ಕಳೆದ 21 ದಿನಗಳಲ್ಲಿ ಇರಾನ್ ಬರೋಬ್ಬರಿ 2,200ಕ್ಕೂ ಹೆಚ್ಚು ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಯುಎಇ ಗುರಿಯಾಗಿಸಿ ಉಡಾಯಿಸಿದೆ. ಯುಎಇಯ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯು ಇದರಲ್ಲಿ ಶೇ. 95 ರಷ್ಟು ದಾಳಿಗಳನ್ನು ಯಶಸ್ವಿಯಾಗಿ ತಡೆದಿದ್ದರೂ, ಸತತ ಬೆದರಿಕೆಯಿಂದಾಗಿ ದೇಶದ ಆರ್ಥಿಕತೆ ಮತ್ತು ಸುರಕ್ಷತೆಗೆ ಧಕ್ಕೆಯುಂಟಾಗಿದೆ. ಕೇವಲ ಕದನ ವಿರಾಮ ಸಾಕಾಗದು, ಈ ಸಮಸ್ಯೆಗೆ ಶಾಶ್ವತ ಅಂತ್ಯ ಬೇಕು ಎಂದು ಅಮೆರಿಕದಲ್ಲಿರುವ ಯುಎಇ ರಾಯಭಾರಿ ನೀಡಿರುವ ಹೇಳಿಕೆ ಯುದ್ಧದ ಮುನ್ಸೂಚನೆಯನ್ನು ದೃಢಪಡಿಸಿದೆ.