"ನನ್ನ ತಲೆಗೆ ಬಲವಾಗಿ ಹೊಡೆದ"..."ಕಣ್ಣುಗಳು ಸಂಪೂರ್ಣ ಮಂಜಾಗಿದ್ದವು": ಫ್ಲೈದುಬೈ ಘಟನೆ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಕ್ಯಾಪ್ಟನ್​ ಸ್ಮಿತ್​ ಮಚ್ಚಾರ್​! Captain Smit Machchhar

ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್‌ನಿಂದ ನಡೆದ ಕೊಡಲಿ ದಾಳಿ ಮತ್ತು ಆ ಭಯಾನಕ ಕ್ಷಣಗಳ ಬಗ್ಗೆ ನಾಯಕ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಬಿಚ್ಚಿಟ್ಟ ರೋಚಕ ವಿವರಣೆ. ಪ್ರಧಾನಿ ಮೋದಿ ಹಾಗೂ ನೆತನ್ಯಾಹುರಿಂದ ಪ್ರಶಂಸೆ ಪಡೆದ ಭಾರತೀಯ ಹೀರೋ ಸಾಹಸಗಾಥೆ.
The moments of the terrifying attack inside the cockpit of the Flydubai flight, and Captain Smith Machar’s escape from the brink of death.
ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ಭೀಕರ ದಾಳಿಯ ಕ್ಷಣಗಳು ಹಾಗೂ ಸಾವಿನಂಚಿನಿಂದ ಪಾರಾದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್.
Published on: 

ಯುಎಇ: ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ತನ್ನದೇ ಸಹ-ಪೈಲಟ್‌ನಿಂದ ಮಾರಣಾಂತಿಕ ಹಲ್ಲೆಗೊಳಗಾಗಿ, ಸಾವಿನ ಬಾಗಿಲವರೆಗೂ ಹೋಗಿ ಬಂದಿರುವ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಈಗ ಆ ಭಯಾನಕ ಘಟನೆಯ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡುವಾಗ ಸ್ಮಿತ್ ಮಚ್ಚಾರ್ ಹಂಚಿಕೊಂಡ ಆ ರಕ್ತಸಿಕ್ತ ರೋಚಕ ಕಥೆ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.

ಪ್ರಾರ್ಥನೆಯ ಮರೆಯಲ್ಲಿ ನಡೆದ ದಾಳಿ!

ಇಸ್ರೇಲ್ ಪ್ರಧಾನಿ ನೆತನ್ಯಾಹು ಜೊತೆಗಿನ ಫೋನ್ ಸಂಭಾಷಣೆಯಲ್ಲಿ ಕ್ಯಾಪ್ಟನ್ ಸ್ಮಿತ್ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. "ಅದು ಎಂದಿನಂತೆ ಸಾಮಾನ್ಯ ವಿಮಾನಯಾನವಾಗಿತ್ತು. ಸಹ-ಪೈಲಟ್ ಪ್ರಾರ್ಥನೆ ಮಾಡಲು ಬಯಸಿದ್ದ, ಅಲ್ಲಿನ ಸಂಪ್ರದಾಯದಂತೆ ಅದು ಸಾಮಾನ್ಯವಾಗಿದ್ದ ಕಾರಣ, ನಾನು ಸುಮ್ಮನೆ ವಿಮಾವದ ಮುಂಭಾಗವನ್ನು ನೋಡುತ್ತಾ ಕುಳಿತಿದ್ದೆ" ಎಂದು ಸ್ಮಿತ್ ಹೇಳಿದ್ದಾರೆ.

