

ಮುಂಬೈ: ಅಕ್ರಮವಾಗಿ ಸಾಗಿಸಲಾಗುತ್ತಿದ್ದ 20.6 ಲಕ್ಷ ರೂಪಾಯಿ ಮೌಲ್ಯದ 21,018 ಕೆಜಿ ಗೋಮಾಂಸವನ್ನು ಮಹಾರಾಷ್ಟ್ರದ ಪಾಲಗಡ್ ಜಿಲ್ಲಾ ಪೊಲೀಸರು ಜಪ್ತಿಪಡಿಸಿಕೊಂಡಿದ್ದಾರೆ. ಈ ಸಂಬಂಧವಾಗಿ ತಮಿಳುನಾಡಿನ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಕಂಟೈನರ್ ಟ್ರಕ್ನಲ್ಲಿ ಸಾಗಿಸಲಾಗುತ್ತಿರುವ ಸರಕಿನ ಬಗ್ಗೆ ಸುಳ್ಳು ಘೋಷಣಾ ಪತ್ರ ಹಿಡಿದು, ಗೋಮಾಂಸ ಕಳ್ಳ ಸಾಗಣೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳು ಪೊಲೀಸರು ಪರಿಶೀಲನೆ ನಡೆಸಲು ಮುಂದಾದಾಗ, ಪರಾರಿಯಾಗಲು ವಿಫಲ ಪ್ರಯತ್ನ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಗೋಹತ್ಯೆ ಮತ್ತು ಗೋಮಾಂಸ ಸಾಕಾಣಿಕೆ ಅಪರಾಧವಾಗಿದ್ದು, ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್)