ಮೌಂಟ್ ಎವರೆಸ್ಟ್​ ಬಳಿ 2 ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ: ಓರ್ವ ಭಾರತೀಯ ಪ್ರಜೆ ಸಾವು, ಭೀಕರ ವಿಡಿಯೋ ವೈರಲ್​..! Helicopters Collide

Helicopters Collide
ಮೌಂಟ್ ಎವರೆಸ್ಟ್​ ಬಳಿ 2 ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ
Published on: 

ಕಾಠ್ಮಂಡು: ಸಾಲು ಸಾಲು ಪರ್ವತ ಶಿಖರಗಳ ನಡುವೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಎರಡು ಹೆಲಿಕಾಪ್ಟರ್‌ಗಳು ಲ್ಯಾಂಡಿಂಗ್ ವೇಳೆಯಲ್ಲಿ ಪರಸ್ಪರ ಡಿಕ್ಕಿಯಾದ ( Helicopters Collide ) ಪರಿಣಾಮ ಭಾರತೀಯ ಪ್ರಜೆಯೊಬ್ಬರು ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆ ಹಿಮಾಲಯದ ಮಡಿಲಲ್ಲಿರುವ ನೇಪಾಳದ ಹಿಮಾವೃತ ಸೊಲುಖುಂಬು ಜಿಲ್ಲೆಯಲ್ಲಿ ನಡೆದಿದೆ.

ನೇಪಾಳ ರಾಜಧಾನಿ ಕಾಠ್ಮಂಡುವಿನಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಸೊಲುಖುಂಬು ಜಿಲ್ಲೆಯ ಪ್ರಸಿದ್ಧ ಮೌಂಟ್ ಎವರೆಸ್ಟ್ ಸಮೀಪದ ಅತ್ಯಂತ ಎತ್ತರದ ಹೆಲಿಪೋರ್ಟ್‌ನಲ್ಲಿ ಹೆಲಿಕಾಪ್ಟರ್​ಗಳನ್ನು ಲ್ಯಾಂಡಿಂಗ್ ಮಾಡುವ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿ ಎರಡು ಹೆಲಿಕಾಪ್ಟರ್‌ಗಳು ಒಂದಕ್ಕೊಂದು ಭೀಕರವಾಗಿ ಡಿಕ್ಕಿ ಹೊಡೆದಿವೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಭಾರತೀಯ ಪ್ರಜೆ ವಸಂತ್ ಕುಮಾರ್ ಬಲರಾಮರಾಮಡು ಎಂಬುವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಕಾಠ್ಮಂಡು ಪೋಸ್ಟ್ ವರದಿ ಮಾಡಿದೆ.

Also Read
ಆಂಧ್ರ ಕರಾವಳಿಗೆ 'ಮುರಾಸು' ಹತ್ತಿರ! ಭಾರಿ ಮಳೆ, 120 ಕಿ.ಮೀ ವೇಗದ ಬಿರುಗಾಳಿ; ತಮಿಳುನಾಡು-ಪುದುಚೇರಿಯೂ ಹೈಅಲರ್ಟ್​ | Cyclone Murasu
Helicopters Collide

ಸೊಲುಖುಂಬು ಜಿಲ್ಲಾ ಪೊಲೀಸ್ ಉಸ್ತುವಾರಿ ನಬಿನ್ ರಾಜಾ ಬುಧಾಥೋಕಿ ಅವರು AFP ಸುದ್ದಿ ಸಂಸ್ಥೆಗೆ ಈ ಮಾಹಿತಿಯನ್ನು ಖಚಿತಪಡಿಸಿದ್ದು, ದುರಂತವನ್ನು ನೆದರ್ಲ್ಯಾಂಡ್ಸ್ ಪೊಲೀಸ್ ಇಲಾಖೆಯು ಅಧಿಕೃತ ಎಕ್ಸ್ (X) ಖಾತೆಯಲ್ಲಿ ಧೃಡಪಡಿಸಿದೆ.

