180ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದ ಕ್ಯಾಪ್ಟನ್ ಈಗ ಹೇಗಿದ್ದಾರೆ? ಸ್ಮಿತ್​ ಮಚ್ಚಾರ್​ ಆರೋಗ್ಯ ಸ್ಥಿತಿ ಬಗ್ಗೆ ವಿದೇಶಾಂಗ ಇಲಾಖೆ ಹೇಳಿದ್ದೇನು? Captain Smith Machchhar

180ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಈಗ ಹೇಗಿದ್ದಾರೆ? ಅವರ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಯ ಕುರಿತು ವಿದೇಶಾಂಗ ಇಲಾಖೆ ನೀಡಿರುವ ಅಧಿಕೃತ ಹೇಳಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
External Affairs Ministry statement on Captain Smith Machar's health condition!
ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಆರೋಗ್ಯ ಸ್ಥಿತಿ ಬಗ್ಗೆ ವಿದೇಶಾಂಗ ಇಲಾಖೆ ಹೇಳಿಕೆ!
Published on: 

ನವದೆಹಲಿ: ದುಬೈನಿಂದ ಇಸ್ರೇಲ್​ಗೆ ಪ್ರಯಾಣ ಬೆಳೆಸಿದ್ದ, ಫ್ಲೈದುಬೈ (Flydubai) ವಿಮಾನದಲ್ಲಿ ನಡೆದ ಘಟನೆ ಬಗ್ಗೆ ಈಗ ಜಾಗತಿಕವಾಗಿ ಎಲ್ಲಡೆ ಚರ್ಚೆಯಾಗುತ್ತಿದೆ.

ವಿಮಾನದ ಕ್ಯಾಪ್ಟನ್​ ಸ್ಮಿತ್​ ಮಚ್ಚಾರ್​ ಮೇಲೆ ಸಹ ಪೈಲಟ್​ ಸ್ಥಾನದಲ್ಲಿದ್ದ ಹಮಾಮ್ ಅಲ್-ಹಮ್ಮಾಮಿ ಎಂಬಾತ ದಿಢೀರನೆ ಹಲ್ಲೆ ನಡೆಸಿ, ವಿಮಾನವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಆದರೆ, ತೀವ್ರ ಗಾಯಗೊಂಡಿದರೂ, ಭಾರತ ಮೂಲಕದ ಪೈಲಟ್​ ಸ್ಮಿತ್​ ಮಚ್ಚಾರ್​, ಕಾಕ್​ಪಿಟ್​ ದ್ವಾರವನ್ನು ತೆರೆಯುವಲ್ಲಿ ಯಶಸ್ವಿಯಾಗಿದ್ದು, ಭಾರಿ ದುರ್ಘಟನೆಯೊಂದನ್ನು ತಡೆದಿದ್ದಾರೆ.

ನಂತರ ವಿಮಾನದಲ್ಲಿದ್ದ ಪ್ರಯಾಣಿಕರು, ಆಗಂತುಕ ಹಮಾಮ್ ಅಲ್-ಹಮ್ಮಾಮಿ ಯನ್ನು ಕಟ್ಟಿಹಾಕಿದರೆ, ಹೆಚ್ಚುವರಿ ಪೈಲಟ್​ಗಳು ವಿಮಾನವನ್ನು ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದರು. ನಂತರ ಕ್ಯಾಪ್ಟನ್​ ಸ್ಮಿತ್ ಮಚ್ಚಾರ್​ನನ್ನು ಸೌದಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಸಲಾಗುತ್ತಿದೆ. ಈಗ ಗಾಯಗೊಂಡಿರುವ ಕ್ಯಾಪ್ಟನ್​ ಮಚ್ಚಾರ್​ ಆರೋಗ್ಯ ಸ್ಥಿತಿ ಬಗ್ಗೆ ವಿದೇಶಾಂಗ ಇಲಾಖೆ ಮಾಹಿತಿ ಹಂಚಿಕೊಂಡಿದೆ.

ಸ್ಮಿತ್​ ಚೇತರಿಸುತ್ತಿದ್ದಾರೆ...!

ಭಾರತದ ಹೆಮ್ಮೆ ಹಾಗೂ ಧೀರ ಕ್ಯಾಪ್ಟನ್​ ಸ್ಮಿತ್​ ಮಚ್ಚಾರ್​ ಸೌದಿಯ ಆಸ್ಪತ್ರೆಯಲ್ಲಿ ಅತ್ಯುತ್ತಮ ಹಾಗೂ ಅತ್ಯಾಧುನಿಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಈಗ ಮೊದಲಿಗಿಂತ ಬಹಳ ಚೇತರಿಕೆ ಕಾಣಿಸುತ್ತಿದೆ. ಭಾರತದ ರಾಯಭಾರ ಕಚೇರಿ ಅವರ ಮೇಲೆ ತೀವ್ರ ನಿಗಾ ವಹಿಸಿದೆ ಎಂದು ಟ್ವಿಟ್​ ಮಾಡಿದೆ.

