5ನೇ ಟೆಸ್ಟ್​ ಭಾರತ ಗೆದ್ದರೂ ಟ್ರೋಫಿ ಮಾತ್ರ ಇಂಗ್ಲೆಂಡ್​ಗೆ! ಹೇಗೆ ಅಂತೀರಾ? ಇಲ್ಲಿದೆ ನೋಡಿ ಅಚ್ಚರಿ ವರದಿ | IND vs ENG

ವಿಜಯವಾಣಿ - 2025-07-29T112307.944
Published on

IND vs ENG: ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಭಾಗವಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಪ್ರಸ್ತುತ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಇದೇ ಜುಲೈ 31ರಿಂದ ಆಗಸ್ಟ್ 4ರವರೆಗೆ ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯಲಿದ್ದು, ಈ ಪಂದ್ಯವನ್ನು ಭಾರತ ಗೆದ್ದರೂ ಸಹ ಟ್ರೋಫಿ ಮಾತ್ರ ಎತ್ತಿ ಹಿಡಿಯಲು ಸಾಧ್ಯವಿಲ್ಲ. ಇದಕ್ಕೆ ಒಂದು ಬಲವಾದ ಕಾರಣವೂ ಇದೆ.

ಐದನೇ ಪಂದ್ಯವನ್ನು ಭಾರತ ಗೆದ್ದು, ಸರಣಿಯನ್ನು 2-2 ಸಮಬಲಗೊಳಿಸಿದರೆ ಟ್ರೋಫಿ ಶುಭಮನ್​ ಗಿಲ್​ ತಂಡದ ಪಾಲಾಗಲಿದೆಯಾ? ಎಂಬ ಕುತೂಹಲ ಸದ್ಯ ಕ್ರಿಕೆಟ್​ ಪ್ರಿಯರಲ್ಲಿ ಕಾಡತೊಡಗಿದೆ. ಅಸಲಿಗೆ, ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿನ ಸಂಪ್ರದಾಯದ ಪ್ರಕಾರ, ಸರಣಿಯು ಡ್ರಾದಲ್ಲಿ ಕೊನೆಗೊಂಡರೆ, ಹಿಂದಿನ ಅಂದರೆ ಕಳೆದ ಆವೃತ್ತಿಯನ್ನು ಗೆದ್ದ ತಂಡವು ಈ ಟ್ರೋಫಿಯನ್ನು ಉಳಿಸಿಕೊಳ್ಳಲಿದೆ.

ಪ್ರಸ್ತುತ ಆ್ಯಂಡರ್ಸನ್-ತೆಂಡೂಲ್ಕರ್ ಟ್ರೋಫಿಯನ್ನು ಹಿಂದೆ ಪಟೌಡಿ ಟ್ರೋಫಿ ಎಂದು ಕರೆಯಲಾಗುತ್ತಿತ್ತು. 2021ರಲ್ಲಿ ನಡೆದ ಪಟೌಡಿ ಟ್ರೋಫಿ ಡ್ರಾದಲ್ಲಿ ಕೊನೆಗೊಂಡಿತು. ಆದರೆ, ಇಂಗ್ಲೆಂಡ್ 2018ರಲ್ಲಿ ಇದನ್ನು ಗೆದ್ದಿತು ಮತ್ತು ತಂಡವು ಟ್ರೋಫಿಯನ್ನು ತಮ್ಮಲ್ಲೇ ಉಳಿಸಿಕೊಂಡಿದೆ. ಆದಾಗ್ಯೂ, ಈ ಸರಣಿಯ ಹೆಸರನ್ನು ಬದಲಾಯಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ಹೀಗಾಗಿ, ಸರಣಿ ಡ್ರಾ ಆದರೆ, 2021ರಲ್ಲಿ ಟ್ರೋಫಿಯನ್ನು ಉಳಿಸಿಕೊಂಡಂತೆಯೇ ತಮ್ಮಲ್ಲೇ ಇಂಗ್ಲೆಂಡ್​ ಇಟ್ಟುಕೊಳ್ಳುತ್ತದೆಯೇ ಅಥವಾ ಗೊಲ್ ಪಡೆಯೊಂದಿಗೆ ಹಂಚಿಕೊಳ್ಳುತ್ತದೆಯೇ? ಎಂಬುದು ಕೌತುಕದ ಪ್ರಶ್ನೆ.

ಪ್ರಸ್ತುತ, ಈ ಸರಣಿ ಡ್ರಾದಲ್ಲಿ ಮುಕ್ತಾಯಗೊಂಡರೆ, ಹೊಸ ಟ್ರೋಫಿ ಯಾವ ತಂಡದ ಮುಡಿಗೆ ಸೇರಲಿದೆ ಎಂಬುದರ ಕುರಿತು ಬಿಸಿಸಿಐ ಆಗಲಿ ಅಥವಾ ಇಸಿಬಿ ಆಗಲಿ, ಇಲ್ಲಿಯವರೆಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net