ಮಧ್ಯಪ್ರಾಚ್ಯದಲ್ಲಿ ಮುಗಿಯದ ಯುದ್ಧ: ಹಾರ್ಮುಜ್ ಮೇಲೆ ಅಮೆರಿಕ ದಾಳಿ; ಬಹ್ರೇನ್, ಕುವೈತ್, ಜೊರ್ಡನ್ ಮೇಲೆ ಇರಾನ್ ಪ್ರತಿದಾಳಿ! Iran Attacks Bahrain, Kuwait, Jordan
ಬಹ್ರೇನ್, ಕುವೈತ್, ಜೊರ್ಡನ್‌ನಲ್ಲಿರುವ ಯುಎಸ್ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಧ್ಯಪ್ರಾಚ್ಯದಲ್ಲಿ ತಾರಕಕ್ಕೇರಿದ ಸಂಘರ್ಷ
ಅಮೆರಿಕದ ಅಪಾಚೆ ಹೆಲಿಕಾಪ್ಟರ್ ಹೊಡೆದುರುಳಿಸಿದ ಇರಾನ್
ಹಾರ್ಮುಜ್ ಮೇಲೆ ಅಮೆರಿಕ ದಾಳಿ
ಬಹ್ರೇನ್, ಕುವೈತ್, ಜೊರ್ಡನ್‌ನಲ್ಲಿರುವ ಯುಎಸ್ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ
ಇರಾನ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಶುರುವಾಗಿ ಸುಮಾರು ನೂರು ದಿನಗಳು ಕಳೆದರೂ ಸಹ ಶಾಂತಿ ಸ್ಥಾಪನೆಯ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ.
ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ ಹಿನ್ನಲೆ ಬುಧವಾರ (ಜೂ.10) ಇರಾನ್ ಕುವೈತ್, ಬಹ್ರೇನ್ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಜೊರ್ಡನ್ ಮೇಲೆ ಸಹ ಇರಾನ್ ಮಿಸೈಲ್ ದಾಳಿ (Iran Attacks Bahrain, Kuwait, Jordan) ನಡೆಸಿದೆ ಎಂದು ವರದಿಯಾಗಿದೆ.
ಹಾರ್ಮುಜ್ ಜಲಸಂಧಿ ಬಳಿ ಹಾರಾಟ ನಡೆಸುತ್ತಿದ್ದ ಅಮೆರಿಕದ ಆಧುನಿಕ ಅಪಾಚೆ ಹೆಲಿಕಾಪ್ಟರ್ನ್ನು ಇರಾನ್ ಹೊಡೆದು ಹಾಕಿದೆ ಎಂದು ಅಮೆರಿಕ ಹೇಳಿದೆ. ಈ ದಾಳಿಗೆ ಪ್ರತೀದಾಳಿಯಾಗಿ ಯುಎಸ್, ಇರಾನಿನ ಹಾರ್ಮುಜ್ ಬಳಿ ಭಾರಿ ಮಿಸೈಲ್ ದಾಳಿಯನ್ನು ನಡೆಸಿದೆ.
ಆದರೆ ಅಮೆರಿಕದ ಹೆಲಿಕಾಪ್ಟರ್ನ್ನು ಹೊಡೆದ ಬಗ್ಗೆ ಸ್ಪಷ್ಟನೆ ನೀಡದ ಇರಾನ್, ನಮ್ಮ ಭೂ ಪ್ರದೇಶದ ಮೇಲೆ ಅಮೆರಿಕ ದಾಳಿ ಮಾಡಿದೆ ಹೀಗಾಗಿ ನಾವು ಅಮೆರಿಕದ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಿದ್ದವೆ. ನಿಮಗೆ ಶಾಂತಿ ಸ್ಥಾಪನೆ ಅಗತ್ಯವಿದ್ದರೆ ನಮ್ಮ ವೈಮಾನಿಕ ಪ್ರದೇಶವನ್ನು ಬಿಟ್ಟು ಹೊರಡಿ ಎಂದು ಇರಾನ್ ವಿದೇಶಾಂಗ ಸಚಿವಾಲಯ ಗುಡುಗಿದೆ.
ರಕ್ಷಣೆಗೆ ಮುಂದಾದ ಬಹ್ರೇನ್, ಜೊರ್ಡನ್!
ಇತ್ತ ಅಮರಿಕ ಇರಾನ್ ಮೇಲೆ ದಾಳಿ ಮಾಡುತ್ತಿದ್ದಂತೆ ಇರಾನ್ ಕುವೈತ್, ಬಹ್ರೇನ್ ಮತ್ತು ಜೊರ್ಡನ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡಿದೆ.
ಜೊರ್ಡನ್ ಸಚಿವಾಲಯ ತಿಳಿಸಿದಂತೆ ಅವರು ಇರಾನ್ನಿಂದ ಬಂದ ಐದು ಮಿಸೈಲ್ಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇರಾನ್ ಜೊರ್ಡನ್ನ ಮುವಾಫಾಕ್ ಸಾಲ್ಟಿ ವಾಯುನೆಲೆ ಮೇಲೆ ದಾಳಿ ನಡೆಸಿದ್ದು, ಇಲ್ಲಿ ಅಮೆರಿಕದ ಶಕ್ತಿಶಾಲಿ ಯುದ್ಧವಿಮಾನವಾದ ಎಫ್-35 ಹೆಲಿಕಾಪ್ಟರ್ನ್ನು ಗುರಿಯಾಗಿಸಿ ದಾಳಿ ಮಾಡಿದೆ ಎಂದು ಹೇಳಲಾಗುತ್ತಿದೆ.
ಬಹ್ರೇನ್, ಕುವೈತ್ ಹಾಗೂ ಜೊರ್ಡನ್ ಈ ಮೂರು ದೇಶಗಳು ತಮ್ಮ ರಕ್ಷಣಾ ಕವಚವನ್ನು ಸಕ್ರೀಯಗೊಳಿಸಿಕೊಳ್ಳುತ್ತಿದ್ದು, ಇರಾನ್ನಿಂದ ಮುಂದೆ ಬರಲಿರುವ ಮಿಸೈಲ್ಗಳು ಹಾಗೂ ವೈಮಾನಿಕ ದಾಳಿಯನ್ನು ಹೇಗೆ ತಡೆಗಟ್ಟಬೇಕೆಂದು ಚರ್ಚೆ ನಡೆಸುತ್ತಿವೆ ಎಂದು ಮಾಹಿತಿ ಲಭ್ಯವಾಗಿದೆ, (ಏಜನ್ಸೀಸ್).