ಕಣ್ಣೆದುರೇ ಅಸಭ್ಯ ವರ್ತನೆ ತೋರಿದರೂ ಸಿಬ್ಬಂದಿ ಅಲ್ಲೇ ಕೂರಿಸಿದ್ರು: ವಿಮಾನದಲ್ಲಿ ನಡೆದ ಘಟನೆ ನೆನೆದು ಮಹಿಳೆ ಕಣ್ಣೀರು | Women Passenger

ನನ್ನ ಮಾತಿಗೆ ಕ್ಯಾರೇ ಎನ್ನಲಿಲ್ಲ ಎಂದು ತೀವ್ರ ಬೇಸರ ಹೊರಹಾಕಿದ್ದಾರೆ. ಎನ್‌ಬಿಸಿ ವರದಿಯ ಪ್ರಕಾರ, ಈ ಘಟನೆಯು ಸೆ.3ರಂದು ನ್ಯೂಯಾರ್ಕ್‌ನ ರೋಚೆಸ್ಟರ್‌ನಿಂದ ನ್ಯೂವಾರ್ಕ್‌ಗೆ ಹೋಗುತ್ತಿದ್ದ ವಿಮಾನದಲ್ಲಿ ಬೆಳಗ್ಗಿನ ಸಮಯದಲ್ಲಿ ಸಂಭವಿಸಿದೆ ಎನ್ನಲಾಗಿದೆ.
Women Passenger
ಕಣ್ಣೆದುರೇ ಅಸಭ್ಯ ವರ್ತನೆ ತೋರಿದರೂ ಸಿಬ್ಬಂದಿ ಅಲ್ಲೇ ಕೂರಿಸಿದ್ರು
Published on: 

ಅಮೆರಿಕ: ನ್ಯೂಜೆರ್ಸಿಗೆ ತೆರಳುತ್ತಿದ್ದ ಯುನೈಟೆಡ್ಸ್ ಏರ್​ಲೈನ್ಸ್​ ವಿಮಾನದಲ್ಲಿ ತನ್ನ ಪಕ್ಕದಲ್ಲೇ ಕುಳಿತಿದ್ದ ಪ್ರಯಾಣಿಕನೊಬ್ಬ ತನ್ನೆದುರಿಗೆ ಪ್ಯಾಂಟ್​ನ ಜಿಪ್​ ಬಿಚ್ಚಿ ತೋರಿದ ಅನುಚಿತ ವರ್ತನೆ ಬಗ್ಗೆ ಇದೀಗ ಮಹಿಳೆ ದೂರು ನೀಡಿ ಕಣ್ಣೀರಾಕಿದ್ದಾರೆ (Women Passenger).

ನನ್ನ ಕಣ್ಣೆದುರೇ ಆತ ಪ್ಯಾಂಟ್​ ಬಿಚ್ಚಿ ಅನುಚಿತ ವರ್ತನೆ ತೋರಿದರೂ ಸಹ ವಿಮಾನದ ಸಿಬ್ಬಂದಿಗಳು ಕಣ್ಣು ಮುಚ್ಚಿ ಕುಳಿತಿದ್ದರು. ವ್ಯಕ್ತಿಯ ಅಸಭ್ಯ ನಡೆಯನ್ನು ಪ್ರಶ್ನಿಸಬೇಕಿದ್ದ ಸಿಬ್ಬಂದಿಯು ನನ್ನ ಮಾತಿಗೆ ಕ್ಯಾರೇ ಎನ್ನಲಿಲ್ಲ ಎಂದು ತೀವ್ರ ಬೇಸರ ಹೊರಹಾಕಿದ್ದಾರೆ. ಎನ್‌ಬಿಸಿ ವರದಿಯ ಪ್ರಕಾರ, ಈ ಘಟನೆಯು ಸೆ.3ರಂದು ನ್ಯೂಯಾರ್ಕ್‌ನ ರೋಚೆಸ್ಟರ್‌ನಿಂದ ನ್ಯೂವಾರ್ಕ್‌ಗೆ ಹೋಗುತ್ತಿದ್ದ ವಿಮಾನದಲ್ಲಿ ಬೆಳಗ್ಗಿನ ಸಮಯದಲ್ಲಿ ಸಂಭವಿಸಿದೆ ಎನ್ನಲಾಗಿದೆ.

