ಇದೇ ವೇಳೆ ವರದಿಗಾರರೊಬ್ಬರು ಮಮ್ದಾನಿಗೆ, ನೀವು ಟ್ರಂಪ್ ಅವರನ್ನು ಫ್ಯಾಸಿಸ್ಟ್ ಎಂದು ಕರೆದಿದ್ದೀರಿ ಅದನ್ನು ಒಪ್ಪುತ್ತೀರಾ ಎಂದು ಕೇಳಿದಾಗ, ಮಮ್ದಾನಿ ಅದರ ಬಗ್ಗೆ ನಾನು ಮಾತನಾಡಿದ್ದೇನೆ ಎಂದು ವಿವರಣೆ ನೀಡಲು ಮುಂದಾದಾಗ ತಡೆದ ಟ್ರಂಪ್, ಅದು ಸರಿ, ಹೌದು ಎನ್ನಿ, ವಿವರಣೆ ನೀಡುವುದಕ್ಕಿಂತ ಸುಲಭ. ನನಗೆ ಅಭ್ಯಂತರವಿಲ್ಲ, ಎಡಪಂಥಿಯ ಮತ್ತು ಬಲಪಂಥೀಯ ನಾಯಕರು ವಿಭಿನ್ನ ಸಮಯದಲ್ಲಿ ಒಬ್ಬರನ್ನೊಬ್ಬರು ಕಮ್ಯೂನಿಷ್ಟ್, ಫ್ಯಾಸಿಸ್ಟ್ ಎಂದು ಕರೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).