ಆದರೆ, ಕೇವಲ ನಾಲ್ಕೈದು ನಿಮಿಷಗಳು ಕಳೆಯುವುದರೊಳಗೆ ಪರಿಸ್ಥಿತಿ ಸಂಪೂರ್ಣ ಬದಲಾಯಿತು. "ಇದ್ದಕ್ಕಿದ್ದಂತೆ ನನ್ನ ತಲೆಯ ಹಿಂಭಾಗಕ್ಕೆ ಬಲವಾದ ಹೊಡೆತ ಬಿತ್ತು. ವಿಮಾನಕ್ಕೇನೋ ಭಾರಿ ತಾಂತ್ರಿಕ ತೊಂದರೆಯಾಗಿದೆ ಎಂದೇ ನಾನು ಮೊದಲು ಭಾವಿಸಿದ್ದೆ. ಆದರೆ, ಒಂದರ ಮೇಲೊಂದು ಬಲವಾದ ಹೊಡೆತಗಳು ಬೀಳತೊಡಗಿದಾಗ ನನಗೆ ಅರಿವಾಯಿತು. ಇದು ವಿಮಾನದ ಸಮಸ್ಯೆಯಲ್ಲ, ನನ್ನ ಜೊತೆ ಕುಳಿತಿರುವ ವ್ಯಕ್ತಿಯೇ ನನ್ನ ಮೇಲೆ ದಾಳಿ ಮಾಡಿದ್ದಾನೆ ಎಂದು ಸ್ಮಿತ್ ಆ ಭೀಕರ ಕ್ಷಣಗಳನ್ನು ವಿವರಿಸಿದ್ದಾರೆ.

Also Read
ನೀವೊಬ್ಬ "ಜಾಗತಿಕ ಹೀರೋ"! ಸ್ಮಿತ್​ ಮಚ್ಚಾರ್​ ಜೊತೆ ನೆತನ್ಯಾಹು ದೂರವಾಣಿ ಕರೆ; ಇಸ್ರೇಲ್​ ಸ್ವಾತಂತ್ರ ದಿನಾಚರಣೆಗೆ ಅತಿಥಿಯಾಗಿ ಆಹ್ವಾನ! Benjamin Netanyahu
The moments of the terrifying attack inside the cockpit of the Flydubai flight, and Captain Smith Machar’s escape from the brink of death.

ರಕ್ತದ ಮಡುವಿನಲ್ಲಿ ಮುಳುಗಿದ ದೃಷ್ಟಿ, ಕೆಳಗೆ ಧುಮುಕಿದ ವಿಮಾನ!

ದಾಳಿಯ ತೀವ್ರತೆಗೆ ಕ್ಯಾಪ್ಟನ್ ಸ್ಮಿತ್ ತಲೆಗೆ ಗಂಭೀರ ಗಾಯವಾಗಿತ್ತು. ರಕ್ತ ಮುಖದ ಮೇಲೆಲ್ಲಾ ಹರಿದು ಕಣ್ಣು ಮಂಜಾಯಿತು, ಬಹುತೇಕ ಏನೂ ಕಾಣದಂತಾಯಿತು. ಅದೇ ಸಮಯದಲ್ಲಿ ವಿಮಾನದ ನಿಯಂತ್ರಣ ತಪ್ಪಿ, ಅತ್ಯಂತ ವೇಗವಾಗಿ ಆಕಾಶದಿಂದ ಕೆಳಗೆ ಧುಮುಕಲು ಆರಂಭಿಸಿತು.

"ಆ ಸಮಯದಲ್ಲಿ ವಿಮಾನದ ಚಲನೆ, ಗಾಳಿಯ ರಭಸದ ಶಬ್ದ ಮತ್ತು ಪ್ರಯಾಣಿಕರ ಕಿರುಚಾಟ ನನ್ನ ಕಿವಿಗೆ ಬೀಳುತ್ತಿತ್ತು. ನಾನು ಹೇಗೋ ಮಾಡಿ ಬಾಗಿಲು ತೆರೆಯಲು ಪ್ರಯತ್ನಿಸಿದೆ, ಆದರೆ ಆ ದುಷ್ಟ ಸಹ-ಪೈಲಟ್ ಅದನ್ನು ಮತ್ತೆ ಮುಚ್ಚಿದ. ನಾನು ಕಾಕ್‌ಪಿಟ್‌ನ ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದೆ" ಎಂದು ಸ್ಮಿತ್ ಹೇಳಿದ್ದಾರೆ.