ಸೀಟಿನಿಂದ ಎದ್ದು ನಿಂತೆ

ಮಹಿಳೆಯ ಹೇಳಿಕೆಯ ಪ್ರಕಾರ, ಆ ವ್ಯಕ್ತಿ ತನ್ನನ್ನು ದಿಟ್ಟಿಸುತ್ತಲೇ ಕೆಲ ಸಮಯ ನೋಡುತ್ತಿದ್ದ. ಪದೇ ಪದೇ ಕೈಯನ್ನು ಖಾಸಗಿ ಅಂಗದತ್ತ ಮುಟ್ಟಿಕೊಳ್ಳುತ್ತಿದ್ದ. ಯಾವಾಗ ಈತನ ವರ್ತನೆ ಕಂಡು ನಾನು ಸೀಟಿನಿಂದ ಎದ್ದು ನಿಂತೆ, ಆಗ ವಿಮಾನದ ಸಿಬ್ಬಂದಿಗಳು ನನ್ನ ದೂರಿನ ಬಳಿಕವೂ ಈಗ ಲ್ಯಾಂಡಿಂಗ್ ಆಗುವ ಸಮಯ, ಅಲ್ಲೇ ಕುಳಿತುಕೊಳ್ಳಿ ಎಂದು ಹೇಳಿದರು.

ಹೀಗೆ ಮಾಡುವುದರಿಂದ ನನಗೆ ಹಿಂಸೆ ಆಗುತ್ತಿದೆ ಎಂದು ಹೇಳಿದರೂ ಸಹ ಕಿವಿಗೆ ಹಾಕಿಕೊಳ್ಳದ ಸಿಬ್ಬಂದಿ, ಬೇರೆ ಯಾವುದೇ ಖಾಲಿ ಸೀಟಿಲ್ಲ ಮತ್ತು ಇದು ಲ್ಯಾಂಡಿಂಗ್ ಸಮಯ. ಹೀಗಾಗಿ ಇನ್ನು ಕೆಲವೇ ನಿಮಿಷಗಳ ಕಾಲ ಮಾತ್ರ, ಅಲ್ಲಿಯವರೆಗೆ ಅವರ ಪಕ್ಕದಲ್ಲೇ ಕುಳಿತುಕೊಳ್ಳಿ ಎಂದಿದ್ದಾಗಿ ಮಹಿಳಾ ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.

FAA ಮತ್ತು FBIಗೆ ದೂರು

ವಿಮಾನ ಲ್ಯಾಂಡ್​ ಆಗುತ್ತಿದ್ದಂತೆ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್, ಎಫ್​ಬಿಐ ಮತ್ತು ಯುನೈಟೆಡ್ ಏರ್‌ಲೈನ್ಸ್‌ಗೆ ಅಧಿಕೃತ ದೂರು ಸಲ್ಲಿಕೆ ಮಾಡಿದ ಮಹಿಳೆ, ಆ ವ್ಯಕ್ತಿ ಹಿಂದೆಯೂ ಇದೇ ರೀತಿ ಯಾರಿಗಾದರೂ ಮಾಡಿರಬಹುದು. ಬೆಳಗ್ಗೆ 6 ಗಂಟೆಯ ಸಮಯಕ್ಕೆ ಈತನ ಹೀಗೆ ವರ್ತಿಸಿದ್ದಾನೆ ಎಂದರೆ ಖಚಿತವಾಗಿ ಈ ಹಿಂದೆಯೂ ಯಾರೊಂದಿಗಾದರೂ ಇದೇ ರೀತಿಯಲ್ಲಿ ಅನುಚಿತವಾಗಿ ವರ್ತಿಸಿರುತ್ತಾನೆ ಎಂದಿದ್ದಾರೆ.

Also Read
ಟೆಲಿಗ್ರಾಂ ಗ್ರೂಪ್​ ರಚಿಸಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಸಂಚು ರೂಪಿಸುತ್ತಿದ್ದ ಆರೋಪ: ಯುವಕನನ್ನು ಬಂಧಿಸಿದ ಚಿಕ್ಕಬಳ್ಳಾಪುರ ಪೊಲೀಸರು! Terror Plot Foiled in Chikkaballapura
Women Passenger

ಏರ್​ಲೈನ್ಸ್​ ವಕ್ತಾರರು ಮಾತನಾಡಿ, "ನಮ್ಮ ಪ್ರಯಾಣಿಕರು ಮತ್ತು ಸಹೋದ್ಯೋಗಿಗಳ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆ. ನಾವು ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಅಷ್ಟಕ್ಕೂ ಏನಾಯಿತು ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ನಾವು ದೂರು ನೀಡಿರುವ ಮಹಿಳೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಮತ್ತು ಅವರ ಕಹಿ ಅನುಭವಕ್ಕಾಗಿ ಕ್ಷಮೆಯಾಚಿಸುತ್ತೇವೆ" ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net