ವಾಷಿಂಗ್ಟನ್‌ನಲ್ಲಿ 'ಟೈಟಾನಿಕ್' ಭಂಗಿಯ ಪುತ್ಥಳಿ: ಟ್ರಂಪ್-ಎಪ್ಸ್ಟೀನ್ ಜೋಡಿ ಕಂಡು ಶಾಕ್​ ಆದ ಅಮೆರಿಕನ್ಸ್​! Trump-Epstein in Titanic Pose

ಟೈಟಾನಿಕ್​ ಭಂಗಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು  ಜೆಫ್ರಿ ಎಪ್ಸ್ಟೀನ್
ಟೈಟಾನಿಕ್​ ಭಂಗಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಜೆಫ್ರಿ ಎಪ್ಸ್ಟೀನ್
Published on

ಪ್ರಮುಖ ಮುಖ್ಯಾಂಶಗಳು

  • ವಾಷಿಂಗ್ಟನ್‌ನಲ್ಲಿ ಡೊನಾಲ್ಡ್​ ಟ್ರಂಪ್​ ಮತ್ತು ಜೆಫ್ರಿ ಎಪ್ಸ್ಟೀನ್ ಪುತ್ಥಳಿ ಸ್ಥಾಪನೆ
  • ಟೈಟಾನಿಕ್​ ಸಿನಿಮಾದ ಭಂಗಿಯಲ್ಲಿರುವ ಪುತ್ಥಳಿ
  • ಇದೊಂದು ಅನಧಿಕೃತ ಪ್ರತಿಮೆ ಎಂದ ಅಮೆರಿಕದ ಅಧಿಕಾರಿಗಳು
ವಾಷಿಂಗ್ಟನ್​: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಯುತ್ತಿದ್ದರೆ, ಇತ್ತ ಅಮೆರಿಕದ ರಾಜಧಾನಿ ನಿವಾಸಿಗಳು ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಬಳಿ ಇರುವ ನ್ಯಾಷನಲ್ ಮಾಲ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್​ರನ್ನು ಹೋಲುವ ಪುತ್ಥಳಿಯನ್ನು ಪ್ರತಿಕಷ್ಠಾಪಿಸಿದ್ದಾರೆ.
ಇವರಿಬ್ಬರ ಪುತ್ಥಳಿಯನ್ನು ಐಕಾನಿಕ್​ ಸಿನಿಮಾ, ಟೈಟಾನಿಕ್​ ಭಂಗಿ (Trump-Epstein in Titanic Pose) ಯಲ್ಲಿ ನಿಲ್ಲಿಸಿದ್ದು, ಈ ಪುತ್ಥಳಿಯನ್ನು ಸೀಕ್ರೆಟ್ ಹ್ಯಾಂಡ್‌ಶೇಕ್ ಎಂಬ ಕಲಾವಿದ, ಕಿಂಗ್ ಆಫ್ ದಿ ವರ್ಲ್ಡ್ ಎಂಬ ಹೆಸರನ್ನು ನೀಡಿ ನಿರ್ಮಿಸಿದ್ದಾಗಿ ವರದಿಯಾಗಿದೆ. ಈ ಪುತ್ಥಳಿಯು ದಿಟ್ಟೋ ಟೈಟಾನಿಕ್​ ಸಿನಿಮಾದಲ್ಲಿ ಜ್ಯಾಕ್ ಮತ್ತು ರೋಸ್​ ಹಡಗಿನ ಮುಂಬಾಗದಲ್ಲಿ ನಿಲ್ಲುವ ಭಂಗಿಯನ್ನೇ ಹೋಲುತ್ತಿದೆ. ಈ ಪುತ್ಥಳಿಯು ಡೊನಾಲ್ಡ್ ಟ್ರಂಪ್ ಮತ್ತು ಜೆಫ್ರಿ ಎಪ್ಸ್ಟೀನ್ ನಡುವಿನ ಬಾಂಧವ್ಯವನ್ನು ಗೌರವಿಸುತ್ತದೆ ಎಂದು ಬರೆಯಲಾಗಿದೆ.
ಈಗ ಪ್ರವಾಸಿಗರು ಮತ್ತು ಸಂದರ್ಶಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪುತ್ಥಳಿಯ ಬಳಿ ಬಂದು ಫೋಟೊ ತೆಗೆದುಕೊಳ್ಳುತ್ತಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ. ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಎಪ್ಸ್ಟೀನ್ ನಡುವಿದ್ದ ಸಂಬಂಧದ ಬಗ್ಗೆ ಪರಿಶೀಲನೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಪ್ರತಿಮೆ ಪ್ರಕಟವಾಗಿದ್ದು, ಮುಂದೇನಾಗಲಿದೆ ಎಂದು ಕಾದು ನೋಡಬೇಕಾಗಿದೆ.

