ನ್ಯೂಯಾರ್ಕ್​ನ ಮೊದಲ ಮುಸ್ಲಿಂ ಮೇಯರ್​ ಆಗಿ ಭಾರತೀಯ ಮೂಲದ ಜೊಹ್ರಾನ್​ ಮಮ್ದಾಮಿ ಪ್ರಮಾಣ ವಚನ! Zohran Mamdani

ನ್ಯೂಯಾರ್ಕ್​ನ ಮೊದಲ ಮುಸ್ಲಿಂ ಮೇಯರ್​ ಆಗಿ ಜೊಹ್ರಾನ್​ ಮಮ್ದಾಮಿ ಪ್ರಮಾಣ ವಚನ
ನ್ಯೂಯಾರ್ಕ್​ನ ಮೊದಲ ಮುಸ್ಲಿಂ ಮೇಯರ್​ ಆಗಿ ಜೊಹ್ರಾನ್​ ಮಮ್ದಾಮಿ ಪ್ರಮಾಣ ವಚನ
Published on

ಪ್ರಮುಖ ಮುಖ್ಯಾಂಶಗಳು

  • ನ್ಯೂಯಾರ್ಕ್​ ನಗರದ ಹೊಸ ಮೇಯರ್​ ಆಗಿ ಜೊಹ್ರಾನ್​ ಮಮ್ದಾಮಿ ಪ್ರಮಾಣ ವಚನ ಸ್ವೀಕಾರ
  • ಮ್ಯಾನ್‌ಹ್ಯಾಟನ್​ನಲ್ಲಿರುವ ಸಬ್​ವೇ ಸ್ಟೇಷನ್​ನಲ್ಲಿ ನಡೆದ ಐತಿಹಾಸಿಕ ಸಮಾರಂಭ
  • ನ್ಯೂಯಾರ್ಕ್​ ನಗರದ ಮೊಟ್ಟ ಮೊದಲ ಮುಸ್ಲಿಂ ಮೇಯರ್​ ಎಂಬ ದಾಖಲೆ ಬರೆದ ಮಮ್ದಾಮಿ
ನ್ಯೂಯಾರ್ಕ್​: ಭಾರತೀಯ ಮೂಲದ ಜೊಹ್ರಾನ್​ ಮಮ್ದಾಮಿ ( Zohran Mamdani ) ಅವರು ನ್ಯೂಯಾರ್ಕ್​ ನಗರದ ಹೊಸ ಮೇಯರ್​ ಆಗಿ ಹೊಸ ವರ್ಷದಂದೇ ಪ್ರಮಾಣ ವಚನ ಸ್ವೀಕಾರ ಮಾಡಿದರು. ಮ್ಯಾನ್‌ಹ್ಯಾಟನ್​ನಲ್ಲಿರುವ ಸಬ್​ವೇ ಸ್ಟೇಷನ್​ನಲ್ಲಿ ಈ ಐತಿಹಾಸಿಕ ಸಮಾರಂಭ ನಡೆಯಿತು.
ಅಮೆರಿಕದ ಅತಿದೊಡ್ಡ ನಗರ ಎನಿಸಿಕೊಂಡಿರುವ ನ್ಯೂಯಾರ್ಕ್​ ನಗರದ ಮೊಟ್ಟ ಮೊದಲ ಮುಸ್ಲಿಂ ನಾಯಕನೆಂಬ ದಾಖಲೆಯನ್ನು ಮಮ್ದಾನಿ ಅವರು ಬರೆದಿದ್ದಾರೆ. ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್​ ಮೇಲೆ ಕೈ ಇಟ್ಟು ಮಮ್ದಾನಿ ಅವರು ಪ್ರಮಾಣ ವಚನವನ್ನು ಸ್ವೀಕಾರ ಮಾಡಿದರು.
ಪ್ರಮಾಣ ವಚನ ಸ್ವೀಕಾರದ ಬಳಿಕ ಮಾತನಾಡಿದ ಮಮ್ದಾನಿ, ಇದು ನನಗೆ ದೊರೆತಂತಹ ಜೀವಮಾನದ ಗೌರವ ಮತ್ತು ಸವಲತ್ತು ಎಂದು ಹೇಳಿದರು.
ಈ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಮಮ್ದಾನಿ ಅವರ ರಾಜಕೀಯ ಮಿತ್ರರಾದ ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಅವರು ನ್ಯೂಯಾರ್ಕ್​ ನಗರದ ಮೂಲ ಸುರಂಗಮಾರ್ಗ ನಿಲ್ದಾಣಗಳಲ್ಲಿ ಒಂದಾದ ಹಳೆಯ ಸಿಟಿ ಹಾಲ್ ನಿಲ್ದಾಣದಲ್ಲಿ ನಿರ್ವಹಿಸಿದರು. ಈ ನಿಲ್ದಾಣ ಅದ್ಭುತವಾದ ಕಮಾನಿನ ಛಾವಣಿಗಳಿಗೆ ಹೆಸರುವಾಸಿಯಾಗಿದೆ.
ಮಧ್ಯಾಹ್ನ 1 ಗಂಟೆಗೆ (ಸ್ಥಳೀಯ ಸಮಯ) ಸಿಟಿ ಹಾಲ್‌ನಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಮತ್ತೊಮ್ಮೆ ಬಹಳ ಅದ್ಧೂರಿಯಾಗಿ ಮಮ್ದಾನಿ ಅವರು ಮತ್ತೊಮ್ಮೆ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ.
ಅಂದಹಾಗೆ, ಅಮೆರಿಕದಲ್ಲಿ ನ್ಯೂಯಾರ್ಕ್​ ನಗರದ ಮೇಯರ್ ಚುನಾವಣೆಯಲ್ಲಿ ಡೆಮೋಕ್ರಾಟಿಕ್ ಪಕ್ಷದಿಂದ ಸ್ಪರ್ಧಿಸಿದ್ದ ಜೊಹ್ರಾನ್ ಮಮ್ದಾನಿ, ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಮತ್ತು ರಿಪಬ್ಲಿಕನ್ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ ಗೆಲುವು ಸಾಧಿಸಿದರು. ಈ ಮೂಲಕ ಮೊದಲ ಭಾರತೀಯ-ಅಮೆರಿಕನ್ ಮುಸ್ಲಿಂ ಮೇಯರ್ ಆಗಿ ಇತಿಹಾಸ ಸೃಷ್ಟಿಸಿದರು. ಅಲ್ಲದೆ, ಒಂದು ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ ನ್ಯೂಯಾರ್ಕ್​ ನಗರದ ಅತ್ಯಂತ ಕಿರಿಯ ಮೇಯರ್ ಆಗಿಯೂ ದಾಖಲೆ ಬರೆದಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net