'ಮೂವರ ಬಂಧನಕ್ಕೇ ಸೀಮಿತವಾಗಿಲ್ಲ, ತನಿಖೆ ನಡೆಯುತ್ತಿದೆ': ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ

trudo
Published on

ಟೊರೊಂಟೊ:ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ತನಿಖೆಯು ಮೂವರು ಭಾರತೀಯ ಪ್ರಜೆಗಳ ಬಂಧನಕ್ಕೆ ಮಾತ್ರ ಸೀಮಿತವಾಗಿಲ್ಲ ಇನ್ನೂ ಮುಂದುವರೆದಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.

ನಿಜ್ಜರ್ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮೂವರು ಭಾರತೀಯ ಪ್ರಜೆಗಳನ್ನು ಇತ್ತೀಚೆಗೆ ಬಂಧಿಸಿದ ನಂತರ ಕೆನಡಾ ಪ್ರಧಾನಿ ಹೇಳಿಕೆ ಹೊರಬಂದಿವೆ. ಭಾನುವಾರ(ಮೇ 5) ರಾಯಲ್ ಒಂಟಾರಿಯೊ ಮ್ಯೂಸಿಯಂನಲ್ಲಿ ನಡೆದ ಸಿಖ್ ಫೌಂಡೇಶನ್ ಆಫ್ ಕೆನಡಾದ ಶತಮಾನೋತ್ಸವ ಗಾಲಾ ಸಮಾರಂಭದಲ್ಲಿ ಟ್ರೂಡೊ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಿದ ಬಂಧನಗಳನ್ನು ಅಂಗೀಕರಿಸುವ ಮೂಲಕ ಮಾತು ಪ್ರಾರಂಭಿಸಿದರು, ತನಿಖೆ ಮುಂದುವರೆದಿದೆ ಎಂದು ಒತ್ತಿ ಹೇಳಿದರು.

ಭಾರತ ಸರ್ಕಾರವು ಬಂಧಿತರಿಗೆ ಇರುವ ಗ್ಯಾಂಗ್ ಸಂಪರ್ಕಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲ್ಲೇ ಟ್ರುಡೊ ಹೇಳಿಕೆ ಮಹತ್ವಪಡೆದುಕೊಂಡಿದೆ. ತನಿಖೆಯ ಮಧ್ಯೆ ನಿಜ್ಜರ್ ಹತ್ಯೆಯಲ್ಲಿ ಬಂಧಿತರಾಗಿರುವ ಮೂವರ ಛಾಯಾಚಿತ್ರಗಳನ್ನು ಕೆನಡಾದ ಪೊಲೀಸರು ಶನಿವಾರ ಬಿಡುಗಡೆ ಮಾಡಿದ್ದರು.

ಕೆನಡಾದ ಮಾಧ್ಯಮಗಳಲ್ಲಿ ಊಹಾಪೋಹಗಳು ವರದಿಯಾದಂತೆ ಭಾರತ ಸರ್ಕಾರ ಅಥವಾ ಅಧಿಕಾರಿಗಳೊಂದಿಗೆ ಬಂಧಿತರಿಗೆ ಇರುವ ಯಾವುದೇ ಸಂಪರ್ಕದ ಬಗ್ಗೆ ಕೆನಡಾ ಪೊಲೀಸರು ಯಾವುದೇ ಪುರಾವೆಗಳನ್ನು ನೀಡಿಲ್ಲ. ಭಾರತವು ಪದೇ ಪದೇ ಆರೋಪಗಳನ್ನು ನಿರಾಕರಿಸಿದೆ, ಅವುಗಳನ್ನು "ಅಸಂಬದ್ಧ ಮತ್ತು ಪ್ರೇರಿತ" ಎಂದು ಬಣ್ಣಿಸಿದೆ.

ಸದೃಢ ಮತ್ತು ಸ್ವತಂತ್ರ ನ್ಯಾಯ ವ್ಯವಸ್ಥೆ ಹೊಂದಿರುವ ರಾಷ್ಟ್ರ ನಮ್ಮದು. ಇದರ ಜೊತೆಗೆ ನಮ್ಮ ಎಲ್ಲಾ ನಾಗರಿಕರನ್ನು ರಕ್ಷಿಸುವ ಮೂಲಭೂತ ಬದ್ಧತೆ ನಮ್ಮ ಮೇಲಿದೆ. ಅನೇಕ ಕೆನಡಿಯನ್ನರು, ವಿಶೇಷವಾಗಿ ಸಿಖ್ ಸಮುದಾಯದ ಸದಸ್ಯರು ಅಸಮರ್ಥತೆಯನ್ನು ಅನುಭವಿಸುತ್ತಿದ್ದಾರೆ ಎಂದು ನನಗೆ ತಿಳಿದಿದೆ. ಬಹುಶಃ ಇದೀಗ ಭಯಭೀತರಾಗಿದ್ದಾರೆ ಎಂದು ಟ್ರುಡೊ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net