ಶಾಂತಿ ಪಥದಲ್ಲಿ ಸಾಗಿರಿ: ರಷ್ಯಾ-ಯೂಕ್ರೇನ್ ಸಂಘರ್ಷಕ್ಕೆ ಬ್ರೇಕ್ ಹಾಕಲು ಮೋದಿ ಎಂಟ್ರಿ; ಝೆಲೆನ್ಸ್ಕಿ ಜತೆ ಮಹತ್ವದ ಮಾತುಕತೆ! Narendra Modi

Prime Minister Narendra Modi, in a conversation with Ukrainian President Volodymyr Zelenskyy, assured that India would provide assistance towards restoring peace in the Russia-Ukraine conflict.
ರಷ್ಯಾ-ಯೂಕ್ರೇನ್ ಸಂಘರ್ಷದಲ್ಲಿ ಶಾಂತಿ ಮರುಸ್ಥಾಪನೆಗೆ ಭಾರತದ ನೆರವು ನೀಡುವುದಾಗಿ ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜತೆಗಿನ ಮಾತುಕತೆಯಲ್ಲಿ ಭರವಸೆ ನೀಡಿದ ಪ್ರಧಾನಿ ನರೇಂದ್ರ ಮೋದಿ.
Published on: 

ನವದೆಹಲಿ: ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ರಷ್ಯಾ- ಯೂಕ್ರೇನ್​ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಲೇ ಇಲ್ಲ. ಆದರೆ, ಈ ಸಂಘರ್ಷವನ್ನು ಹೇಗಾದರೂ ಮಾಡಿ ತಡೆಯಬೇಕೆಂದು ವಿಶ್ವದ ಹಲವು ನಾಯಕರು ಪ್ರಯತ್ನ ಪಡುತ್ತಿದ್ದು, ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಪ್ರಯತ್ನಕ್ಕೆ ಕೈ ಹಾಕಲಿದ್ದಾರೆಂದು ಹೇಳಲಾಗುತ್ತಿದೆ.

ಕೆಲ ದಿನಗಳ ಹಿಂದೆ ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜತೆ ಮೋದಿ ಟೆಲಿಫೋನ್​ ಸಂಭಾಷಣೆ ನಡೆಸಿದ್ದು, ತಮ್ಮ ಮಾತುಕತೆಯಲ್ಲಿ ರಷ್ಯಾ-ಯೂಕ್ರೇನ್​ ಯುದ್ಧದ ಬಗ್ಗೆ ಕೂಡ ಮಾತನಾಡಿದ್ದಾಗಿ ಖುದ್ದು ಪ್ರಧಾನಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಶಾಂತಿ ಸ್ಥಾಪಿಸಲು ಭಾರತ ಬದ್ಧವಾಗಿದೆ!

ಯೂಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿಜತೆಗೆ ನಡೆದ ಸಂಭಾಷಣೆ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಮೋದಿ, ಝೆಲೆನ್ಸ್ಕಿಯೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಕ್ಕೆ ಸಂತೋಷವಾಗಿದೆ. ನಾವು ನಮ್ಮ ವ್ಯಾಪಕ ದ್ವಿಪಕ್ಷೀಯ ಸಹಕಾರದ ಕುರಿತು ಪರಾಮರ್ಶಿಸಿದ್ದು, ಭಾರತ-ಯೂಕ್ರೇನ್​ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಸಂಘರ್ಷ, ಅದರ ಮಾನವೀಯ ಆಯಾಮಗಳು ಮತ್ತು ಶಾಂತಿಯನ್ನು ಮರುಸ್ಥಾಪಿಸಲು ಕೈಗೊಳ್ಳುತ್ತಿರುವ ವಿವಿಧ ಪ್ರಯತ್ನಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಕ್ಕಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಶಾಂತಿಯುತ ಪರಿಹಾರಕ್ಕಾಗಿ ಸಾಧ್ಯವಿರುವ ಎಲ್ಲ ರೀತಿಯಲ್ಲೂ ಕೊಡುಗೆ ನೀಡಲು ಭಾರತವು ಬದ್ಧವಾಗಿದೆ ಎಂಬುದನ್ನು ತಾವು ಯೂಕ್ರೇನ್​ ಅಧ್ಯಕ್ಷರಿಗೆ ತಿಳಿಸಿದ್ದಾಗಿ ಮೋದಿ ಬರೆದುಕೊಂಡಿದ್ದಾರೆ.

