ಹೆಂಡತಿಗೆ ನಿಖಾಬ್​ ಕಡ್ಡಾಯ.. ಮಹಿಳೆ ಕಚೇರಿ ಕೆಲಸ ಮಾಡಿ 'ಧರ್ಮ' ಹಾಳಾಗುತ್ತಿದೆ: ಫ್ಲೈದುಬೈ ಸಹ-ಪೈಲಟ್​ "ಅಲ್​-ಹಮ್ಮಾಮಿ" ಎಕ್ಸ್​ ಪೋಸ್ಟ್​ ವೈರಲ್​! Al Hammami

ಸಹ-ಪೈಲಟ್ ಅಲ್-ಹಮ್ಮಾಮಿ ಅವರ ವೈರಲ್ ಎಕ್ಸ್ (X) ಪೋಸ್ಟ್, ಹೆಂಡತಿಗೆ ನಿಖಾಬ್ ಕಡ್ಡಾಯ ಮತ್ತು ಪುರುಷರ ಜತೆ ಮಹಿಳೆಯರ ಕೆಲಸದ ಕುರಿತ ವಿವಾದಾತ್ಮಕ ಹೇಳಿಕೆ ವೈರಲ್​.
Co-pilot Al-Hammami's statement regarding the niqab and the ban on women's employment.
ಸಹ-ಪೈಲಟ್ ಅಲ್-ಹಮ್ಮಾಮಿ ನಿಖಾಬ್ ಮತ್ತು ಮಹಿಳಾ ಉದ್ಯೋಗ ನಿಷೇಧ ಹೇಳಿಕೆ.
Published on: 

ಯುಎಇ: ದುಬೈನಿಂದ ಟೆಲ್​ ಅವಿಲ್​ಗೆ ಪ್ರಯಾಣ ಬೆಳೆಸಿದ್ದ ಫ್ಲೈದುಬೈ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಮೇಲೆ ಸಹ ಪೈಲಟ್​ವೊಬ್ಬ ಹಲ್ಲೆ ನಡೆಸಿ ವಿಮಾನವನ್ನೇ ಪತನಗೊಳಿಸಲು ಯತ್ನಿಸಿದ ಭೀಕರ ಘಟನೆ ಇಡೀ ವಿಶ್ವವೇ ಬೆಚ್ಚಿಬೀಳುವಂತೆ ಮಾಡಿದೆ. ಇಸ್ರೇಲ್‌ನಲ್ಲಿ ನಡೆದ ಈ ಭಯೋತ್ಪಾದನಾ ದಾಳಿಯ ಯತ್ನದ ಹಿಂದೆ ಇಸ್ಲಾಮಿಕ್​ ತೀವ್ರವಾದಿ ಚಿಂತನೆಗಳು ಹಾಗೂ ವಿವಾದಾತ್ಮಕ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಬೆಳಕಿಗೆ ಬಂದಿದ್ದು, ಈಗ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಘಟನೆಯಲ್ಲಿ ಸಿಕ್ಕಿಬಿದ್ದಿರುವ 29 ವರ್ಷದ ಒಮಾನಿ ಪ್ರಜೆ, ಫ್ಲೈದುಬೈ ವಿಮಾನದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಸೋಷಿಯಲ್ ಮೀಡಿಯಾದಲ್ಲಿ ನಡೆಸುತ್ತಿದ್ದ ಚಟುವಟಿಕೆಗಳು ಮತ್ತು ಆತನ ಮನಸ್ಥಿತಿ ಬಗ್ಗೆ ಈಗ ಒಂದೊಂದೆ ಮಾಹಿತಿಗಳು ಹೊರಬೀಳುತ್ತಿವೆ.

ಮಹಿಳೆಯರ ಬಗ್ಗೆ ಕೀಳು ಮನಸ್ಥಿತಿ ಪೋಸ್ಟ್‌ಗಳು!

ವಿದೇಶಿ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಅಲ್-ಹಮ್ಮಾಮಿಯ ಡೀಲಿಟ್​ ಮಾಡಿರುವ ಎಕ್ಸ್ (ಟ್ವಿಟರ್) ಖಾತೆಯಲ್ಲಿ, ಈತನ ಸ್ತ್ರೀದ್ವೇಷಿ ಹಾಗೂ ಮೂಲಭೂತವಾದಿ ಆಲೋಚನೆಗಳ ಕರಾಳ ಮುಖವನ್ನು ತೆರೆದಿಟ್ಟಿದೆ.

ತನ್ನ ಮದುವೆಯ ಸಂದರ್ಭದಲ್ಲಿ ಹೆಣ್ಣು ಹುಡುಕುವಾಗ ಎದುರಾದ ಕಷ್ಟಗಳ ಬಗ್ಗೆ ಬರೆದುಕೊಂಡಿದ್ದ ಈತ, "ನನ್ನ ಮಗ ಪೈಲಟ್" ಎಂದು ತಾಯಿ ಹೇಳಿದ ತಕ್ಷಣವೇ ಎಲ್ಲರೂ ಒಪ್ಪಿಕೊಂಡರು ಎಂದು ಬಡಾಯಿ ಕೊಚ್ಚಿಕೊಂಡಿದ್ದಾನೆ. ಮದುವೆಯಾದ ಬಳಿಕ ಹೆಂಡತಿ ಕಡ್ಡಾಯವಾಗಿ ಮುಖ ಮುಚ್ಚುವ ಬಟ್ಟೆ (ನಿಖಾಬ್) ಧರಿಸಬೇಕು ಮತ್ತು ಕೆಲಸ ಬಿಡಬೇಕು ಎಂದು ಆತ ಬಯಸುತ್ತಿದ್ದನೆಂದು ಬರೆದುಕೊಂಡಿದ್ದಾನೆ.