ಇದೊಂದು ಅನಧಿಕೃತ ಪ್ರತಿಮೆ

ಈ ಪ್ರತಿಮೆಯನ್ನು ವಾಷಿಂಗ್ಟನ್‌ನಲ್ಲಿ ಯಾವುದೇ ಪೂರ್ವ ಸೂಚನೆ ಇಲ್ಲದೆ,ಅನಾಮಧೇಯ ಕಲಾವಿದ ಸೀಕ್ರೆಟ್ ಹ್ಯಾಂಡ್‌ಶೇಕ್‌ ಅಧ್ಯಕ್ಷರ ವಿರುದ್ಧ ತನ್ನ ಪ್ರತಿಭಟನೆಯನ್ನು ತನ್ನ ಕಲಾಕೃತಿಯ ಮೂಲಕ ಪ್ರದರ್ಶಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಯುಎಸ್ ಕ್ಯಾಪಿಟಲ್‌ನ ಹೊರಗೆ ಟ್ರಂಪ್ ಮತ್ತು ಎಪ್ಸ್ಟೀನ್ ಕೈ ಹಿಡಿದುಕೊಂಡು ನಿಂತಿರುವ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಅದನ್ನು ಅಧಿಕಾರಿಗಳು ಕೂಡಲೇ ತೆಗೆದು ಹಾಕಿದ್ದರು.

ಅಧ್ಯಕ್ಷರು ನನ್ನನ್ನು ಸಂಭೋಗಕ್ಕೆ ಒತ್ತಾಯಿಸಿದ್ದರು

ಕಳೆದ ವಾರ, ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್‌ಮೆಂಟ್ ಆಫ್ ಜಸ್ಟೀಸ್ ಎಪ್ಸ್ಟೀನ್ ವಿರುದ್ಧ ಏಜೆನ್ಸಿಯ ತನಿಖೆಯ ಸಮಯದಲ್ಲಿ ಗುರುತಿಸಲಾಗದ ಮಹಿಳೆಯೊಂದಿಗೆ 2019 ರಲ್ಲಿ ನಡೆಸಿದ ಸಂದರ್ಶನಗಳನ್ನು ಎಫ್‌ಬಿಐ ದಾಖಲೆಗಳನ್ನು ಬಿಡುಗಡೆ ಮಾಡಿತು.
ಹೊಸದಾಗಿ ಬಹಿರಂಗಪಡಿಸಿದ ದಾಖಲೆಗಳ ಪ್ರಕಾರ, 1980 ರ ದಶಕದಲ್ಲಿ ನ್ಯೂಯಾರ್ಕ್ ಅಥವಾ ನ್ಯೂಜೆರ್ಸಿಯಲ್ಲಿ ಭವಿಷ್ಯದ ಅಧ್ಯಕ್ಷರಿಗೆ ಎಪ್ಸ್ಟೀನ್ ತನ್ನನ್ನು ಪರಿಚಯಿಸಿದ ನಂತರ, ತಾನು 13 ರಿಂದ 15 ವರ್ಷ ವಯಸ್ಸಿನವಳು ಎಂದು ಹೇಳಿದ ನಂತರ, ಟ್ರಂಪ್ ತನ್ನನ್ನು ಮೌಖಿಕ ಸಂಭೋಗಕ್ಕೆ ಒತ್ತಾಯಿಸಲು ಪ್ರಯತ್ನಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ. 2019 ರಲ್ಲಿ ಎಫ್‌ಬಿಐ ಏಜೆಂಟರು ಆ ಮಹಿಳೆಯನ್ನು ನಾಲ್ಕು ಬಾರಿ ಸಂದರ್ಶಿಸಿದ್ದರು ಎಂದು ತಿಳಿದು ಬಂದಿದೆ.
ಎಪ್ಸ್ಟೀನ್ ಅವರೊಂದಿಗಿನ ಸಂಬಂಧವು 2000 ರ ದಶಕದ ಮಧ್ಯಭಾಗದಲ್ಲಿ ಕೊನೆಗೊಂಡಿತು ಮತ್ತು ಹಣಕಾಸುದಾರರ ಲೈಂಗಿಕ ದೌರ್ಜನ್ಯದ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಟ್ರಂಪ್ ಪದೇ ಪದೇ ಹೇಳಿದ್ದಾರೆ. ಈ ಹಿಂದೆ ಬಿಡುಗಡೆಯಾದ ದಾಖಲೆಗಳು ಟ್ರಂಪ್ 1990 ರ ದಶಕದಲ್ಲಿ ಎಪ್ಸ್ಟೀನ್ ಅವರ ವಿಮಾನದಲ್ಲಿ ಹಲವಾರು ಬಾರಿ ಹಾರಾಟ ನಡೆಸಿದ್ದಾರೆ ಎಂದು ತೋರಿಸುತ್ತವೆ, ಆದರೆ ಟ್ರಂಪ್ ಅದನ್ನು ನಿರಾಕರಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net