ಪಿಚ್ ರೋಲರ್ ಕೆಳಗೆ ಸಿಲುಕಿದ್ರೂ ಮತ್ತೆ ಮೈದಾನಕ್ಕಿಳಿದ್ರು; ಮಾಜಿ ಇಂಗ್ಲೆಂಡ್ ಆಟಗಾರನ ವಿಡಿಯೋ ವೈರಲ್ | Andros Townsend

ವಾರ್ಮ್‌ಅಪ್ ವೇಳೆ ಪಿಚ್ ರೋಲರ್‌ಗೆ ಸಿಲುಕಿದ ಆಂಡ್ರೋಸ್ ಟೌನ್‌ಸೆಂಡ್
ವಾರ್ಮ್‌ಅಪ್ ವೇಳೆ ಪಿಚ್ ರೋಲರ್‌ಗೆ ಸಿಲುಕಿದ ಆಂಡ್ರೋಸ್ ಟೌನ್‌ಸೆಂಡ್
Published on: 

ಪ್ರಮುಖ ಮುಖ್ಯಾಂಶಗಳು

  • ಪಿಚ್ ರೋಲರ್‌ಗೆ ಸಿಲುಕಿದ ಮಾಜಿ ಇಂಗ್ಲೆಂಡ್ ಆಟಗಾರ
  • ವಾರ್ಮ್‌ಅಪ್ ವೇಳೆ ಆಂಡ್ರೋಸ್ ಟೌನ್‌ಸೆಂಡ್‌ಗೆ ರೋಲರ್‌ ಡಿಕ್ಕಿ
  • ವಾರ್ಮ್‌ಅಪ್ ವೇಳೆ ಪಿಚ್ ರೋಲರ್‌ಗೆ ಸಿಲುಕಿದ ಆಂಡ್ರೋಸ್ ಟೌನ್‌ಸೆಂಡ್
Pitch Roller Accident: ಥೈಲ್ಯಾಂಡ್‌ನಲ್ಲಿ ಪಿಟಿ ಪ್ರಚುವಾಪ್ ಮತ್ತು ಪಟ್ಟಾನಿ ಎಫ್‌ಸಿ ಪಂದ್ಯಕ್ಕೂ ಮುನ್ನ ವಾರ್ಮ್‌ಅಪ್ ಮಾಡುತ್ತಿದ್ದ ಟೌನ್‌ಸೆಂಡ್ ಚೆಂಡಿಗಾಗಿ ಜಿಗಿದಿದ್ದಾರೆ. ಈ ವೇಳೆ ಹಿಂದಿನಿಂದ ಪಿಚ್ ರೋಲರ್ ಅವರತ್ತ ಬಂದಿದ್ದು, ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಚೆಂಡನ್ನು ಬ್ಯಾಕ್‌ಹೀಲ್ ಮಾಡಲು ಮುಂದಾದಾಗ ಟೌನ್‌ಸೆಂಡ್ ಪಿಚ್ ರೋಲರ್‌ಗೆ ಡಿಕ್ಕಿಯಾಗಿದ್ದಾರೆ. ಬಳಿಕ ನೆಲಕ್ಕೆ ಬಿದ್ದಿದ್ದು, ರೋಲರ್ ಅವರ ಮೇಲಿನಿಂದ ಹಾದುಹೋದಂತೆ ವಿಡಿಯೋದಲ್ಲಿ ಕಾಣಿಸುತ್ತೆ. ತಕ್ಷಣ ಚಾಲಕ ಕೆಳಗಿಳಿದು ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ಮತ್ತೆ ಮೈದಾನಕ್ಕಿಳಿದ ಆಟಗಾರ

ಭಯಾನಕ ಘಟನೆ ನಡೆದರೂ ಟೌನ್‌ಸೆಂಡ್ ಗಂಭೀರ ಗಾಯವಿಲ್ಲದೆ ಪಾರಾಗಿದ್ದಾರೆ ಎನ್ನಲಾಗಿದೆ. ಬಳಿಕ ಪಂದ್ಯದ ಸಿದ್ಧತೆಯನ್ನೂ ಮುಂದುವರಿಸಿದ್ದಾರೆ. ಅಚ್ಚರಿ ಅಂದ್ರೆ, ಪಿಟಿ ಪ್ರಚುವಾಪ್ 3-0 ಅಂತರದಲ್ಲಿ ಗೆದ್ದ ಪಂದ್ಯದಲ್ಲಿ 93ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದಿದ್ದಾರೆ. ಜೆಸ್ಪರ್ ನೈಹೋಮ್ ಬದಲಿಗೆ ಅವರು ಆಟಕ್ಕೆ ಬಂದಿದ್ದಾರೆ.
ಯಾರು ಈ ಆಂಡ್ರೋಸ್ ಟೌನ್‌ಸೆಂಡ್?
ಆಂಡ್ರೋಸ್ ಟೌನ್‌ಸೆಂಡ್ ಮಾಜಿ ಇಂಗ್ಲೆಂಡ್ ಅಂತರರಾಷ್ಟ್ರೀಯ ಆಟಗಾರ. ತಮ್ಮ ವೃತ್ತಿಜೀವನದಲ್ಲಿ ಟಾಟನ್‌ಹ್ಯಾಮ್ ಹಾಟ್ಸ್‌ಪರ್, ಕ್ರಿಸ್ಟಲ್ ಪ್ಯಾಲೆಸ್ ಮತ್ತು ಎವರ್ಟನ್ ಸೇರಿದಂತೆ ಹಲವು ಕ್ಲಬ್‌ಗಳ ಪರ ಆಡಿದ್ದಾರೆ.
ವಾರ್ಮ್‌ಅಪ್ ವೇಳೆ ನಡೆದ ಈ ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಪಿಚ್ ರೋಲರ್‌ನಿಂದ ಅಪಾಯ ಎದುರಾದರೂ ಕೆಲವೇ ಹೊತ್ತಿನಲ್ಲಿ ಟೌನ್‌ಸೆಂಡ್ ಪಂದ್ಯದಲ್ಲೇ ಕಾಣಿಸಿಕೊಂಡಿದ್ದು, ಈ ಘಟನೆಯನ್ನು ಮತ್ತಷ್ಟು ಗಮನ ಸೆಳೆಯುವಂತೆ ಮಾಡಿದೆ.(ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net