15,441 ಕೋಟಿ ರೂ ಹೂಡಿಕೆ ಯೋಜನೆಗಳಿಗೆ ಒಪ್ಪಿಗೆ |5277 job creation

IMG-20250528-WA0034
Published on

ಬೆಂಗಳೂರು: ರಾಜ್ಯದಲ್ಲಿ ಹೊಸ ಬಂಡವಾಳ ಹೂಡಿಕೆ ಯೋಜನೆಗಳು ಹಾಗೂ 2 ಹೆಚ್ಚುವರಿ ಬಂಡವಾಳ ಹೂಡಿಕೆ / ತಿದ್ದುಪಡಿ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದ್ದು,  ಇದರಿಂದ ರಾಜ್ಯದಲ್ಲಿ ₹15,441.17 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 5,277 ಜನರಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ  ಬುಧವಾರ ಇಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡುವ ಸಮಿತಿಯ 65 ನೇ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಶ್ರೀ ಸಿಮೆಂಟ್‌ ಲಿಮಿಟೆಡ್‌ನ  ₹ 2,406 ಕೋಟಿ,  ದಾಲ್ಮಿಯಾ ಸಿಮೆಂಟ್‌ (ಭಾರತ್‌) ಲಿಮಿಟೆಡ್‌ನ ₹ 3,000  ಕೋಟಿ , ದಾಲ್ಮಿಯಾ ಸಿಮೆಂಟ್‌ (ಭಾರತ್‌) ಲಿಮಿಟೆಡ್‌ನ   ₹ 3020 ಕೋಟಿ ಮೊತ್ತದ  ಇನ್ನೊಂದು ಯೋಜನೆ ಹಾಗೂ ಎಂವೀ ಎನರ್ಜಿ ಪ್ರೈವೇಟ್‌ ಲಿಮಿಟೆಡ್‌ನ ₹ 5,495  ಕೋಟಿ  ಸೇರಿದಂತೆ ಒಟ್ಟಾರೆ ₹ 13,921 ಕೋಟಿ ಮೊತ್ತದ   ಹೊಸ ಬಂಡವಾಳ ಹೂಡಿಕೆಯ   ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಇವುಗಳಿಂದ ರಾಜ್ಯದಲ್ಲಿ ಒಟ್ಟಾರೆ  3,948  ಹೊಸ   ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.

ಹೆಚ್ಚುವರಿ ಬಂಡವಾಳ ಹೂಡಿಕೆ

ಕಲರ್‌ಟೋನ್‌ ಟೆಕ್ಸ್‌ಟೈಲ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ₹190.17 ಕೋಟಿ, ಬಾಷ್‌ ಅಟೊಮೋಟಿವ್‌ ಎಲೆಕ್ಟ್ರಾನಿಕ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ₹1,330 ಕೋಟಿ ಸೇರಿದಂತೆ ಒಟ್ಟು ₹1520.17 ಕೋಟಿ ಮೊತ್ತದ  ಹೆಚ್ಚುವರಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೂ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಇದರಿಂದ  1329 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ತಿದ್ದುಪಡಿ ಯೋಜನೆಗಳ ಪ್ರಸ್ತಾವನೆಗಳನ್ನು ಕಾರ್ಯಗತಗೊಳಿಸಲು   ಸಮಯ  ವಿಸ್ತರಣೆಗೆ ಮತ್ತು ಹೆಚ್ಚುವರಿ ಭೂಮಿ  ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಮಿತಿಯು ಒಪ್ಪಿಗೆ ನೀಡಿದೆ.

ಅನುಮೋದಿತ ಪ್ರಸ್ತಾವನೆಗಳು

1.   ಜೆಎಸ್‌ಡಬ್ಲು ನಿಯೊ ಎನರ್ಜಿ ಲಿಮಿಟೆಡ್ - 300 ಮೆಗಾವಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆ

 2.  ಎಕ್ಸೈಡ್ ಇಂಡಸ್ಟ್ರೀಸ್ ಲಿಮಿಟೆಡ್ -ಅತ್ಯಾಧುನಿಕ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್- ಹಂತ-2 ರಲ್ಲಿ 20 ಎಕರೆ ಹೆಚ್ಚುವರಿ ಭೂಮಿ ಹಂಚಿಕೆ.

 3. ಎಸ್‌ಎಲ್‌ಆರ್ ಮೆಟಾಲಿಕ್ಸ್ ಲಿಮಿಟೆಡ್ - 2027-28 ರವರೆಗೆ 2 ಹಂತಗಳಲ್ಲಿ ಯೋಜನೆಯ ಅನುಷ್ಠಾನ

 4.  ರಸಶ್ರೀ ಟೆಕ್ ಪಾರ್ಕ್ ಎಲ್‌ಎಲ್‌ಪಿ - ಇಂಟಿಗ್ರೇಟೆಡ್ ಟೌನ್‌ಶಿಪ್ ಸ್ಥಾಪನೆ

 5. ವನ್ಯಾ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ – ಮೃದು ಕಬ್ಬಿಣ,   ರೋಲಿಂಗ್ ಮಿಲ್,  34 ಮೆಗಾವಾಟ್‌ ಸಾಮರ್ಥ್ಯದ ವಿದ್ಯುತ್‌ ಉತ್ಪಾದನಾ ಸ್ಥಾವರ ಸ್ಥಾಪನೆ

6. ಇಂಡಿಯನ್ ಕೇನ್ ಪವರ್ ಲಿಮಿಟೆಡ್‌-  ಸಕ್ಕರೆ ಕಾರ್ಖಾನೆ ಹಾಗೂ 70 ಮೆಗಾವಾಟ್‌ ಸಾಮರ್ಥ್ಯದ   ವಿದ್ಯುತ್‌ ಉತ್ಪಾದನಾ ಸ್ಥಾವರ ಸ್ಥಾಪನೆ

7. ಖಯಾತಿ ಪೈಪ್ಸ್ ಆ್ಯಂಡ್‌ ಪವರ್ ಪ್ರೈವೇಟ್ ಲಿಮಿಟೆಡ್‌ನ ಸಮಗ್ರ  ಉಕ್ಕು ಸ್ಥಾವರ

8. ಜಿಎಂ ಶುಗರ್ ಆ್ಯಂಡ್‌ ಎನರ್ಜಿ ಲಿಮಿಟೆಡ್‌ನ ಉತ್ಪಾದನಾ ಸಾಮರ್ಥ್ಯ ಹೆಚ್ಚಳ

9. ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್‌ನ - ಲೈಮ್‌ಸ್ಟೋನ್ ಉತ್ಪಾದನಾ ಘಟಕ  ಸ್ಥಾಪನೆ

 10.  ಯುಫ್ಲೆಕ್ಸ್ ಲಿಮಿಟೆಡ್‌ನ - ಪಾಲಿಯೆಸ್ಟರ್ ಫಿಲ್ಮ್ ತಯಾರಿಕಾ ಘಟಕ ಸ್ಥಾಪನೆ.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌, ಸಚಿವರಾದ ಎಂ. ಬಿ. ಪಾಟೀಲ, ಕೆ. ಜೆ. ಜಾರ್ಜ್‌, ಪ್ರಿಯಾಂಕ್‌ ಖರ್ಗೆ, ಎನ್‌. ಚಲುವರಾಯಸ್ವಾಮಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌,  ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ, ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ ಸಿಂಗ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net