ವಾಷಿಂಗ್ಟನ್: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಸಂಘರ್ಷವು ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈ ನಡುವೆ ಜಗತ್ತೇ ನಿಬ್ಬೆರಗಾಗುವಂತಹ ಎರಡು ಪ್ರಮುಖ ಬೆಳವಣಿಗೆಗಳು ಸಂಭವಿಸಿವೆ. ಒಂದು, ಯುದ್ಧಕ್ಕೆ ಏಪ್ರಿಲ್ 9 ರ ಗಡುವು ನಿಗದಿಯಾಗಿರುವುದು. ಎರಡು, ಈ ಯುದ್ಧದ ಆರಂಭಕ್ಕೆ ತನ್ನ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್(TrumpVsHegseth) ಅವರೇ ಕಾರಣ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.