ಟ್ರಂಪ್​ ಮಾಸ್ಟರ್​ ಪ್ಲಾನ್​ಗೆ ಶರಣಾದ ಇರಾನ್​? ಅಮೆರಿಕಾಗೆ ಸಂಸ್ಕರಿಸಿದ ಯುರೇನಿಯಂ ನೀಡಲು ಒಪ್ಪಿಗೆ! ಮಧ್ಯಪ್ರಾಚ್ಯದಲ್ಲಿ ಶಾಂತಿ ಶಕೆ ಆರಂಭ? US Iran Conflict

ಅಮೆರಿಕಾಗೆ ಸಂಸ್ಕರಿಸಿದ ಯುರೇನಿಯಂ ನೀಡಲು ಒಪ್ಪಿಗೆ ಸೂಚಿಸಿದ ಇರಾನ್​
ಅಮೆರಿಕಾಗೆ ಸಂಸ್ಕರಿಸಿದ ಯುರೇನಿಯಂ ನೀಡಲು ಒಪ್ಪಿಗೆ ಸೂಚಿಸಿದ ಇರಾನ್​
Published on

ಪ್ರಮುಖ ಮುಖ್ಯಾಂಶಗಳು

  • ಎರಡು ತಿಂಗಳಿನಿಂದ ನಡೆಯುತ್ತಿರುವ ಅಮೆರಿಕ ಇರಾನ್​ ಬಿಕ್ಕಟ್ಟ್ಟು
  • ಅಮೆರಿಕಾಗೆ ಸಂಸ್ಕರಿಸಿದ ಯುರೇನಿಯಂ ನೀಡಲು ಒಪ್ಪಿಗೆ ಸೂಚಿಸಿದ ಇರಾನ್​
  • ಮಧ್ಯಪ್ರಾಚ್ಯದಲ್ಲಿ ಶಾಂತಿ ಶಕೆ ಆರಂಭ? ಎನ್ನುವುತ್ತಿರುವ ಜಾಗತಿಕ ತಜ್ಞರು
ಅಮೆರಿಕ: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್​ ನಡುವೆ ಬಿಕ್ಕಟ್ಟು (US Iran Conflict) ಪ್ರಾರಂಭವಾಗಿ ಹೆಚ್ಚು ಕಡಿಮೆ ಎರಡು ತಿಂಗಳು ಕಳೆಯುತ್ತಾ ಬಂದರೂ ಶಾಶ್ವತ ಶಾಂತಿ ಇನ್ನು ಸಾಧ್ಯವಾಗಿರಲಿಲ್ಲ.
ಆದರೆ ಈಗ ಉಭಯ ದೇಶಗಳು ಮತ್ತೆ ಶಾಂತಿ ಸ್ಥಾಪನೆ ಕುರಿತು ಚರ್ಚೆ ನಡೆಸುತ್ತಿದ್ದು, ಇದರ ಭಾಗವಾಗಿ ಇರಾನ್​ ಸಂಸ್ಕರಿಸಿದ ಯುರೇನಿಯಂ (Enriched uranium) ನನ್ನು ಅಮೆರಿಕಾಗೆ ನೀಡಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

ಶಾಂತಿ ಸ್ಥಾಪನೆಯಾಗಲಿದೆ!

ವಾಷಿಂಗ್ಟನ್ ಮತ್ತು ಟೆಹ್ರಾನ್​ ಈಗ ಶಾಂತಿಯತ್ತ ಸಾಗುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿಕೆ ನೀಡಿದ ಬಳಿಕ ಈ ವಿದ್ಯಮಾನ ನಡೆದಿದೆ ಎಂದು ಹೇಳಲಾಗುತ್ತಿದೆ. ಅದೇ ರೀತಿ ಹೊರ್ಮುಜ್​ ಜಲಸಂಧಿಯನ್ನು ಮತ್ತೆ ಸಂಚಾರಯೋಗ್ಯ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಈ ಭಾರಿಯ ಶಾಂತಿ ಮಾತುಕತೆಯಲ್ಲಿ ಯಾವ್ಯಾವ ವಿಷಯಗಳ ಕುರಿತು ಮಾತುಕತೆ ನಡೆಯಲಿದೆ ಎಂಬ ನಿಖರ ಮಾಹಿತಿ ಇನ್ನು ಲಭ್ಯವಾಗಿಲ್ಲ.
ಅಮೆರಿಕಾಗೆ ಯುರೇನಿಯಂ ಏಕೆ ಬೇಕು?
ಈ ಸಂಘರ್ಷ ಪ್ರಾರಂಭವಾಗಲು ಬಲುಮುಖ್ಯ ಕಾರಣ ಎಂದರೆ ಇರಾನ್​ ಪರಮಾಣು ಅಸ್ತ್ರವನ್ನು ಹೊಂದಬಾರದು ಎಂಬ ಕಾರಣಕ್ಕೆ. ಪರಮಾಣು ಬಾಂಬ್​ನ್ನು ತಯಾರಿಸುವಲ್ಲಿ ಈ ಯುರೇನಿಯಂ ಬಹುಮುಖ್ಯ ಪಾತ್ರವನ್ನು ವಹಿಸುತ್ತಿದೆ. ಹೀಗಾಗಿ ಈ ಯುರೇನಿಯಂ ಮೇಲೆ ಅಮೆರಿಕಾಗೆ ಹಿಡಿತ ಮೊದಲಿಂದಲೂ ಬೇಕಿತ್ತು. ಈಗ ಮಾಹಿತಿ ಪ್ರಕಾರ ಇರಾನ್​ ಸುಮಾರು 400 ಕೆ.ಜಿ ಸಂಸ್ಕರಿಸಿದ ಯುರೇನಿಯಂ (Enriched uranium) ಯನ್ನು ಅಮೆರಿಕಾಗೆ ನೀಡಲು ಒಪ್ಪಿಗೆ ನೀಡಿರುವ ಕಾರಣ ಈ ಸಂಘರ್ಷ ಆದಷ್ಟು ಬೇಗ ಅಂತ್ಯವನ್ನು ಕಾಣಲಿದೆ ಎನ್ನುವುದು ಜಾಗತಿಕ ರಾಜಕೀಯ ತಜ್ಞರ ಅಭಿಪ್ರಾಯಬಾಗಿದೆ.
ಇದನ್ನೂ ಓದಿ: ವಿನೇಶ್ ಫೋಗಟ್‌ಗೆ ದೆಹಲಿ ಹೈಕೋರ್ಟ್ ಬಿಗ್ ರಿಲೀಫ್: ಏಷ್ಯನ್ ಗೇಮ್ಸ್ ಆಯ್ಕೆ ಪ್ರಕ್ರಿಯೆಗೆ ಭಾಗವಹಿಸಲು ಗ್ರೀನ್​ ಸಿಗ್ನಲ್​! Vinesh Phogat

