

| ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು
- ಖಂಡಿತ ಇಲ್ಲ. ನಾನು ಸಿನಿಮಾ ಕಥೆ ಕೇಳುತ್ತಿದ್ದೇನೆ. ಆದರೆ, ಇನ್ನೂ ಯಾವುದೂ ಫೈನಲ್ ಆಗಿಲ್ಲ. ಬಹುತೇಕ ಹೊಸಬರೇ ಬರುತ್ತಿರುವ ಕಾರಣ, ಬಜೆಟ್ ಇಲ್ಲ, ರಿಲೀಸ್ ಆದಮೇಲೆ ಬರುವ ಹಣದಲ್ಲಿ ಸಂಭಾವನೆ ಕೊಡುತ್ತೇವೆ, ಶೇರ್ ಕೊಡುತ್ತೇವೆ ಎನ್ನುತ್ತಾರೆ. ಈಗಿನ ಪರಿಸ್ಥಿತಿಯಲ್ಲಿ ಸಿನಿಮಾ ರಿಲೀಸ್ ಆಗುವುದೇ ಕಷ್ಟ. ಥಿಯೇಟರ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿವೆ.
- ದೊಡ್ಡ ಹೀರೋಗಳಾದರೆ ಅವರಿಗೆ ಶೇರ್ ಓಕೆ. ಥಿಯೇಟರ್ ಶೇರ್, ಟಿವಿ ರೈಟ್ಸ್, ಓಟಿಟಿ ಹಕ್ಕು ಅಂತ ಹೇಗೋ ಹಣ ಮಾಡಿಕೊಳ್ಳುತ್ತಾರೆ. ಆದರೆ, ಹೊಸಬರಿಗೆ ಆ ಅವಕಾಶಗಳು ದೊರೆಯುವುದೂ ಕಷ್ಟ. ಇನ್ನು ಕೆಲವರು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡುತ್ತೇವೆ ಎನ್ನುತ್ತಾರೆ. ಆದರೆ, ಕನ್ನಡ ಚಿತ್ರಗಳಿಗೆ ಓಟಿಟಿಯಲ್ಲಿ ದೊಡ್ಡ ಮಟ್ಟದ ವೇದಿಕೆ ದೊರೆಯುತ್ತಿಲ್ಲ.
- ನಾನು ಪರಭಾಷೆಗಳಿಗೆ ಹೋಗಲು ಪ್ರಯತ್ನಿಸಿಲ್ಲ. ಕನ್ನಡದಲ್ಲೇ ಉತ್ತಮ ಅವಕಾಶಗಳಿಗೆ ಕಾದು, ಒಳ್ಳೆಯ ಸಿನಿಮಾನೇ ಮಾಡುತ್ತೇನೆ.
- ಹೌದು, ‘ಕಾಣದಂತೆ ಮಾಯವಾದನು’ ಚಿತ್ರ ರಿಲೀಸ್ ಆದ ಒಂದು ತಿಂಗಳಿಗೆ ಕೋವಿಡ್ ಮೊದಲ ಅಲೆ ಬಂತು. ಹಾಗೇ ‘ಕೃಷ್ಣ ಟಾಕೀಸ್’ ಬಿಡುಗಡೆ ಸಮಯದಲ್ಲಿ ಎರಡನೇ ಅಲೆ ಬಂತು. ನಾನೇನೋ ಕಥೆ, ಪಾತ್ರ ಇಷ್ಟವಾದರೆ ನಟಿಸಲು ಸಿದ್ಧ. ನನ್ನಲ್ಲಿ ಸಿನಿಮಾ ಬಗ್ಗೆ ಮೊದಲು ಭರವಸೆ, ಆತ್ಮವಿಶ್ವಾಸ ಮೂಡಬೇಕು.
- ಹೌದು, ಕಳೆದ ಎರಡು ವರ್ಷಗಳಲ್ಲಿ ನಾನು ಎರಡು ವೆಬ್ಸರಣಿಗಳಲ್ಲಿ ನಟಿಸಿದ್ದೇನೆ. ‘ಪದ್ಮವ್ಯೂಹ’ ಹಾಗೂ ‘ಡ್ರೀಮರ್ಸ್’ ಎರಡೂ ಓಟಿಟಿಯಲ್ಲಿ ಬಿಡುಗಡೆ ಯಾಗಿವೆ.
- ಮುಂದೆ ಏನು ಅಂತ ನಾನೂ ಕಾಯುತ್ತಿದ್ದೇನೆ. ನನ್ನ ಬಳಿ ಸದ್ಯಕ್ಕಂತೂ ಉತ್ತರವಿಲ್ಲ. ಆದಷ್ಟು ಬೇಗೆ ಒಂದೊಳ್ಳೆ ಪ್ರಾಜೆಕ್ಟ್ ಸೈನ್ ಮಾಡಿ ಖಂಡಿತ ತಿಳಿಸುತ್ತೇನೆ...