ಹಾಗೆಯೇ, ಕ್ಯಾಪ್ಟನ್​ ಸ್ಮಿತ್​ ಆರೋಗ್ಯದ ಬಗ್ಗೆ ಅವರ ಕುಟುಂಬ ವರ್ಗಕ್ಕೆ ಕ್ಷಣ-ಕ್ಷಣದ ಮಾಹಿತಿಯನ್ನು ನೀಡಲಾಗುತ್ತಿದ್ದು, ಅವರು ಶೀಘ್ರದಲ್ಲಿ ಸಂಪೂರ್ಣ ಗುಣಮುಖಲಾಗಲಿದ್ದಾರೆ ಎಂಬ ಭರವಸೆ ನೀಡಿದೆ. ಅಂತಯೇ, ವೈಧ್ಯಕೀಯ ನೆರವನ್ನು ನೀಡುತ್ತಿರುವ ಸೌದಿ ಸರ್ಕಾರಕ್ಕೆ ಧನ್ಯವಾದವನ್ನು ತಿಳಿಸಿದೆ.

Also Read
CNG ಗ್ಯಾಸ್ ತುಂಬಿಸುವಾಗಲೇ ಕಾರು ಸ್ಫೋಟ: ಮೈ ನಡುಗಿಸುವ ವಿಡಿಯೋ ವೈರಲ್​; ಭೀಕರ ದೃಶ್ಯ ಕಂಡು ನೆಟ್ಟಿಗರು ಶಾಕ್​! CNG Car Blast
External Affairs Ministry statement on Captain Smith Machar's health condition!

ಚಾಕು ಅಲ್ಲ, ಕೊಡಲಿಯಿಂದ ಹಲ್ಲೆ!

ಇಷ್ಟು ದಿನ ಹೊರಬಂದ ಮಾಹಿತಿ ಪ್ರಕಾರ, ಸಹ-ಪೈಲಟ್​ ಹಮಾಮ್ ಅಲ್-ಹಮ್ಮಾಮಿ ಪಾಕೆಟ್​ ಚಾಕು ಮೂಲಕ ಸ್ಮಿತ್​ ಮಚ್ಚಾರ್​ ಮೇಲೆ ಹಲ್ಲೆ ನಡೆಸಿದ್ದ ಎಂದು ಹೇಳಲಾಗುತ್ತಿತ್ತು. ಆದರೆ ಯುಎಇ ನೀಡಿರುವ ಮಾಹಿತಿ ಪ್ರಕಾರ, ವಿಮಾನದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾದಾಗ ಗಾಜನ್ನು ಒಡೆಯಲು ಕೊಡಲಿಯೊಂದನ್ನು ಇಟ್ಟಿರಲಾಗುತ್ತದೆ. ಈ ಕೊಡಲಿಯನ್ನು ಆಯುಧವಾಗಿ ಬಳಸಿಕೊಂಡು ಹಮಾಮ್ ಅಲ್-ಹಮ್ಮಾಮಿ , ಸ್ಮಿತ್​ ಮಚ್ಚಾರ್​ ಮೇಲೆ ದಾಳಿ ನಡೆಸಿದ್ದಾನೆಂದು ತಿಳಿಸಿದೆ.

ಈ ಭೀಕರ ದಾಳಿಯಿಂದ ಗಾಯಗೊಂಡರೂ, ಕ್ಯಾಪ್ಟನ್​ ಮಚ್ಚಾರ್​ ಕಾಕ್​ಪಿಟ್​ ದ್ವಾರವನ್ನು ತೆಗೆದ ಫಲವಾಗಿ ವಿಮಾನದಲ್ಲಿದ್ದ ಸುಮಾರು 180 ಕ್ಕೂ ಹೆಚ್ಚಿನ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಲ್ಲದಿದ್ದರೆ, ಇವರೆಲ್ಲ ಜೀವ ಉಳಿಯುವುದು ಬಹಳ ಕಷ್ಟವಾಗಿತ್ತೆಂದು ಯುಎಇ ತಿಳಿಸಿದೆ, (ಏಜೆನ್ಸೀಸ್​).

Related Stories

ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ
ದೇಶದ ಹೊಸ ಹೀರೋ ಕ್ಯಾಪ್ಟನ್ ಸ್ಮಿತ್ ಉಪನಾಮದ ಆಸಕ್ತಿದಾಯಕ ಹಿನ್ನೆಲೆ ಇಲ್ಲಿದೆ!
A remarkable incident aboard a Flydubai flight: Brave Captain Smith Macchar saved passengers' lives despite being in a bloodied state.
Captain Smith Machar's Flydubai cockpit feat and praise from Israeli Prime Minister Netanyahu.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net