ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧ: ಇರಾನ್ ಸುಪ್ರೀಂ ಲೀಡರ್ ಪಟ್ಟಕ್ಕೇರಿದ ಖಮೇನಿ ಪುತ್ರ;ಮುಂದಿನ ಟಾರ್ಗೆಟ್ ನೀನೇ ಎಂದ ಇಸ್ರೇಲ್! Mojtaba Khamenei

ಇಸ್ರೇಲ್​ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಇರಾನಿನ ನೂತನ ಸವೋಚ್ಚ ನಾಯಕ ಮೊಜ್ತಬಾ ಹೊಸೇನಿ ಖಮೇನಿ
ಇಸ್ರೇಲ್​ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಇರಾನಿನ ನೂತನ ಸವೋಚ್ಚ ನಾಯಕ ಮೊಜ್ತಬಾ ಹೊಸೇನಿ ಖಮೇನಿ
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಂದುವರೆದ ಸಂಘರ್ಷ
  • ಇರಾನಿನ ನೂತನ ಸವೋಚ್ಚ ನಾಯಕನಾಗಿ ಮೊಜ್ತಬಾ ಹೊಸೇನಿ ಖಮೇನಿ ಆಯ್ಕೆ
  • ನೂತನ ಸವೋಚ್ಚ ನಾಯಕನೇ ನಮ್ಮ ಟಾರ್ಗೆಟ್​ ಎಂದ ಇಸ್ರೇಲ್​ ರಕ್ಷಣಾ ಸಚಿವ
ಇಸ್ರೇಲ್​: ಇರಾನಿನ ಸವೋಚ್ಚ ನಾಯಕ ಅಯತೊಲ್ಲಾ ಖಮೇನಿ (86) ಮರಣದ ನಂತರ, ಮೊಜ್ತಬಾ ಹೊಸೇನಿ ಖಮೇನಿ (Mojtaba Khamenei) ಇರಾನಿನ ನೂತನ ಸವೋಚ್ಚ ನಾಯಕನಾಗಿ ಆಯ್ಕೆಯಾಗಿದ್ದಾರೆ. ಆದರೆ, ಈ ಸವೋಚ್ಚ ನಾಯಕ ಪದವಿಯನ್ನು ಅಲಂಕರಿಸುವ ವ್ಯಕ್ತಿಗಳು ನಮ್ಮ ಮುಂದಿನ ಟಾರ್ಗೆಟ್​ ಆಗಿರುತ್ತಾನೆ ಎಂದು ಇಸ್ರೇಲ್ ತಿಳಿಸಿದೆ.
ಅಮೆರಿಕ ಮತ್ತು ಇಸ್ರೇಲ್​ ಜಂಟಿಯಾಗಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ಶನಿವಾರ (ಫೆ.28) ಅಯತೊಲ್ಲಾ ಖಮೇನಿ ಸಾವನ್ನಪ್ಪಿದ್ದರು. ಖಮೇನಿ ಮರಣದ ನಂತರ ಅವರ ಮಗ ಮೊಜ್ತಬಾ ಹೊಸೇನಿ ಖಮೇನಿ ಈದೀಗ ಇರಾನಿನ ನೂತನ ಸವೋಚ್ಚ ನಾಯಕನಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ನಮ್ಮ ತಂಟೆಗೆ ಬಂದರೆ ಸಾವು ನಿಶ್ಚಿತ!

