ಬೆಂಗಳೂರು: ೨೦೨೩-೨೪ನೇ ಶೈಕ್ಷಣಿಕ ಸಾಲಿಗೆ ಸ್ನಾತಕೋತ್ತರ ಪದವಿ/ಬಿ.ಪಿ.ಎಡ್ ಕೋರ್ಸುಗಳ ಪ್ರವೇಶಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯವು ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು ಯುಯುಸಿಎಂಎಸ್ ಆನ್‌ಲೈನ್ ಪೋರ್ಟಲ್ ಆದ https://uucms.karnataka.gov.in/login/index ಅರ್ಜಿಗಳನ್ನು ಸಲ್ಲಿಸಬೇಕು. ಅ.೨೧ ರೊಳಗೆ ದಂಡಶುಲ್ಕವಿಲ್ಲದೆ ಅರ್ಜಿ ಸಲ್ಲಿಸಬಹುದು. ಅ.೨೪ ರವರೆಗೂ ದಂಡಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ವಿವಿಯ ವೆಬ್‌ಸೈಟ್ ವೀಕ್ಷಿಸಬಹುದು ಎಂದು ಬೆಂವಿವಿ ಪ್ರಕಟಣೆಯಲ್ಲಿ ತಿಳಿಸಿದೆ.