ಪ್ರವಾಸೋದ್ಯಮದ ದೃಷ್ಟಿಯಿಂದ ನೇಪಾಳದ ಬೆಟ್ಟಗುಡ್ಡಗಳ ಸಾಲಿನಲ್ಲಿ ಹೆಲಿಕಾಪ್ಟರ್‌ಗಳು ಅತ್ಯಂತ ಪ್ರಮುಖ ಜೀವನಾಡಿಯಾಗಿ ಕೆಲಸ ಮಾಡುತ್ತವೆ. ದೈನಂದಿನ ಸರಕು ಸಾಗಣೆ, ಪರ್ವತಾರೋಹಿಗಳು ಮತ್ತು ವಿದೇಶಿ ಪ್ರವಾಸಿಗರ ಪ್ರಯಾಣ ಹಾಗೂ ತುರ್ತು ವೈದ್ಯಕೀಯ ರಕ್ಷಣಾ ಕಾರ್ಯಗಳಿಗೆ ಈ ಹೆಲಿಕಾಪ್ಟರ್‌ಗಳನ್ನೇ ಬಹುತೇಕ ನೆಚ್ಚಿಕೊಳ್ಳಲಾಗುತ್ತದೆ. ಪ್ರಪಂಚದ 14 ಅತ್ಯಂತ ಎತ್ತರದ ಪರ್ವತ ಶಿಖರಗಳಲ್ಲಿ 8 ಶಿಖರಗಳು ನೇಪಾಳದಲ್ಲೇ ಇರುವುದರಿಂದ ವರ್ಷವಿಡೀ ಸಾವಿರಾರು ದೇಶ-ವಿದೇಶಗಳ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಇಂತಹ ಎತ್ತರದ ಪ್ರದೇಶಗಳಲ್ಲಿ ವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ಹಾರಿಸುವುದು ಅತ್ಯಂತ ಸವಾಲಿನ ಮತ್ತು ಅಪಾಯಕಾರಿ ಕೆಲಸವಾಗಿದೆ.

ವಿಜ್ಞಾನ ಮತ್ತು ಹವಾಮಾನದ ಪ್ರಕಾರ, ಅತ್ಯಂತ ಎತ್ತರದ ಪರ್ವತ ಪ್ರದೇಶಗಳಲ್ಲಿ ಗಾಳಿಯ ಸಾಂದ್ರತೆ ಬಹಳ ಕಡಿಮೆಯಿರುತ್ತದೆ. ತೆಳುವಾದ ಗಾಳಿಯಿಂದಾಗಿ ಹೆಲಿಕಾಪ್ಟರ್‌ನ ರೋಟಾರ್ ಬ್ಲೇಡ್‌ಗಳಿಗೆ ಅಗತ್ಯ ಪ್ರಮಾಣದ 'ಲಿಫ್ಟ್' ಅಥವಾ ಎತ್ತರಕ್ಕೆ ಜಿಗಿಯುವ ಶಕ್ತಿ ದೊರೆಯುವುದಿಲ್ಲ. ಅಷ್ಟೇ ಅಲ್ಲದೆ, ಎಂಜಿನ್‌ಗೆ ದಹನ ಕ್ರಿಯೆಗೆ ಬೇಕಾದ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಎಂಜಿನ್ ಸಾಮರ್ಥ್ಯ ಹಠಾತ್ ಕುಸಿಯುತ್ತದೆ. ಇಂತಹ ವಾತಾವರಣದಲ್ಲಿ ಸ್ವಲ್ಪ ಹವಾಮಾನ ವೈಪರೀತ್ಯ ಅಥವಾ ತಾಂತ್ರಿಕ ದೋಷ ಎದುರಾದರೂ ಕಂಟ್ರೋಲ್ ತಪ್ಪಿ ಭೀಕರ ಅಪಘಾತಗಳು ಸಂಭವಿಸುತ್ತವೆ.

Also Read
ಅದೃಷ್ಟ ಅಂದ್ರೆ ಇದಪ್ಪ! ಕೂಲ್‌ಡ್ರಿಂಕ್ಸ್​ಗೆ​ ಹಣವಿಲ್ಲದೆ ಪರ್ಸ್ ಹುಡುಕಾಡಿದ ವ್ಯಕ್ತಿ ಈಗ 9.48 ಕೋಟಿ ರೂ. ಒಡೆಯ | Powerball tickets
Helicopters Collide

ಇತ್ತೀಚಿನ ದಿನಗಳಲ್ಲಿ ಇಂತಹ ಪರ್ವತ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ದುರಂತಗಳು ಹೆಚ್ಚುತ್ತಿರುವುದು ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸಿದೆ. ಕೇವಲ ಕೆಲವು ದಿನಗಳ ಹಿಂದೆಯಷ್ಟೇ ಭಾರತದ ಉತ್ತರಾಖಂಡದ ಬದರೀನಾಥದಲ್ಲಿ ಇದೇ ರೀತಿಯ ಹೈ-ಆಲ್ಟಿಟ್ಯೂಡ್ ಹೆಲಿಕಾಪ್ಟರ್ ಅಪಘಾತ ಸಂಭವಿಸಿತ್ತು. ಬದರೀನಾಥದಿಂದ ಟೇಕ್-ಆಫ್ ಆದ ತಕ್ಷಣವೇ ಹೆಲಿಕಾಪ್ಟರ್ ಪತನಗೊಂಡು ಪೈಲಟ್ ಹಾಗೂ ಐವರು ಪ್ರಯಾಣಿಕರು ಸೇರಿ 6 ಜನರು ದುರ್ಮರಣಕ್ಕೀಡಾದರು, (ಏಜೆನ್ಸೀಸ್​).