ಅಜ್ಜಿ ಕುಣಿಯೋದನ್ನು ನೋಡಿ ಸುಮ್ಮನಿರಲಿಲ್ಲ ಪೊಲೀಸ್; ಮಹಿಳೆ ಜತೆಗೆ ಸ್ಟೆಪ್ ಹಾಕಿದ ಖಾಕಿ! | Bijnor Police dance

ಅಜ್ಜಿ ಕುಣಿಯೋದನ್ನು ನೋಡಿ ಸುಮ್ಮನಿರಲಿಲ್ಲ ಪೊಲೀಸ್; ಮಹಿಳೆ ಜತೆಗೆ ಸ್ಟೆಪ್ ಹಾಕಿದ ಖಾಕಿ! Bijnor Police
ಅಜ್ಜಿ ಕುಣಿಯೋದನ್ನು ನೋಡಿ ಸುಮ್ಮನಿರಲಿಲ್ಲ ಪೊಲೀಸ್; ಮಹಿಳೆ ಜತೆಗೆ ಸ್ಟೆಪ್ ಹಾಕಿದ ಖಾಕಿ! Bijnor Police
Published on: 

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್ ಚೌಕಿ ಮುಂದೆ ಹಾಡಿನ ಸದ್ದಿಗೆ ಅಜ್ಜಿಯ ಡಾನ್ಸ್​
  • ಅಜ್ಜಿಯೊಂದಿಗೆ ಹೆಜ್ಜೆ ಹಾಕಿದ ಪೊಲೀಸ್ ಅಧಿಕಾರಿ
  • ಪೊಲೀಸ್ ಅಧಿಕಾರಿಯ ಮಾನವೀಯ ನಡೆಗೆ ನೆಟ್ಟಿಗರು ಫಿದಾ
Bijnor Police Viral Video: ಪೊಲೀಸ್ ಚೌಕಿ ಅಂದ್ರೆ ಗಂಭೀರ ವಾತಾವರಣ. ಆದ್ರೆ ಉತ್ತರ ಪ್ರದೇಶದಲ್ಲಿ ನಡೆದ ಈ ಘಟನೆ ಮಾತ್ರ ಎಲ್ಲರ ಗಮನ ಸೆಳೆಯುತ್ತಿದೆ. ಚೌಕಿ ಮುಂದೆ ಅಜ್ಜಿಯೊಬ್ಬರು ಹಾಡಿಗೆ ಖುಷಿಯಾಗಿ ಕುಣಿಯುತ್ತಿದ್ದಾಗ, ಪೊಲೀಸ್ ಅಧಿಕಾರಿಯೊಬ್ಬರೂ ಅವರ ಜತೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜ್ನೋರ್ ಜಿಲ್ಲೆಯ ಬೇಗಾವಾಲಾ ಪೊಲೀಸ್ ಚೌಕಿ ಮುಂಭಾಗದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಧ್ವನಿವರ್ಧಕದಲ್ಲಿ ಹಾಡು ಜೋರಾಗಿ ಕೇಳಿಬರುತ್ತಿದ್ದ ವೇಳೆ, ಅಲ್ಲಿಗೆ ಬಂದ ವಯಸ್ಸಾದ ಅಜ್ಜಿಯೊಬ್ಬರು ಯಾವುದೇ ಮುಜುಗರವಿಲ್ಲದೆ ಖುಷಿಯಿಂದ ಕುಣಿಯಲು ಶುರು ಮಾಡಿದ್ದರು.

ಅಜ್ಜಿ ಖುಷಿಗೆ ಪೊಲೀಸ್ ಸಾಥ್

ಅಜ್ಜಿ ಖುಷಿಯಾಗಿ ಕುಣಿಯೋದನ್ನು ಗಮನಿಸಿದ ಪೊಲೀಸ್ ಅಧಿಕಾರಿಯೊಬ್ಬರು ಠಾಣೆಯಿಂದ ಹೊರಬಂದು ಅವರ ಜತೆ ಕೆಲ ಕ್ಷಣ ಹೆಜ್ಜೆ ಹಾಕಿದ್ದಾರೆ. ಅಜ್ಜಿಯ ಸಂತೋಷಕ್ಕೆ ಸಾಥ್ ನೀಡಿದ ಅಧಿಕಾರಿಯ ಈ ನಡೆ ಇದೀಗ ಗಮನ ಸೆಳೆಯುತ್ತಿದೆ.
ಪೊಲೀಸ್ ನಡೆಗೆ ನೆಟ್ಟಿಗರ ಮೆಚ್ಚುಗೆ
ಸಾಮಾನ್ಯವಾಗಿ ಪೊಲೀಸ್ ಸಿಬ್ಬಂದಿಯನ್ನು ಗಂಭೀರವಾಗಿಯೇ ನೋಡ್ತೀವಿ. ಆದ್ರೆ ಇಲ್ಲಿ ಅಜ್ಜಿಯ ಖುಷಿಗೆ ಪೊಲೀಸ್ ಅಧಿಕಾರಿ ಕೂಡ ಸಾಥ್ ನೀಡಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಕರ್ತವ್ಯದ ನಡುವೆಯೂ ಸಾರ್ವಜನಿಕರ ಜೊತೆ ಸರಳವಾಗಿ ಬೆರೆತ ಅಧಿಕಾರಿಯ ನಡೆಗೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಕೆಲವೇ ಕ್ಷಣಗಳ ನೃತ್ಯ ಒಂದು ಸಿಂಪಲ್ ಸಂದೇಶ ಕೊಡುತ್ತೆ. ಖುಷಿಯಾಗಿರಲು ದೊಡ್ಡ ಕಾರಣ ಬೇಕಿಲ್ಲ; ಮನಸ್ಸಿಗೆ ಇಷ್ಟವಾದ ಕ್ಷಣವನ್ನು ಎಂಜಾಯ್ ಮಾಡಿದ್ರೆ ಸಾಕು. ಅಜ್ಜಿಯ ಖುಷಿಗೆ ಪೊಲೀಸ್ ಅಧಿಕಾರಿಯೂ ಜತೆಯಾದ ಈ ವಿಡಿಯೋ ಅದನ್ನೇ ನೆನಪಿಸುತ್ತೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net