ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಮೂವರ ಸೆರೆ

web 2
Published on

ಶಿವಮೊಗ್ಗ: ಐಪಿಎಲ್​ನ ಕೊನೇ ಲೀಗ್ ಪಂದ್ಯದ ಮುಂಬೈ ಇಂಡಿಯನ್ಸ್ ಮತ್ತು ಸನ್​ರೈಸಸ್ ಹೈದರಬಾದ್ ತಂಡಗಳ ನಡುವಿನ ರೋಚಕ ಪಂದ್ಯದ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸರು ಮೂವರನ್ನು ಬಂಧಿಸಿ, 2.21ಲಕ್ಷ ರೂ. ನಗದು ಹಾಗೂ 3 ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ರಾಗಿಗುಡ್ಡದ ಶಾಂತಿನಗರ 1ನೇ ಕ್ರಾಸ್​ನ ಅಜೇಯ (35), ಗೋಪಾಳ ದ್ರೌಪದಮ್ಮ ಸರ್ಕಲ್ ಬಳಿಯ ಕಿರಣ್ (32) ಹಾಗೂ ರಾಗಿಗುಡ್ಡ 1ನೇ ಕ್ರಾಸ್​ನ ಸಂದೀಪ್(28) ಬಂಧಿತರು. ಬಂಧಿತರ ಪೈಕಿ ಅಜೇಯ ಮತ್ತು ಸಂದೀಪ್ ಪ್ರತ್ಯೇಕವಾಗಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದರೆ, ಕಿರಣ್ ಫೈನಾನ್ಸ್​ವೊಂದರಲ್ಲಿ ಕೆಲಸ ಮಾಡುತ್ತಿದ್ದನು. ಆರೋಪಿಗಳು ಜಯನಗರ ಠಾಣಾ ವ್ಯಾಪ್ತಿಯ ತಿಲಕ್​ನಗರ ಮುಖ್ಯ ರಸ್ತೆಯ ವಿಶ್ವೇಶ್ವರಯ್ಯ ಕಾಂಪ್ಲೆಕ್ಸ್​ನಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಆರೋಪಿಗಳು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಸಿಇಎನ್ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್ ಕೆ.ಟಿ.ಗುರುರಾಜ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ದಾಖಲಿಸಿ, ಆರೋಪಿಗಳನ್ನು ದಸ್ತಗಿರಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net