ಪತಿಗೆ ಡಿವೋರ್ಸ್, ಪುಟ್ಟ ಹಂದಿಗೆ ವೆಲ್‌ಕಮ್! ಇದು ಅಮೆರಿಕನ್ ಮಹಿಳೆಯ ಕನಸಿನ ಜೀವನ. US woman pet pig

ದಾಂಪತ್ಯ ಜೀವನದಲ್ಲಿ ಕೆಲವೊಂದು ಕನಸುಗಳು ನನಸಾಗದೆ ಕಮರಿಹೋಗುತ್ತವೆ. ಸಂಗಾತಿಯ ಒಪ್ಪಿಗೆ ಇಲ್ಲ ಎಂಬ ಒಂದೇ ಕಾರಣಕ್ಕೆ ತಮ್ಮಿಷ್ಟದ ಹವ್ಯಾಸಗಳನ್ನೇ ಬದಿಗಿಡುವವರೂ ಇದ್ದಾರೆ. ಆದರೆ ಅಮೆರಿಕದ ಮಹಿಳೆಯೊಬ್ಬರು ತಮ್ಮ 10 ವರ್ಷಗಳ ದಾಂಪತ್ಯಕ್ಕೆ ಪೂರ್ಣವಿರಾಮ ಹಾಕಿದ ಬೆನ್ನಲ್ಲೇ, ವರ್ಷಗಳಿಂದ ಮನಸ್ಸಿನಲ್ಲೇ ಬಚ್ಚಿಟ್ಟುಕೊಂಡಿದ್ದ ವಿಚಿತ್ರ ಹಾಗೂ ಮುದ್ದಾದ ಆಸೆಯೊಂದನ್ನು ನನಸು ಮಾಡಿಕೊಂಡಿದ್ದಾರೆ. US woman pet pig
ಪತಿಗೆ ಡಿವೋರ್ಸ್, ಪುಟ್ಟ ಹಂದಿಗೆ ವೆಲ್‌ಕಮ್
ಪತಿಗೆ ಡಿವೋರ್ಸ್, ಪುಟ್ಟ ಹಂದಿಗೆ ವೆಲ್‌ಕಮ್WEB
Published on: 

ನ್ಯೂಯಾರ್ಕ್: ದಾಂಪತ್ಯ ಜೀವನದಲ್ಲಿ ಕೆಲವೊಂದು ಕನಸುಗಳು ನನಸಾಗದೆ ಕಮರಿಹೋಗುತ್ತವೆ. ಸಂಗಾತಿಯ ಒಪ್ಪಿಗೆ ಇಲ್ಲ ಎಂಬ ಒಂದೇ ಕಾರಣಕ್ಕೆ ತಮ್ಮಿಷ್ಟದ ಹವ್ಯಾಸಗಳನ್ನೇ ಬದಿಗಿಡುವವರೂ ಇದ್ದಾರೆ. ಆದರೆ ಅಮೆರಿಕದ ಮಹಿಳೆಯೊಬ್ಬರು ತಮ್ಮ 10 ವರ್ಷಗಳ ದಾಂಪತ್ಯಕ್ಕೆ ಪೂರ್ಣವಿರಾಮ ಹಾಕಿದ ಬೆನ್ನಲ್ಲೇ, ವರ್ಷಗಳಿಂದ ಮನಸ್ಸಿನಲ್ಲೇ ಬಚ್ಚಿಟ್ಟುಕೊಂಡಿದ್ದ ವಿಚಿತ್ರ ಹಾಗೂ ಮುದ್ದಾದ ಆಸೆಯೊಂದನ್ನು ನನಸು ಮಾಡಿಕೊಂಡಿದ್ದಾರೆ, ಅಷ್ಟಕ್ಕೂ ಆ ಕನಸೇನು ಗೊತ್ತಾ? ಮನೆಯಲ್ಲಿ ಮುದ್ದಿನ ಹಂದಿಯೊಂದನ್ನು ಸಾಕುವುದು

ಅಮೆರಿಕದ ನ್ಯಾಶ್‌ವಿಲ್ಲೆ ನಿವಾಸಿ 33 ವರ್ಷದ ಗೈಲಾ ಥಾಂಪ್ಸನ್, ವಿಚ್ಛೇದನದ ನೋವಿನಿಂದ ಹೊರಬಂದು ಹೊಸ ಬದುಕಿಗೆ ಮುನ್ನುಡಿ ಬರೆಯಲು ಪುಟ್ಟ ಸಾಕುಹಂದಿಯೊಂದನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ಡೈಸಿ ಎಂದು ಪ್ರೀತಿಯಿಂದ ಕರೆಯಲ್ಪಡುವ ಈ ಮುದ್ದು ಹಂದಿ ಈಗ ಗೈಲಾ ಅವರ ಮನೆಯ ರಾಜಕುಮಾರಿ ಮಾತ್ರವಲ್ಲ, ಇಡೀ ಊರಿನ ಕಣ್ಮಣಿಯಾಗಿರುವ ಪುಟ್ಟ ಸೆಲೆಬ್ರಿಟಿ

