ಅಮೆರಿಕದಲ್ಲಿ ಏಕಾಏಕಿ ವಿಮಾನ ಸಂಚಾರ ಸ್ತಬ್ಧ! ಸಂವಹನ ವ್ಯವಸ್ಥೆ ಕೈಕೊಟ್ಟ ಬೆನ್ನಲ್ಲೇ ಎಲ್ಲಾ ವಿಮಾನಗಳ ಟೇಕ್-ಆಫ್ ರದ್ದುUS Airports

ವಿಶ್ವದ ಅತ್ಯಂತ ಬ್ಯುಸಿ ವಾಯುಮಾರ್ಗ ಹೊಂದಿರುವ ಅಮೆರಿಕದಲ್ಲಿ ಶುಕ್ರವಾರ ದಿಢೀರ್ ಸಂಚಾರ ಸ್ತಬ್ಧಗೊಂಡು ಆತಂಕದ ವಾತಾವರಣ ನಿರ್ಮಾಣವಾಗಿದೆ. ವಾಯು ಸಂಚಾರ ನಿಯಂತ್ರಣ ಕೇಂದ್ರಗಳ (ATC) ನಡುವಿನ ಸಂವಹನ ವ್ಯವಸ್ಥೆಯಲ್ಲಿ ಗಂಭೀರ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ದೇಶಾದ್ಯಂತ ಎಲ್ಲಾ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ತುರ್ತು ಆದೇಶ ಹೊರಡಿಸಿದೆ. . US Flight
ಅಮೆರಿಕದಲ್ಲಿ ತುರ್ತು ಪರಿಸ್ಥಿತಿ
ಅಮೆರಿಕದಲ್ಲಿ ತುರ್ತು ಪರಿಸ್ಥಿತಿWEB
Published on: 

ವಾಷಿಂಗ್ಟನ್: ವಿಶ್ವದ ಅತ್ಯಂತ ಬ್ಯುಸಿ ವಾಯುಮಾರ್ಗ ಹೊಂದಿರುವ ಅಮೆರಿಕದಲ್ಲಿ ಶುಕ್ರವಾರ ದಿಢೀರ್ ಸಂಚಾರ ಸ್ತಬ್ಧಗೊಂಡು ಆತಂಕದ ವಾತಾವರಣ ನಿರ್ಮಾಣವಾಗಿದೆ. ವಾಯು ಸಂಚಾರ ನಿಯಂತ್ರಣ ಕೇಂದ್ರಗಳ (ATC) ನಡುವಿನ ಸಂವಹನ ವ್ಯವಸ್ಥೆಯಲ್ಲಿ ಗಂಭೀರ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ದೇಶಾದ್ಯಂತ ಎಲ್ಲಾ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ತುರ್ತು ಆದೇಶ ಹೊರಡಿಸಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಅಮೆರಿಕದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡಿದ್ದು, ವಿಮಾನಗಳ ವಿಳಂಬ ಮತ್ತು ರದ್ದತಿಯಿಂದ ತೀವ್ರ ಪರದಾಡುವಂತಾಗಿದೆ.

ಆಕಾಶದಲ್ಲಿರುವ ವಿಮಾನಗಳಿಗೆ ಸೇಫ್, ನೆಲದ ಮೇಲಿದ್ದವಕ್ಕೆ 'ನೋ ಟೇಕ್-ಆಫ್'!

ಪ್ರಾದೇಶಿಕ ವಾಯು ಸಂಚಾರ ನಿಯಂತ್ರಣ ಕೇಂದ್ರಗಳಲ್ಲಿ ಸಂವಹನ ಸಂಪರ್ಕ ಕಡಿತಗೊಂಡ ಬೆನ್ನಲ್ಲೇ, ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿರುವ ಎಫ್‌ಎಎ 'ಗ್ರೌಂಡ್ ಸ್ಟಾಪ್' ಘೋಷಿಸಿದೆ. ಮುಂದಿನ ಆದೇಶದವರೆಗೆ ಯಾವುದೇ ವಿಮಾನ ಟೇಕ್-ಆಫ್ ಆಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಈ ಕುರಿತು ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅಮೆರಿಕದ ಸಾರಿಗೆ ಸಚಿವ ಸೀನ್ ಡಫಿ, "ತಾಂತ್ರಿಕ ಸಿಬ್ಬಂದಿ ಸಮಸ್ಯೆಯ ಮೂಲವನ್ನು ಪತ್ತೆಹಚ್ಚಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ. ಸಮಾಧಾನಕರ ಸಂಗತಿಯೆಂದರೆ, ಈಗಾಗಲೇ ಆಕಾಶದಲ್ಲಿ ಹಾರಾಟ ನಡೆಸುತ್ತಿರುವ ವಿಮಾನಗಳಿಗೆ ಯಾವುದೇ ತೊಂದರೆಯಾಗಿಲ್ಲ ಅವುಗಳ ಸುರಕ್ಷಿತ ಲ್ಯಾಂಡಿಂಗ್‌ಗೆ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ : ಚೆನ್ನೈ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ 1 ಕೋಟಿ ಮೌಲ್ಯದ ಮಾದಕ ವಸ್ತು ಪತ್ತೆ; ತಂದೆ-ಮಗ ಸೇರಿ ಮೂವರ ಬಂಧನ!chennai drugs

2023ರ ಬಳಿಕ ಮತ್ತೊಮ್ಮೆ ಇಂತಹದ್ದೊಂದು ತುರ್ತು ಪರಿಸ್ಥಿತಿ!

