ಇದು ಅಮೆರಿಕಾ ಅಲ್ಲ ಪಾಕಿಸ್ತಾನ: ದೇಶದಲ್ಲಿ ಹೆಚ್ಚುತ್ತಿರುವ ಇಸ್ಲಾಮೀಕರಣದ ಬಗ್ಗೆ ರಿಪಬ್ಲಿಕನ್ ಶಾಸಕನ ಕಿಡಿನುಡಿ | Islamization

ರಿಪಬ್ಲಿಕನ್ ಶಾಸಕ ಬ್ರಾಂಡನ್ ಗಿಲ್
ರಿಪಬ್ಲಿಕನ್ ಶಾಸಕ ಬ್ರಾಂಡನ್ ಗಿಲ್
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕಾದಲ್ಲಿ ಹೆಚ್ಚುತ್ತಿರುವ ಇಸ್ಲಾಮೀಕರಣಕ್ಕೆ ಕಾಂಗ್ರೆಸ್​ ಶಾಸಕ ಕಳವಳ
  • ಮಾಲ್​ಗಳಿಗೆ ಹೋದರೆ ನೀವು ಪಾಕಿಸ್ತಾನದಲ್ಲಿದಂತೆ ಭಾಸವಾಗುತ್ತದೆ : ಬ್ರಾಂಡನ್ ಗಿಲ್
  • ನಮ್ಮ ಪೂರ್ವಜನರು ನಡೆದಾಡಿದ ನೆಲದ ಮೇಲೆ ಮಸೀದಿಗಳು ತಲೆ ಎತ್ತುತ್ತಿವೆ
ಟೆಕ್ಸಾಸ್‌: ಅಮೆರಿಕದ ಟೆಕ್ಸಾಸ್‌ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಇಸ್ಲಾಮೀಕರಣ (Islamization) ದ ಬಗ್ಗೆ ಕಳವಳ ವ್ಯಕ್ತ ಪಡಿಸಿರುವ ಅಮೆರಿಕದ ಶಾಸಕರೊಬ್ಬರು, ಡಲ್ಲಾಸ್‌ನಲ್ಲಿರುವ ಮಾಲ್​ಗಳಿಗೆ ಭೇಟಿ ನೀಡಿದರೆ ನೀವು ಅಮೆರಿಕಾದಲ್ಲಿ ಅಲ್ಲ ಪಾಕಿಸ್ತಾನದಲ್ಲಿಂದೆ ಅನಿಸುತ್ತದೆ ಎಂಬ ಹೇಳಿಕೆ ನೀಡಿದ್ದಾರೆ.
ಡಲ್ಲಾಸ್ ಪ್ರದೇಶದಲ್ಲಿ ಇಸ್ಲಾಮೀಕರಣವು ವೇಗವಾಗಿ ಹಬ್ಬುತ್ತಿರುವುದು ಆಘಾತಕಾರಿಯಾಗಿದ್ದು, ಈ ಕುರಿತು ಜಾಗೃತರಾಗಿರಿ ಎಂದು ನಾನು ಅಮೆರಿಕನ್ನರಲ್ಲಿ ಕೇಳಿಕೊಳ್ಳುತ್ತೆನೆ ಎಂದು ಕಾಂಗ್ರೆಸ್ ಸದಸ್ಯ ಬ್ರಾಂಡನ್ ಗಿಲ್, ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನಮ್ಮ ಸಮುದಾಯ, ನಮ್ಮ ಸಂಸ್ಕೃತಿ, ಮತ್ತು ನಮ್ಮ ಸುತ್ತಮುತ್ತಲಿನ ಪ್ರದೇಶಗಳು ನಿಧಾನವಾಗಿ ರೂಪಾಂತರಗೊಳ್ಳುತ್ತಿರುವುದನ್ನು ನೀವು ನೋಡುತ್ತಿದ್ದೀರಿ. ಇದು ನನ್ನನ್ನು ಮತ್ತು ನನ್ನ ಮತದಾರರು ಕಳವಳಗೊಳ್ಳಲು ಕಾರಣವಾಗಿದೆ ಎಂದು ಗಿಲ್​ ಹೇಳಿದ್ದಾರೆ.
