ಅಮೆರಿಕದ ಅಹಂಕಾರಕ್ಕೆ ಇರಾನ್ ಬಲವಾದ ಏಟು! 2,247 ಕೋಟಿ ರೂಪಾಯಿ ಬೆಲೆಯ ವಿಮಾನಗಳು ಕ್ಷಣಾರ್ಧದಲ್ಲಿ ಭಸ್ಮ! US Aircraft Destroyed

ಅಮೆರಿಕದ ಅಹಂಕಾರಕ್ಕೆ ಇರಾನ್ ಬಲವಾದ ಏಟು! 2,247 ಕೋಟಿ ರೂಪಾಯಿ ಬೆಲೆಯ ವಿಮಾನಗಳು ಕ್ಷಣಾರ್ಧದಲ್ಲಿ ಭಸ್ಮ!
ಅಮೆರಿಕದ ಅಹಂಕಾರಕ್ಕೆ ಇರಾನ್ ಬಲವಾದ ಏಟು! 2,247 ಕೋಟಿ ರೂಪಾಯಿ ಬೆಲೆಯ ವಿಮಾನಗಳು ಕ್ಷಣಾರ್ಧದಲ್ಲಿ ಭಸ್ಮ!
Published on
ರಿಯಾದ್: ಮಧ್ಯಪ್ರಾಚ್ಯದ ರಣಾಂಗಣ ಈಗ ಅಕ್ಷರಶಃ ಬೆಂಕಿಯ ಉಂಡೆಯಂತಾಗಿದೆ. ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ ಅಮೆರಿಕ ವಾಯುಪಡೆಯ ಮೂರು ಅತ್ಯಾಧುನಿಕ KC-135 ಸ್ಟ್ರಾಟೋಟ್ಯಾಂಕರ್(US Aircraft Destroyed) ಇಂಧನ ಮರುಪೂರಣ ವಿಮಾನಗಳು ಸಂಪೂರ್ಣವಾಗಿ ನಾಶವಾಗಿವೆ. ಸೌದಿ ಅರೇಬಿಯಾದಲ್ಲಿರುವ ಪ್ರಿನ್ಸ್ ಸುಲ್ತಾನ್ ವಾಯುನೆಲೆ ಮೇಲೆ ನಡೆದ ಈ ದಾಳಿಯ ಉಪಗ್ರಹ ಚಿತ್ರಗಳು ಈಗ ಹೊರಬಂದಿದ್ದು, ಜಗತ್ತನ್ನೇ ಬೆಚ್ಚಿಬೀಳಿಸಿವೆ.

2,247 ಕೋಟಿ ರೂಪಾಯಿ ನಷ್ಟ!

