

ಕೋಲಾರ: ಆತುರ ಬಿದ್ದು ಹಣ ದೋಚುವ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಬೇಡಿ, ಅದು ಅಪಾಯಕಾರಿ. ಹೂಡಿಕೆ ಮಾಡುವ ಮುನ್ನ ಆಲೋಚನೆ ಮಾಡಿ ವ್ಯವಹಾರಕ್ಕೆ ಮುಂದಾಗಿ, ಮೋಸ ಮಾಡುವವರಿದ್ದು ಎಚ್ಚರಿದಿಂದ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಹೇಳಿದರು.
ತಾಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಲಘು ವಾಹನ ಚಾಲನೆ, ಹೊಲಿಗೆಯಂತ್ರ ಹಾಗೂ ಬ್ಯೂಟಿಪಾರ್ಲರ್ ನಿರ್ವಹಣೆ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿ, ಹಗರಣಗಳು ಮಾಡುವ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗುವ ಸ್ಥಿತಿಯಿಂದ ತಪ್ಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜೀವನದಲ್ಲಿ ಎಷ್ಟೇ ಅಡೆತಡೆಗಳು ಬಂದರೂ, ಆತ್ಮಸ್ಥೆ$ರ್ಯರ್ಯದೊಂದಿಗೆ ಮುನ್ನುಗುವ ಶಕ್ತಿ ಇರಬೇಕು. ಆತ್ಮವಿಶ್ವಾಸ ಕೊರತೆಯಾದಾಗ ನಮ್ಮಲ್ಲಿ ಬದಲಾವಣೆ ಕಾಣುವುದು ಅಸಾಧ್ಯದ ಮಾತು. ಬೇರೆಯವರ ಟೀಕೆ, ವಿಮರ್ಶೆಗಳಿಗೆ ಎದೆಗುಂದದೆೆ, ಛಲದಿಂದ ಜೀವನ ಸಾಗಿಸಿದಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ ಎಂದು ತಿಳಿಸಿದರು.
ಸ್ವ&ಉದ್ಯೋಗದಲ್ಲಿ ಅಭಿವೃದ್ಧಿಯಾಗಬೇಕಾದರೆ ಗುಣಮಟ್ಟ, ನಿಗದಿತ ಸಮಯಕ್ಕೆ ಸೇವೆ ಕಾಯ್ದುಕೊಳ್ಳುವುದರ ಜತೆಗೆ ಗ್ರಾಹಕರನ್ನು ಅತ್ಯಂತ ಆತ್ಮೀಯತೆ, ಗೌರವದಿಂದ ಕಾಣಬೇಕು. ನಮ್ಮ ಮೇಲೆ ನಂಬಿಕೆ, ವಿಶ್ವಾಸ ಇರುವವರೆಗೆ ಸ್ವ ಉದ್ಯೋಗದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು.
ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅಶ್ವಿನ್ಕುಮಾರ್ ಮಾತನಾಡಿ, ಸತತ ಶ್ರಮ ಮತ್ತು ತಾಳ್ಮೆಯೇ ನಮ್ಮ ಯಶಸ್ಸಿನ ಮೂಲ ಮಂತ್ರಗಳು. ಪ್ರಾಮಾಣಿಕತೆ, ನಿಷ್ಠೆ, ಶ್ರದ್ದೆ ಇದ್ದರೆ, ಖಂಡಿತವಾಗಿ ಸ್ವ ಉದ್ಯೋಗದಲ್ಲಿ ಬೆಳೆಯಲು ಅವಕಾಶಗಳಿವೆ ಎಂದು ಸಲಹೆ ತಿಳಿಸಿದರು.
ತರಬೇತಿ ಸಂಸ್ಥೆಯ ನಿರ್ದೇಶಕ ಸಿ.ಯಲ್ಲೇಶ್ ಮಾತನಾಡಿ, ತರಬೇತಿ ಪಡೆದ ಶಿಬಿರಾರ್ಥಿಗಳು ವೃತ್ತಿಯನ್ನು ಆರಂಭಿಸಿ, ಆರ್ಥಿಕವಾಗಿ ಸದೃಢರಾಗುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ತರಬೇತುದಾರರಾದ ಕೆ.ವಿ.ವಿಜಯ್ಕುಮಾರ್, ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ, ಎನ್.ವಿ.ನಾರಾಯಣಸ್ವಾಮಿ, ಯು.ಆರ್.ಅರ್ಪಿತಾ, ಹರೀಶ್, ನಿರಂಜನ್ ಇದ್ದರು.