

ಬಸವನಬಾಗೇವಾಡಿ: ಶ್ರಾವಣ ಮಾಸದ ನಿಮಿತ್ತ ಪಟ್ಟಣದಲ್ಲಿ ಒಂದು ತಿಂಗಳು ಪ್ರವಚನ ಹಮ್ಮಿಕೊಂಡಿದ್ದು, ಪ್ರವಚನಾರರಾಗಿ ಅಥಣಿಯ ಮೊರಟಗಿ ಮಠದ ಪ್ರಭು ಚನ್ನಬಸವ ಶ್ರೀಗಳಿಗೆ ಬಸವೇಶ್ವರ ಸೇವಾ ಸಮಿತಿ ಸದಸ್ಯರು ಆಹ್ವಾನ ನೀಡಿದರು.
ಭಕ್ತರ ಆಹ್ವಾನ ಸ್ವೀಕರಿಸಿ ಮಾತನಾಡಿದ ಶ್ರೀಗಳು, ನಾಡಿನ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ 25 ವರ್ಷಗಳಿಂದ ಬಸವಾದಿ ಶರಣರ ಜೀವನ ಚರಿತ್ರೆ ಕುರಿತು ಪ್ರವಚನ ಹೇಳಿದ್ದೇನೆ. ಆದರೆ, ವಿಶ್ವಗುರು ಬಸವಣ್ಣನವರ ಜನ್ಮಸ್ಥಳದಲ್ಲಿ ಪ್ರವಚನ ಮಾಡುವ ಭಾಗ್ಯ ಸಿಕ್ಕಿದ್ದು ಪೂರ್ವಜನ್ಮದ ಪುಣ್ಯವೇ ಸರಿ ಎಂದರು.
ಜು. 23 ರಿಂದ ಆ. 23ರ ವರೆಗೆ ಬಸವೇಶ್ವರ ದೇವಸ್ಥಾನದ ಅಂತಾರಾಷ್ಟ್ರೀಯ ಸಿಬಿಎಸ್ಸಿ ಶಾಲೆ ಆವರಣದಲ್ಲಿ ಬಸವ ತತ್ವ ದರ್ಶನ ಕುರಿತು ಶ್ರೀಗಳು ಪ್ರವಚನ ನೀಡಲಿದ್ದಾರೆ. ಆ. 11 ರಿಂದ 15ರ ವರೆಗೆ ಮೂಲನಂದೀಶ್ವರ ಬಸವೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಬಸವೇಶ್ವರ ಸೇವಾ ಸಮಿತಿ ಅಧ್ಯ ಈರಣ್ಣ ಪಟ್ಟಣಶೆಟ್ಟಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಬಸವ ಸೈನ್ಯ ಸಂಸ್ಥಾಪಕ ಅಧ್ಯ ಶಂಕರಗೌಡ ಬಿರಾದಾರ, ಬಸವೇಶ್ವರ ಸೇವಾ ಸಮಿತಿ ಸದಸ್ಯರಾದ ಎಂ.ಜಿ. ಆದಿಗೊಂಡ, ಬಸವರಾಜ ಗೊಳಸಂಗಿ, ಸಿ.ಎಸ್. ಪಾಟೀಲ, ಡಾ.ಬಸವರಾಜ ಕೋಟಿ, ಅನಿಲ ಅಗರವಾಲ, ನ್ಯಾಯವಾದಿ ರವಿ ರಾಠೋಡ ಇದ್ದರು.