಪರೀಕ್ಷಾರ್ಥಿಯೊಬ್ಬರು ಕೇಳಿದ ಪ್ರಶ್ನೆಯಿದು. ಅವರು ನೀಡಿದ ಉತ್ತರ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಓಡಿಶಾ ಕೇಡರ್ನಲ್ಲಿ ಐಪಿಎಸ್ ಅಧಿಕಾರಿಯಾಗಿರುವ ಅರುಣ್ ಬೋಥ್ರಾ ಅವರಿಗೆ ಕೇಂದ್ರ ನಾಗರಿಕ ಸೇವಾ ಪರೀಕ್ಷೆ ಆಕಾಂಕ್ಷಿಯೊಬ್ಬರು ಒಂದೇ ಸಾಲಿನ ಉತ್ತರ ಬಯಸಿದ್ದರು. ಅಷ್ಟಕ್ಕೂ ಅವರ ಪ್ರಶ್ನೆ ಏನಾಗಿತ್ತು ಎಂದರೆ, ನಾನು ಯುಪಿಎಸ್ಸಿ ಪರೀಕ್ಷೆ ಸಜ್ಜಾಗುತ್ತಿದ್ದೇನೆ? ನನಗೆ ಒಂದೇ ಸಾಲಿನಲ್ಲಿ ನಿಮ್ಮ ಸಲಹೆ ಬೇಕು ಭಿನ್ನವಿಸಿಕೊಂಡಿದ್ದ.
ರಾಜು ಭೈಯ್ಯಾ ಎಂಬ ಖಾತೆಯಿಂದ ಕೇಳಲಾದ ಅಷ್ಟೇ ಸರಳವಾಗಿ ಉತ್ತರ ನೀಡಿದ್ದರು ಅರುಣ್. ' ನಿಮ್ಮ ಸ್ಮಾರ್ಟ್ಫೋನ್ಅನ್ನು ನೋಕಿಯಾ 5310 ಮಾದರಿಗೆ ಬದಲಾಯಿಸಿಕೊಳ್ಳಿ' ಎಂದು ಅವರು ಪ್ರತಿಕ್ರಿಯಸಿದ್ದರು.
ಬೇಕಾಗಿದ್ದೆಲ್ವೂ ಮೊಇಬೈಲ್ನಲ್ಲಿಯೇ ದೊರಕುತ್ತದೆ ಎಂಬ ಭ್ರಮೆಯಲ್ಲಿರುವ ಯುವಪೀಳೀಗೆ ಅಧ್ಯಯನದಿಂದ ವಿಮುಖವಾಗಿದೆ ಎಂಬುದು ಈ ಮಾತಿನ ಒಳಾರ್ಥವಾಗಿತ್ತು. ಹೀಗಾಗಿ ಹಳೆಯ ಮೊಬೈಲ್ ಬಳಸಿದರೆ ಸಾಮಾಜಿಕ ಜಾಲತಾಣದಿಂದ ದೂರವಾಗಿ ಓದಿ ಎಂಬುದನ್ನು ಅತ್ಯಂತ ಸರಳವಾಗಿ ಅವರು ಹೇಳಿದ್ದರು.