

ಸರಗೂರು: ಸಂವಿಧಾನದ ಆಶಯಗಳನ್ನು ಬೆಂಬಲಿಸಬೇಕು ಎಂದು ದಸಂಸ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಕೂಡಿಗಿ ಗೋವಿಂದರಾಜು ತಿಳಿಸಿದರು. ಪ್ರಜಾಪ್ರಭುತ್ವ ಉಳಿವಿಗಾಗಿ ನ.28 ರಂದು ಮೈಸೂರಿನಲ್ಲಿ ಸಂವಿಧಾನ ರಕ್ಷಣೆಗಾಗಿ, ಪ್ರಜಾಪ್ರಭುತ್ವ ಉಳಿವಿಗಾಗಿ ನಡೆಯಲಿರುವ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶದ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಅವರು ಮುಖಂಡರಿಗೆ ಆಮಂತ್ರಣ ಪತ್ರ ವಿತರಿಸಿ ಮಾತನಾಡಿದರು.
ಸಮಾವೇಶಕ್ಕೆ ಗ್ರಾಮಾಂತರ ಭಾಗದಿಂದ 150 ರಿಂದ 200 ಜನರು ಭಾಗವಹಿಸಲಿದ್ದಾರೆ ಎಂದರು.
ಹೊಸ ಆರ್ಥಿಕ ನೀತಿಗಳಿಂದ ಬಂಡವಾಳಶಾಹಿಗಳು ಮೇಲುಗೈ ಸಾಧಿಸುತ್ತಿದ್ದಾರೆ. ಹೀಗಾಗಿ ಮೀಸಲಾತಿಯಂತಹ ಸಾಮಾಜಿಕ ನ್ಯಾಯದ ಪರಿಕಲ್ಪನೆ ಧಕ್ಕೆ ಉಂಟಾಗಿದೆ. ಹೀಗೆ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನಗಳು ಕೇಂದ್ರ ಸರ್ಕಾರದಿಂದ ನಡೆಯುತ್ತವೆ ಎಂದು ದೂರಿದರು.
ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಜನರು ಸ್ಪಂದಿಸುವುದನ್ನೇ ಮರೆತುಬಿಟ್ಟಿದ್ದಾರೆ.ಇಂತಹ ಸಂವೇದನಾ ರಹಿತ ಸಮಾಜದಲ್ಲಿ ಸಂವಿಧಾನ ಸಂವಿಧಾನದ ಮೌಲ್ಯಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿ ಬೆಳೆಸಬೇಕಾಗಿದೆ.ದೇಶದ ವರ್ತಮಾನ ಮತ್ತು ಭವಿಷ್ಯದ ದೃಷ್ಟಿಯಿಂದ ಇದು ಅತಿ ಅಗತ್ಯವಾಗಿದೆ ಎಂದರು.
ನಂತರ ಅವರು ಹಾದನೂರು, ಮಸಹಳ್ಳಿ .ಲಿಂಗೇನಹಳ್ಳಿ.ದೇವಲಾಪುರ.ಕಲ್ಲಹಳ್ಳ, ಕೂಡಿಗಿ, ಕುರ್ಣೇಗಾಲ, ಹೂವಿನಕೊಳ, ಮನುಗನಹಳ್ಳಿ, ಶಾಂತಿಪುರ, ಹುಣ್ಣಸಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಆಮಂತ್ರಣ ಪತ್ರ ವಿತರಿಸಿದರು.
ತಾಲೂಕು ಸಂಘಟನಾ ಸಂಚಾಲಕರಾದ ಮಣಿಕಂಠ, ಮೊಳೆಯೂರು ಕಾವಲ್ ನಾಗೇಂದ್ರ, ಹೋಬಳಿ ಸಂಚಾಲಕ ಕೃಷ್ಣ ಕುರ್ಣೇಗಾಲ, ವೆಂಕಟರಾಮು, ಭಾನುಪ್ರಕಾಶ್, ಮಹದೇವಮೂರ್ತಿ, ದೇವರಾಜು, ನವೀನ್,ಸಿದ್ದಪ್ಪ, ಶಿವು ಇತರರು ಹಾಜರಿದ್ದರು.