ಅಷ್ಟೇ ಅಲ್ಲದೆ, ಗಂಡು-ಹೆಣ್ಣು ಒಟ್ಟಿಗೆ ಕೆಲಸ ಮಾಡುವ ಕಚೇರಿ ವಾತಾವರಣದ ವಿರುದ್ಧವೂ ಈತ ತನ್ನ ವಕ್ರಬುದ್ಧಿಯನ್ನು ಹೊರಹಾಕಿದ್ದು, ಇಂತಹ ವಾತಾವರಣದಿಂದ ಧಾರ್ಮಿಕ ಸ್ತ್ರೀಯರು ಹಾಳಾಗುತ್ತಾರೆ ಎಂದು ಈ ಹಿಂದೆ ಕಮೆಂಟ್ ಮಾಡಿದ್ದಾನೆ.

ಆಘಾತಕಾರಿ ಲಿಂಕ್ಡ್‌ಇನ್ ಪೋಸ್ಟ್!

ವಿಮಾನವನ್ನು ಅಪಘಾತಗೊಳಿಸಲು ಯತ್ನಿಸಿದ ಕೃತ್ಯದ ಕೆಲವೇ ಗಂಟೆಗಳ ಬಳಿಕ, ಈತನ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಕಾಣಿಸಿಕೊಂಡ ಪೋಸ್ಟ್‌ಗಳು ಎಲ್ಲರಿಗೂ ಶಾಕ್ ನೀಡಿವೆ. ಬೋಯಿಂಗ್ 737 ಮ್ಯಾಕ್ಸ್ ಕಾಕ್‌ಪಿಟ್‌ನಿಂದ ತೆಗೆದ ವಿಡಿಯೋಗಳನ್ನು ಈತ ಶೇರ್ ಮಾಡಿದ್ದಾನೆ. ಈ ವಿಡಿಯೋದ ಕೊನೆಯಲ್ಲಿ ಕುಖ್ಯಾತ ಉಗ್ರ ಸಂಘಟನೆ ಅಲ್ ಖೈದಾದ ಮಾಜಿ ನಾಯಕ ಅಯ್ಮನ್ ಅಲ್-ಜವಾಹಿರಿ ಹಾಗೂ ಮತ್ತೊಬ್ಬ ಆತ್ಮಾಹುತಿ ಬಾಂಬರ್‌ನ ಫೋಟೋಗಳು ಕಾಣಿಸಿಕೊಂಡಿವೆ. ಓಮನ್ ಏರ್, ರಾಯಲ್ ಏರ್ ಮರೋಕ್ ಹೀಗೆ ವಿವಿಧ ವಿಮಾನಯಾನ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದ ಈ ಪೈಲಟ್, ತನ್ನ ವೃತ್ತಿಯ ಮರೆಯಲ್ಲೇ ಇಂತಹ ದೊಡ್ಡ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದಾನಾ ಎಂಬ ಪ್ರಶ್ನೆ ಈಗ ಮೂಡಿದೆ. ಈ ಬಗ್ಗೆ ಯುಎಇ ಹಾಗೂ ಇಸ್ರೇಲ್ ತನಿಖಾ ಸಂಸ್ಥೆಗಳು ತೀವ್ರ ತನಿಖೆ ನಡೆಸುತ್ತಿವೆ.

Also Read
"ನನ್ನ ತಲೆಗೆ ಬಲವಾಗಿ ಹೊಡೆದ"..."ಕಣ್ಣುಗಳು ಸಂಪೂರ್ಣ ಮಂಜಾಗಿದ್ದವು": ಫ್ಲೈದುಬೈ ಘಟನೆ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಕ್ಯಾಪ್ಟನ್​ ಸ್ಮಿತ್​ ಮಚ್ಚಾರ್​! Captain Smit Machchhar
Co-pilot Al-Hammami's statement regarding the niqab and the ban on women's employment.

ಸಹೋದ್ಯೋಗಿ ಕ್ಯಾಪ್ಟನ್ ಮೇಲೆ ಮಾರಣಾಂತಿಕ ಹಲ್ಲೆ!

ಸೆಪ್ಟೆಂಬರ್ 30 ರಂದು ನಡೆದ ಈ ದುರ್ಘಟನೆಯಲ್ಲಿ, 174 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನದಲ್ಲಿದ್ದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಅಲ್-ಹಮ್ಮಾಮಿ ಚಾಕುವಿನಿಂದ ಇರಿದು ವಿಮಾನವನ್ನು ಪತನಗೊಳಿಸಲು ಹೂಡಿದ ಸಂಚು ವಿಫಲವಾಗಿದೆ. ಸಕಾಲದಲ್ಲಿ ಎಚ್ಚೆತ್ತುಕೊಂಡ ಸಿಬ್ಬಂದಿ ಹಾಗೂ ಭದ್ರತೆಯಿಂದಾಗಿ ದೊಡ್ಡ ದುರಂತ ತಪ್ಪಿದೆ. ಸದ್ಯ ಇಸ್ರೇಲ್ ಪೊಲೀಸರ ವಶದಲ್ಲಿರುವ ಈತನ ವಿರುದ್ಧ ಭಯೋತ್ಪಾದನಾ ಕೋನದಲ್ಲಿ ತನಿಖೆ ಮುಂದುವರಿದಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಈತ ತೀವ್ರವಾದಿ ಇಸ್ಲಾಮಿ ಬೋಧನೆಗೆ ಬಲಿಯಾಗಿರುವ ವ್ಯಕ್ತಿ ಎಂದು ಖಂಡಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net