6.5 ಲಕ್ಷ ರೂ. ಮೌಲ್ಯದ IPL ಜರ್ಸಿಗಳು ಕಳವು! ವಾಂಖೆಡೆ ಸ್ಟೇಡಿಯಂ ಸೆಕ್ಯೂರಿಟಿ ಮ್ಯಾನೇಜರ್​ ವಿರುದ್ಧ ಕೇಸ್​ | IPL Jerseys

ವಿಜಯವಾಣಿ - 2025-07-29T121136.260
Published on

IPL Jerseys: ವಾಂಖೆಡೆ ಕ್ರೀಡಾಂಗಣದಲ್ಲಿರುವ ಬಿಸಿಸಿಐನ ಸರಕುಗಳ ಮಳಿಗೆಯಿಂದ ಬರೋಬ್ಬರಿ 6.52 ಲಕ್ಷ ರೂ. ಮೌಲ್ಯದ 261 ಐಪಿಎಲ್ ತಂಡದ ಜೆರ್ಸಿಗಳನ್ನು ಕದ್ದ ಆರೋಪದ ಮೇಲೆ ಇದೀಗ ಮುಂಬೈ ಪೊಲೀಸರು ಸೆಕ್ಯೂರಿಟಿ ಮ್ಯಾನೇಜರ್​ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೀರಾ ರಸ್ತೆ ಪೂರ್ವದ ನಿವಾಸಿ ಫಾರೂಕ್ ಅಸ್ಲಂ ಖಾನ್ (46) ಎಂಬಾತ ಆರೋಪಿಯಾಗಿದ್ದು, ಜೂನ್ 13ರಂದು ಅನುಮತಿಯಿಲ್ಲದೆ ಮಳಿಗೆಯೊಳಗೆ ಪ್ರವೇಶಿಸಿದ್ದಲ್ಲದೇ, ಅಲ್ಲಿದ್ದ ಐಪಿಎಲ್​ ತಂಡಗಳ ಜರ್ಸಿಗಳನ್ನು ಕಳ್ಳತನ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ನಡೆದ ಲೆಕ್ಕಪರಿಶೋಧನೆಯಲ್ಲಿ ಸ್ಟಾಕ್ ಮಿಸ್ಸಿಂಗ್​ ಆಗಿರುವುದು ಸ್ಪಷ್ಟವಾದ ಬೆನ್ನಲ್ಲೇ ಆರೋಪಿಗಾಗಿ ಬಲೆ ಬೀಸಲಾಯಿತು.

ಯಾರಿಗೂ ಒಳ ಪ್ರವೇಶಿಸಲು ಅನುಮತಿ ಇಲ್ಲದಿರುವಾಗ ಕಳ್ಳತನ ಹೇಗೆ ಸಾಧ್ಯವಾಯಿತು ಎಂದು ಮಳಿಗೆಗೆ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಜೆರ್ಸಿಗಳನ್ನು ಕದ್ದದ್ದು ಯಾರು ಎಂಬುದು ಬಯಲಾಗಿದೆ. ಸೆಕ್ಯೂರಿಟಿ ಮ್ಯಾನೇಜರ್​, ಜೆರ್ಸಿಗಳಿದ್ದ ಕಾರ್ಡ್ಬೋರ್ಡ್ ಪೆಟ್ಟಿಗೆಯನ್ನು ಹೊತ್ತೊಯ್ಯುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 306ರ ಅಡಿಯಲ್ಲಿ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿ, ತನಿಖೆಯನ್ನು ಕೈಗೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net