ನಾಶವಾಗಿರುವ ಒಂದೊಂದು ವಿಮಾನದ ಬೆಲೆ ಅಂದಾಜು 79 ಮಿಲಿಯನ್ ಡಾಲರ್, ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 660 ಕೋಟಿಗೂ ಅಧಿಕವಾಗಿದ್ದು. ಒಟ್ಟು ಮೂರು ವಿಮಾನಗಳ ನಾಶದಿಂದ ಅಮೆರಿಕಕ್ಕೆ ಸುಮಾರು 2,247 ಕೋಟಿ ರೂಪಾಯಿಗಳಿಗೂ ಹೆಚ್ಚು ಆರ್ಥಿಕ ನಷ್ಟ ಸಂಭವಿಸಿದೆ. ಇವು ಕೇವಲ ವಿಮಾನಗಳಲ್ಲ, ಯುದ್ಧದ ಸಮಯದಲ್ಲಿ ಯುದ್ಧ ವಿಮಾನಗಳಿಗೆ ಆಕಾಶದಲ್ಲೇ ಇಂಧನ ತುಂಬಿಸುವ ಜೀವನಾಡಿಗಳಾಗಿದ್ದವು. ಇವುಗಳ ನಾಶದಿಂದ ಅಮೆರಿಕ ಮತ್ತು ಇಸ್ರೇಲ್‌ನ ವೈಮಾನಿಕ ಶಕ್ತಿಗೆ ದೊಡ್ಡ ಹೊಡೆತ ಬಿದ್ದಿದೆ.
ದಾಳಿಗೆ ಕಾರಣವೇನು..? ಇರಾನ್‌ನ ಪ್ರತೀಕಾರದ ಜ್ವಾಲೆ!
ಇತ್ತೀಚೆಗಷ್ಟೇ ಇಸ್ರೇಲ್ ಸೇನೆಯು ಇರಾನ್‌ನ ಎರಡು ಬೃಹತ್ ಉಕ್ಕು ಕಾರ್ಖಾನೆಗಳು, ಒಂದು ಪ್ರಮುಖ ವಿದ್ಯುತ್ ಸ್ಥಾವರ ಮತ್ತು ನಾಗರಿಕ ಪರಮಾಣು ಕೇಂದ್ರಗಳ ಮೇಲೆ ಭೀಕರ ದಾಳಿ ನಡೆಸಿತ್ತು. ಈ ದಾಳಿಯಿಂದ ಕೆರಳಿದ ಇರಾನ್, ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿತ್ತು. ಹೇಳಿದಂತೆಯೇ ಇರಾನ್, ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳ ಮಳೆಗರೆದಿದೆ. ಇಸ್ರೇಲ್‌ಗೆ ಬೆಂಬಲ ನೀಡುತ್ತಿರುವ ಅಮೆರಿಕಕ್ಕೆ ನೇರ ಪಾಠ ಕಲಿಸಲು ಇರಾನ್ ಈ ಸಾಹಸಕ್ಕೆ ಕೈಹಾಕಿದೆ.

ಉಪಗ್ರಹ ಚಿತ್ರಗಳಲ್ಲಿ ಕಂಡ ಭೀಕರ ದೃಶ್ಯ

ಹೊರಬಂದಿರುವ ಸ್ಯಾಟಲೈಟ್ ಚಿತ್ರಗಳಲ್ಲಿ ಅಮೆರಿಕದ ವಿಮಾನಗಳು ನಿಂತಿದ್ದ ಜಾಗದಲ್ಲಿ ಕೇವಲ ಕಪ್ಪಾದ ಬೂದಿ ಮತ್ತು ಭಸ್ಮಾವಶೇಷಗಳು ಮಾತ್ರ ಕಾಣಿಸುತ್ತಿವೆ. ಇರಾನ್‌ನ ಕ್ಷಿಪಣಿಗಳು ಅತ್ಯಂತ ನಿಖರವಾಗಿ ವಿಮಾನಗಳ ಮೇಲೆಯೇ ಬಿದ್ದಿರುವುದು ಈ ಚಿತ್ರಗಳಿಂದ ದೃಢಪಟ್ಟಿದೆ. ಇದು ಇರಾನ್‌ನ ಕ್ಷಿಪಣಿ ತಂತ್ರಜ್ಞಾನ ಎಷ್ಟು ಸುಧಾರಿಸಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಸಂಕಷ್ಟದಲ್ಲಿ ಅಮೆರಿಕ ಮತ್ತು ಸೌದಿ ಅರೇಬಿಯಾ

ಈ ದಾಳಿಯು ಅಮೆರಿಕದ ಮಿಲಿಟರಿ ಶಕ್ತಿಯನ್ನು ಪ್ರಶ್ನಿಸುವಂತೆ ಮಾಡಿದೆ. ಅತಿ ಹೆಚ್ಚು ರಕ್ಷಣೆ ಹೊಂದಿರುವ ಸೌದಿಯ ವಾಯುನೆಲೆಯೊಳಗೆ ನುಗ್ಗಿ ಇರಾನ್ ದಾಳಿ ಮಾಡಿರುವುದು ಇಡೀ ಗಲ್ಫ್ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ. ಇದು ಕೇವಲ ಎರಡು ದೇಶಗಳ ನಡುವಿನ ಯುದ್ಧವಾಗಿ ಉಳಿಯದೆ, ಅಮೆರಿಕವನ್ನು ನೇರವಾಗಿ ಯುದ್ಧಕ್ಕೆ ಎಳೆಯುವ ಸಂಚು ಎನ್ನಲಾಗುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net