ಆರ್‌ಟಿಐ ಕಾರ್ಯಕರ್ತರ ಆಸ್ತಿ ತನಿಖೆಯಾಗಲಿ

crime
Published on


ಮೈಸೂರು:
ಮಾಹಿತಿ ಹಕ್ಕು ಕಾಯ್ದೆಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ರೀತಿ ಅವರು ಅಪಾರ ಪ್ರಮಾಣದ ಆಸ್ತಿಗಳನ್ನು ಅಕ್ರಮವಾಗಿ ಸಂಪಾದಿಸುತ್ತಿದ್ದು, ಮುಡಾ ಹಗರಣ ಕುರಿತಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಟಿ.ಜೆ.ಅಬ್ರಾಹಂ, ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಅವರು ಎಷ್ಟೆಷ್ಟು ಆಸ್ತಿ ಗಳಿಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ದೇವಗಳ್ಳಿ ಸೋಮಶೇಖರ್ ಆಗ್ರಹಿಸಿದರು.
ಆಡಳಿತದಲ್ಲಿ ಪಾರದರ್ಶಕತೆ ಇರಬೇಕು, ಎಲ್ಲರೂ ಮಾಹಿತಿ ತಿಳಿಯಬೇಕು ಎಂಬ ಕಾರಣದಿಂದ ಆರ್‌ಟಿಐ ಕಾಯ್ದೆ ಇದೆ. ಆದರೆ, ಮುಡಾ ಹಗರಣದಲ್ಲಿ ಸಿಎಂ ಅವರಿಂದ ಯಾವುದೇ ಅನ್ಯಾಯ ಆಗಿರದಿದ್ದರೂ, ಯಾರ ಆಸ್ತಿ ಕಬಳಿಸದಿದ್ದರೂ ಆರ್‌ಟಿಐ ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ಏಕಾಏಕಿ ರಾಜ್ಯಪಾಲರು ನೋಟಿಸ್ ನೀಡಿ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸರಿಯಲ್ಲ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖಂಡರಾದ ಶಾದನಹಳ್ಳಿ ನಾರಾಯಣ, ಕಾಂತರಾಜು ಅರ್ಜುನಹಳ್ಳಿ, ಪ್ರಸನ್ನ ತಳೂರು, ಬೆಲವತ್ತ ರಾಮಚಂದ್ರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net