ಇರಾನಿನ ನೂತನ ಸವೋಚ್ಚ ನಾಯಕನಾಗಿ ಮೊಜ್ತಬಾ ಹೊಸೇನಿ ಖಮೇನಿ ಆಯ್ಕೆಗೆ ಪ್ರತಿಕ್ರಿಯಿಸಿರುವ ಇಸ್ರೇಲ್​ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್,  ಇರಾನಿನ ಜನರನ್ನು ನಿಗ್ರಹಿಸುವ, ಇಸ್ರೇಲ್​ ಮತ್ತು ಅಮೆರಿಕವನ್ನು ಬೆದರಿಸಲು ಪ್ರಯತ್ನಿಸುವ ಇರಾನಿನ ಪ್ರತಿಯೊಬ್ಬ ನಾಯಕನನ್ನು ಹೊಡಿದುರಳಿಸಲಾಗುವುದು ಎಂದು ಅವರು ತಮ್ಮ ಎಕ್ಸ್​(ಟ್ವಿಟರ್​) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಕೆಲಸವನ್ನು ಯಾರೇ ಮಾಡಲಿ, ಅದು ಎಷ್ಟು ಪ್ರಭಾವಿ ನಾಯಕನೇ ಮಾಡಲಿ, ವಿಶ್ವದ ಯಾವುದೇ ಮೂಲೆಯಲ್ಲಿ ಅವನು ಅಡಗಿರಲಿ ಅವನನ್ನು ನಾವು ಜೀವಸಹಿತ ಉಳಿಸುವುದಿಲ್ಲ ಎಂದು ಇಸ್ರೇಲ್ ಕಾಟ್ಜ್, ಇರಾನಿನ ನೂತನ ಸವೋಚ್ಚ ನಾಯಕನಿಗೆ ಎಚ್ಚರಿಕೆ ನೀಡಿದ್ದಾರೆ.

ಯಾರು ಈ ಮೊಜ್ತಬಾ ಹೊಸೇನಿ ಖಮೇನಿ?

ಮೊಜ್ತಬಾ ಹೊಸೇನಿ ಖಮೇನಿ ಇರಾನ್‌ನ ರಾಜಕೀಯ ಮತ್ತು ಧಾರ್ಮಿಕ ವ್ಯಕ್ತಿ. ಇವರು ಮಾಜಿ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಎರಡನೇ ಹಿರಿಯ ಮಗನಾಗಿದ್ದಾರೆ. 1969ರಲ್ಲಿ ಮಷ್ಹದ್‌ನಲ್ಲಿ ಜನಿಸಿದ ಮೊಜ್ತಬಾ ಹೊಸೇನಿ, ಕ್ಲರಿಕ್ (ಧಾರ್ಮಿಕ ವಿದ್ವಾಂಸ) ಆಗಿದ್ದು, ತಂದೆಯವರ ಆಡಳಿತದ ಸಮಯದಲ್ಲಿ IRGC (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್) ಮತ್ತು ಸುಪ್ರೀಂ ಲೀಡರ್ ಕಚೇರಿಯ ಪ್ರಮುಖ ಹುದ್ದೆಯನ್ನು ನಿಭಾಯಿಸಿದ್ದಾರೆ.

ಸಂಘರ್ಷಕ್ಕೆ ಕಾರಣವೇನು?

ಇರಾನ್​ ದೇಶವು ಪರಮಾಣು ಶಕ್ತಿಯಾಗ ಬಯಸಿದ್ದು ಈ ಸಂಘರ್ಷಕ್ಕೆ ಮೂಲ ಕಾರಣವಾಗಿದೆ. ಇರಾನ್​ ಏನಾದರೂ ಪರಮಾಣು ಶಕ್ತಿಯುಳ್ಳ ದೇಶವಾದರೆ ಅದು ಅಮರಿಕ ಮತ್ತು ಇಸ್ರೇಲ್​ಗೆ ಅಪಾಯ ಎಂದು ತಿಳಿದು, ಈ ಎರಡು ದೇಶಗಳು ಇರಾನ್​ ಮೇಲೆ ದಾಳಿ ಮಾಡಿದವು.
ಈ ದಾಳಿಯಲ್ಲಿ ಇರಾನ್​ನ ಸವೋಚ್ಚ ನಾಯಕ ಆಯತೊಲ್ಲಾ ಖಮೇನಿ ಜೊತೆಗೆ ಇರಾನಿನ ರಕ್ಷಣಾ ಸಚಿವ IRGC (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್) ಕಮಾಂಡರ್​ ಸೇರಿ ಹಲವಾರು ಜನರು ಈ ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net