ನಾವು ಎಲ್ಲರೊಂದಿಗೆ ಸಂಪರ್ಕ ಹೊಂದೆದ್ದೇವೆ!

ಪ್ರಧಾನಿ ಮೋದಿ, ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಜತೆ ದೂರವಾಣಿ ಸಂಭಾಷಣೆ ನಡೆಸುವ ಪೂರ್ವದಲ್ಲಿ, ವಿದೇಶಾಂಗ ಸಚಿವ ಎಸ್​. ಜೈಶಂಕರ್​, ಈ ಸಂಘರ್ಷ ಹಾಗೂ ಶಾಂತಿ ಸ್ಥಾಪಕೆ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್​ ಜತೆಗೆ ಮಾತುಕತೆ ನಡೆಸಿದ್ದಾಗಿ ತಿಳಿದು ಬಂದಿತ್ತು.

Also Read
'ಇದು ಸಮಾನ ನಾಗರಿಕ ಸಂಹಿತೆ ಅಲ್ಲ, ಹಿಂದೂ ನಾಗರಿಕ ಸಂಹಿತೆ': ದೇವೇಂದ್ರ ಫಡ್ನವೀಸ್ ವಿರುದ್ಧ ಓವೈಸಿ ಕಿಡಿನುಡಿ! Asaduddin Owaisi
Prime Minister Narendra Modi, in a conversation with Ukrainian President Volodymyr Zelenskyy, assured that India would provide assistance towards restoring peace in the Russia-Ukraine conflict.

ಈ ಮಾತುಕತೆ ಬಳಿಕ, ಮಾಧ್ಯಮಗೊಳೊಂದಿಗೆ ಮಾಹಿತಿ ಹಂಚಿಕೊಂಡಿದ್ದ ಜೈಶಂಕರ್​, ನಾನು ರಷ್ಯಾ, ಯೂಕ್ರೇನ್​, ಅಮೆರಿಕ ಸೇರಿದಂತೆ ಎಲ್ಲರ ಜತೆಗೆ ಸಂಪರ್ಕ ಹೊಂದಿದ್ದೇವೆ. ಸಂಘರ್ಷಮಯ ಸ್ಥಿತಿಯಲ್ಲಿ ಭಾರತ ಯಾವ ರೀತಿ ಸಹಾಯ ನೀಡಬಹುದು ಎಂದು ಚರ್ಚಿಸುತ್ತೇವೆ. ಅಂತಯೇ, ವಿಶ್ವದಲ್ಲಿ ಶಾಂತಿ ಸ್ಥಾಪಿಸುವುದು ನಮ್ಮ ಏಕಮೇವ ಗುರಿಯಾಗಿದೆ ಎಂದು ಹೇಳಿದ್ದರು.

ರಷ್ಯಾ-ಅಮೆರಿಕ ರಹಸ್ಯ ಒಪ್ಪಂದ!

ಈ ಸಂಘರ್ಷದ ಪ್ರಾರಂಭದಲ್ಲಿ ಯೂಕ್ರೇನ್​ ಪರ ನಿಂತಿದ್ದ ಅಮೆರಿಕ, ಇತ್ತೀಚಿನ ದಿನಗಳಲ್ಲಿ ರಷ್ಯಾ ಜತೆಗೆ ಒಳಒಪ್ಪಂದ ಮಾಡಿಕೊಂಡಿದೆ ಎಂಬ ಗುಮಾನಿ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ಎಂಬತೆ. ಇಷ್ಟು ವರ್ಷಗಳ ವರೆಗೆ ರಷ್ಯಾ ಹಾಗೂ ಪುಟಿನ್​ ವಿರುದ್ಧ ಕಿಡಿಕಾರುತ್ತಿದ್ದ, ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ನಾನು ನಮ್ಮ ದೇಶದಲ್ಲಿ ಶಾಂತಿಯನ್ನು ಮಾತ್ರ ಬಯಸುತ್ತೇವೆ. ಬೇಕಿದ್ದರೆ, ರಷ್ಯಾ ನಮ್ಮ ಕೆಲ ಭೂಭಾಗವನ್ನು ಪಡೆದರೂ ತೊಂದರೆ ಇಲ್ಲ ಎಂಬ ಹೇಳಿಕೆ ಈಗ ಜಾಗತಿಕ ರಾಜಕಾರಣದಲ್ಲಿ ತಲ್ಲಣಕ್ಕೆ ಕಾರಣವಾಗಿದೆ, (ಏಜೆನ್ಸೀಸ್​).