ರಿಪಬ್ಲಿಕನ್ ಶಾಸಕ ಬ್ರಾಂಡನ್ ಗಿಲ್ ನಮ್ಮ ಕುಟುಂಬಗಳು ತಲತಲಾಂತರದಿಂದ ಒಡೆತನ ಹೊಂದಿದ್ದ ಭೂಮಿಯಲ್ಲಿ ಈಗ ಮಸೀದಿಗಳು ತಲೆ ಎತ್ತುತ್ತಿವೆ. ನೀವು ಸ್ಥಳೀಯ ಯಾವುದೇ ಮಾರುಕಟ್ಟೆಗೆ ಹೋಗಿ ಅಲ್ಲಿನ ವಾತಾವರಣವನ್ನು ಗಮನಿಸಿದಾಗ, ನಾವು ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಅಲ್ಲ, ಬದಲಿಗೆ ಪಾಕಿಸ್ತಾನದಲ್ಲಿ ಇದ್ದಂತೆ ಭಾಸವಾಗುತ್ತಿದೆ ಎಂದು ಹೇಳಿದ್ದಾರೆ.
ಬ್ರಾಂಡನ್ ಗಿಲ್ಸ್ ಮತ್ತು ಭಾರತದ ಸಂಬಂಧ
ಬ್ರಾಂಡನ್ ಗಿಲ್ ಅಮೆರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಟೆಕ್ಸಾಸ್‌ನ 26 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್​ನ ಪ್ರತಿನಿಧಿಯಾಗಿದ್ದಾರೆ. ಬ್ರಾಂಡನ್ ಗಿಲ್ ಭಾರತೀಯ ಮೂಲದ ಅಮೇರಿಕನ್ ನಿರೂಪಕ ಮತ್ತು ಟ್ರಂಪ್ ಮಿತ್ರ ದಿನೇಶ್ ಡಿಸೋಜಾ ಅವರ ಪುತ್ರಿ, ಡೇನಿಯಲ್ ಡಿಸೋಜಾ ಅವರ ಗಂಡನಾಗಿದ್ದಾರೆ.
ಈ ದಂಪತಿಗಳು ಈ ಹಿಂದೆ ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಮೂಲದ ಡೆಮೋಕ್ರಾಟ್ ಜೋಹ್ರಾನ್ ಮಮ್ದಾನಿ ಅವರ ಬಗ್ಗೆ ಮಾಡಿದ ಹೇಳಿಕೆಗಳು ವಿವಾದವಾಗಿ ಪರಿಣಮಿಸಿದ್ದವು. ಜೋಹ್ರಾನ್ ಮಮ್ದಾನಿ ತಮ್ಮ ಕೈಗಳಿಂದ ಅನ್ನ ತಿನ್ನುತ್ತಿರುವ ವೀಡಿಯೊವನ್ನು ಹಂಚಿಕೊಂಡಾಗ ವಿವಾದ ಪ್ರಾರಂಭವಾಯಿತು. ಗಿಲ್ ಆ ವಿಡಿಯೋಗೆ, ಅಮೆರಿಕದಲ್ಲಿ ನಾಗರಿಕ ಜನರು ಈ ರೀತಿ ತಿನ್ನುವುದಿಲ್ಲ. ನೀವು ಪಾಶ್ಚಿಮಾತ್ಯ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ನಿರಾಕರಿಸಿದರೆ, ನೀವು ಎಲ್ಲಿಂದ ಬಂದಿದ್ದಿಯೋ ಅಲ್ಲಿಗೆ ಹಿಂತಿರುಗು ಎಂದು ಕಾಮೆಂಟ್​ ಮಾಡಿದ್ದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net