ಯುರೇನಿಯಂ ಯಾವ-ಯಾವ ಕ್ಷೇತ್ರದಲ್ಲಿ ಬಳಕೆಯಾಗುತ್ತದೆ?

ಯುರೇನಿಯಂ ಒಂದು ಅತ್ಯಂತ ಶಕ್ತಿಶಾಲಿ ಮತ್ತು ಭಾರವಾದ ವಿಕಿರಣಶೀಲ ಧಾತುವಾಗಿದ್ದು, ಇದನ್ನು ಪರಮಾಣು ವಿದ್ಯುತ್‌ ಉತ್ಪಾದನೆಯಲ್ಲಿ ಬಳಕೆಯಾಗುತ್ತದೆ. ಯುರೇನಿಯಂ ಪರಮಾಣುಗಳನ್ನು ವಿಭಜಿಸುವ (Nuclear Fission) ಪ್ರಕ್ರಿಯೆಯ ಮೂಲಕ ಅಪಾರ ಪ್ರಮಾಣದ ಶಾಖವನ್ನು ಸೃಷ್ಟಿಸಲಾಗುತ್ತದೆ. ಈ ಶಾಖದಿಂದ ನೀರನ್ನು ಕಾಯಿಸಿ, ಉಗಿಯನ್ನು ಉತ್ಪಾದಿಸಿ, ಟರ್ಬೈನ್‌ಗಳನ್ನು ತಿರುಗಿಸುವ ಮೂಲಕ ಭಾರಿ ಪ್ರಮಾಣದ ವಿದ್ಯುತ್ ಶಕ್ತಿಯನ್ನು ಪಡೆಯಲಾಗುತ್ತದೆ.
ವಿದ್ಯುತ್ ಉತ್ಪಾದನೆಯ ಹೊರತಾಗಿ, ಯುರೇನಿಯಂ ಅನ್ನು ವೈದ್ಯಕೀಯ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಯುರೇನಿಯಂನಿಂದ ತಯಾರಾಗುವ ವಿಕಿರಣಶೀಲ ಐಸೊಟೋಪ್‌ಗಳನ್ನು ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಬಳಸಲಾಗುತ್ತದೆ.
ಮತ್ತೊಂದೆಡೆ, ಯುರೇನಿಯಂ ಅತ್ಯಂತ ಶಕ್ತಿಶಾಲಿ ರಕ್ಷಣಾ ಮತ್ತು ಮಿಲಿಟರಿ ಆಯುಧಗಳ ತಯಾರಿಕೆಗೆ ಮೂಲ ವಸ್ತುವಾಗಿದೆ. ಹೆಚ್ಚಿನ ಸಾಂದ್ರತೆಯುಳ್ಳ ಯುರೇನಿಯಂ ಅನ್ನು ಪರಮಾಣು ಬಾಂಬ್‌ಗಳು ಮತ್ತು ಕ್ಷಿಪಣಿಗಳಂತಹ ವಿಧ್ವಂಸಕ ಆಯುಧಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದಲ್ಲದೆ, ಯುರೇನಿಯಂನ ಕಚ್ಚಾ ವಸ್ತುಗಳಿಂದ ಮಿಲಿಟರಿ ಟ್ಯಾಂಕ್‌ಗಳ ಕವಚಗಳನ್ನು ಮತ್ತು ಯುದ್ಧನೌಕೆ ಹಾಗೂ ಜಲಾಂತರ್ಗಾಮಿಗಳಲ್ಲಿ ಇಂಧನವಾಗಿ ಸಹ ಬಳಸಲಾಗುತ್ತದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net