"ನನ್ನಲ್ಲಿ ಹೋರಾಡುವ ಛಲ ಇತ್ತು!"

"ಇದು ವೈಯಕ್ತಿಕ ಹೋರಾಟವೆನ್ನಿ ಅಥವಾ ಜನರಿಗಾಗಿ ಮಾಡಿದ ಕರ್ತವ್ಯವೆನ್ನಿ, ನಾನು ಅದನ್ನು ಮಾಡಲೇಬೇಕಿತ್ತು. ಇಲ್ಲದಿದ್ದರೆ ನಾನು ಅಲ್ಲೇ ಸಾಯುತ್ತಿದ್ದೆ. ನನ್ನಲ್ಲಿ ಉಳಿದಿದ್ದ ಕೊನೆಯ ಹನಿ ಶಕ್ತಿಯನ್ನು ಒಗ್ಗೂಡಿಸಿ ಬಾಗಿಲಿನತ್ತ ಧಾವಿಸಿ ಅದನ್ನು ತೆರೆದೆ. ಅದೃಷ್ಟವಶಾತ್ ಸಿಬ್ಬಂದಿ ಮತ್ತು ಪ್ರಯಾಣಿಕರು ಸಿದ್ಧರಿದ್ದರು, ಅವರು ಒಳಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು" ಎಂದು ಸ್ಮಿತ್ ಆ ರೋಚಕ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

ಸ್ವಾತಂತ್ರ ದಿನಾಚರಣೆಗೆ ಆಹ್ವಾನ!

ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ಭೀಕರ ದಾಳಿಯನ್ನು ವಿಫಲಗೊಳಿಸಿ ನೂರಾರು ಜೀವಗಳನ್ನು ಉಳಿಸಿದ ಭಾರತದ ಹೆಮ್ಮೆಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಜತೆ ಇಸ್ರೇಲ್​ ಪ್ರಧಾನಿ ಬೆಂಜಾಮಿನ್​ ನೆತನ್ಯಾಹು ದೂರವಾಣಿ ಕರೆ ಮೂಲಕ ಮಾತನಾಡಿದ್ದಾರೆ.

ಈ ಸಂದರ್ಭದಲ್ಲಿ ಘಟನೆ ಬಗ್ಗೆ ಮಾಹಿತಿ ಪಡೆದ ನೆತನ್ಯಾಹು, ಜೊತೆ ಕ್ಯಾಪ್ಟನ್​ ಶೀಘ್ರದಲ್ಲಿ ಚೇತರಿಸಿಕೊಂಡು, ತಮ್ಮ ಕಚೇರಿಗೆ ಕುಟುಂಬ ಸಮೇತ ಆಗಮಿಸಬೇಕೆಂದು ಕೇಳಿಕೊಂಡಿದ್ದಾರೆ. ಇದರ ಜತೆಗೆ ನೀವು ಇಸ್ರೇಲ್​ ಹಾಗೂ ಭಾರತದ ಮಾತ್ರವಲ್ಲ, ಬದಲಾಗಿ ಜಾಗತಿಕ ಹೀರೋ ಆಗಿದ್ದಿರಿ. ನೂರಾರು ಪ್ರಯಾಣಿಕರ ಪ್ರಾಣವನ್ನು ಉಳಿಸಿದ ನಿಮ್ಮನ್ನು ಇಸ್ರೇಲ್​ನ ಸ್ವಾತಂತ್ರ ದಿನಾಚರಣೆಯ ಮುಖ್ಯ ಅಥಿತಿಯನ್ನಾಗಿ ಹೆಮ್ಮೆಯಿಂದ ಆಹ್ವಾನಿಸುತ್ತಿದ್ದೆನೆಂದು ನೆತನ್ಯಾಹು ತಿಳಿಸಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net