ಮತ್ತೊಂದೆಡೆ, ಈ ಬಿಕ್ಕಟ್ಟು ಬಗೆಹರಿಸಲು ನಡೆಯಬೇಕಿದ್ದ ಎರಡನೇ ಹಂತದ ಶಾಂತಿ ಮಾತುಕತೆಗಳು ಕೂಡ ವಿಫಲವಾಗಿವೆ. ಪಾಕಿಸ್ತಾನಕ್ಕೆ ತೆರಳಬೇಕಿದ್ದ ತನ್ನ ನಿಯೋಗದ ಪ್ರವಾಸವನ್ನು ಅಧ್ಯಕ್ಷ ಟ್ರಂಪ್ ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದ್ದಾರೆ. ಇರಾನ್ ನಾಯಕತ್ವದ ಬಗ್ಗೆ ಟೀಕಿಸಿದ ಟ್ರಂಪ್, ಅಲ್ಲಿ ಯಾರ ಮಾತು ನಡೆಯುತ್ತಿದೆ, ಯಾರ ಕೈಯಲ್ಲಿ ಅಧಿಕಾರವಿದೆ ಎಂಬುದೇ ಯಾರಿಗೂ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.