ಅಮೆರಿಕದ ಇತಿಹಾಸದಲ್ಲಿ ಇಡೀ ದೇಶದ ವಿಮಾನ ಸಂಚಾರಕ್ಕೆ ಬ್ರೇಕ್ ಹಾಕಿರುವುದು ಅತ್ಯಂತ ಅಪರೂಪ. 2001ರ ಸೆಪ್ಟೆಂಬರ್ 11ರ ಭೀಕರ ಭಯೋತ್ಪಾದಕ ದಾಳಿಯ ಬಳಿಕ ಇಂತಹ ನಿರ್ಬಂಧ ಹೇರಲಾಗಿತ್ತು. ತದನಂತರ 2023ರ ಜನವರಿಯಲ್ಲಿ ಕಂಪ್ಯೂಟರ್ ವ್ಯವಸ್ಥೆ ಕೈಕೊಟ್ಟಾಗ ವಿಮಾನಗಳು ಸ್ತಬ್ಧಗೊಂಡಿದ್ದವು. ಇದೀಗ ಮತ್ತೊಮ್ಮೆ ಅಂತಹದ್ದೇ ತುರ್ತು ಪರಿಸ್ಥಿತಿ ಎದುರಾಗಿರುವುದು ವಾಯುಯಾನ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಸೈಬರ್ ದಾಳಿಯ ಭೀತಿಗೆ ಬ್ರೇಕ್ ಹಾಕಿದ ಹೋಮ್‌ಲ್ಯಾಂಡ್ ಸೆಕ್ಯುರಿಟಿ

ಏಕಾಏಕಿ ಇಡೀ ದೇಶದ ವಿಮಾನ ಸಂಪರ್ಕ ಕಡಿತಗೊಂಡಿದ್ದರಿಂದ, ಇದರ ಹಿಂದೆ ಯಾವುದಾದರೂ ವಿದೇಶಿ ಶಕ್ತಿಗಳ ಸೈಬರ್ ದಾಳಿ ಅಥವಾ ವಿಧ್ವಂಸಕ ಕೃತ್ಯವಿದೆಯೇ ಎಂಬ ಆತಂಕ ಶುರುವಾಗಿತ್ತು. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಮಾರ್ಕ್‌ವೇನ್ ಮುಲ್ಲಿನ್, ಇದು ಕೇವಲ ದೂರಸಂಪರ್ಕ ವ್ಯವಸ್ಥೆಯಲ್ಲಿನ ತಾಂತ್ರಿಕ ವ್ಯತ್ಯಯವಷ್ಟೇ. ಇದರ ಹಿಂದೆ ಯಾವುದೇ ದುರುದ್ದೇಶಪೂರಿತ ಸೈಬರ್ ದಾಳಿಯ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಯಾಣಿಕರಿಗೆ ಪ್ರಮುಖ ಏರ್‌ಲೈನ್ಸ್‌ಗಳ ತುರ್ತು ಸಂದೇಶ

ಯುನೈಟೆಡ್ ಏರ್‌ಲೈನ್ಸ್: ತನ್ನ ಎಲ್ಲಾ ದೇಶೀಯ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವುದಾಗಿ ಘೋಷಿಸಿದ್ದು, ಅಂತರರಾಷ್ಟ್ರೀಯ ವಿಮಾನಗಳನ್ನು ಎಫ್‌ಎಎ ಮಾರ್ಗಸೂಚಿಯಂತೆ ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದೆ.

ಅಮೆರಿಕನ್ ಏರ್‌ಲೈನ್ಸ್: ನಿರ್ಬಂಧ ತೆರವಾದ ತಕ್ಷಣ ಪ್ರಯಾಣಿಕರನ್ನು ಸುರಕ್ಷಿತವಾಗಿ ಗಮ್ಯಸ್ಥಾನಕ್ಕೆ ತಲುಪಿಸಲು ಸಿಬ್ಬಂದಿ ಸನ್ನದ್ಧರಾಗಿದ್ದಾರೆ. ಆದರೂ ದಿನಪೂರ್ತಿ ವಿಮಾನಗಳ ವೇಳಾಪಟ್ಟಿಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.( ಏಜೇನ್ಸಿಸ್​)