ಪುಟ್ಟ ಹಂದಿ
ಪುಟ್ಟ ಹಂದಿWEB

ಮಾಜಿ ಪತಿಗೆ ಇಷ್ಟವಿರಲಿಲ್ಲ, ಡಿವೋರ್ಸ್ ಬಳಿಕ ಕನಸು ನನಸು

ಗೈಲಾ ಥಾಂಪ್ಸನ್ ಅವರಿಗೆ ಬಾಲ್ಯದಿಂದಲೂ ಮನೆಯಲ್ಲಿ ಹಂದಿಯೊಂದನ್ನು ಸಾಕಬೇಕೆಂಬ ಅಪರಿಮಿತ ಆಸೆಯಿತ್ತು. ಆದರೆ, ಅವರ ಮಾಜಿ ಪತಿ ಇದಕ್ಕೆ ಸುತಾರಾಂ ಒಪ್ಪಿರಲಿಲ್ಲ. ಹೀಗಾಗಿ 10 ವರ್ಷಗಳ ಕಾಲ ತಮ್ಮ ಕನಸನ್ನು ಮನಸ್ಸಿನಲ್ಲೇ ಹುದುಗಿಟ್ಟುಕೊಂಡಿದ್ದರು. ದಾಂಪತ್ಯ ಜೀವನ ಮುರಿದುಬಿದ್ದು ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಗೈಲಾ ತಡಮಾಡಲಿಲ್ಲ. 2025ರ ನವೆಂಬರ್‌ನಲ್ಲಿ ಕೇವಲ ಎಂಟು ವಾರಗಳ ಪುಟ್ಟ, ಮುದ್ದಾದ ಹಂದಿಮರಿಯನ್ನು ಮನೆಗೆ ಕರೆತಂದರು. ಆಗ ಕೇವಲ 9 ಪೌಂಡ್ ತೂಕವಿದ್ದ ಪುಟ್ಟ ಜೀವಕ್ಕೆ 'ಡೈಸಿ' ಎಂದು ನಾಮಕರಣ ಮಾಡಿ, ತಮ್ಮ ಹೊಸ ಬದುಕಿನ ಅಧ್ಯಾಯವನ್ನು ಆರಂಭಿಸಿದರು.

ತಮ್ಮ ನಿರ್ಧಾರದ ಬಗ್ಗೆ ಖುಷಿಯಿಂದ ಮಾತನಾಡಿರುವ ಗೈಲಾ, ನನ್ನ ಮಾಜಿ ಪತಿ ಮನೆಯಲ್ಲಿ ಹಂದಿ ಸಾಕಲು ಎಂದಿಗೂ ಒಪ್ಪುತ್ತಿರಲಿಲ್ಲ. ವಿಚ್ಛೇದನದ ಬಳಿಕ ನನ್ನ ಕನಸಿನ ಹಂದಿಯನ್ನು ಮನೆಗೆ ತರುವುದೇ ಹೊಸ ಜೀವನ ಶುರುಮಾಡಲು ನನಗಿದ್ದ ಅತ್ಯುತ್ತಮ ದಾರಿಯಾಗಿತ್ತು ಎಂದಿದ್ದಾರೆ. ಇಷ್ಟಕ್ಕೇ ನಿಲ್ಲದ ಗೈಲಾ, ನಾನು ಒಂದು ಹಂದಿಯ ಬದಲಿಗೆ ಮತ್ತೊಂದು ಮುದ್ದಾದ ಹಂದಿಯನ್ನು ಬದಲಾಯಿಸಿಕೊಂಡಿದ್ದೇನೆ ಎಂದು ಮಾಜಿ ಪತಿಗೆ ಸಖತ್ ಪಂಚ್ ಕೊಡುವ ಮೂಲಕ ತಮ್ಮ ಹಾಸ್ಯಪ್ರಜ್ಞೆಯನ್ನೂ ಮೆರೆದಿದ್ದಾರೆ

ಇದನ್ನೂ ಓದಿ : 26 ಮಂದಿಯನ್ನು ಬಲಿಪಡೆದ ಭೀಕರ ಅಪಘಾತ; ಸಾವಿನ ದವಡೆಯಿಂದ ಪವಾಡದಂತೆ ಪಾರಾದ 2 ವರ್ಷದ ಕಂದಮ್ಮ! Death News

ಮನೆಯ ಕಪಾಟುಗಳನ್ನೇ ತೆರೆಯುವ ತುಂಟ ಡೈಸಿ

ಮನೆಗೆ ಬಂದಾಗ ಕೇವಲ 9 ಪೌಂಡ್ ಇದ್ದ ಪುಟ್ಟ ಡೈಸಿ, ಈಗ ಭರ್ತಿ 50 ಪೌಂಡ್ ತೂಕದಷ್ಟು ಬೆಳೆದು ನಿಂತಿದೆ. ಮನೆಯೊಳಗೇ ರಾಜಾರೋಷವಾಗಿ ಓಡಾಡಿಕೊಂಡಿರುವ ಡೈಸಿಯ ತುಂಟಾಟಗಳು ಗೈಲಾಗೆ ನಿತ್ಯವೂ ಹೊಸ ಮನರಂಜನೆ ಹಾಗೂ ಸವಾಲುಗಳನ್ನು ನೀಡುತ್ತಿವೆ.

ಡೈಸಿಗೆ ಮೂರು ತಿಂಗಳಿದ್ದಾಗಲೇ ಅಡುಗೆಮನೆಯ ಕಪಾಟುಗಳನ್ನು ತನ್ನ ಮೂತಿಯಿಂದಲೇ ತೆರೆಯುವ ಕಲೆಯನ್ನು ಕರಗತ ಮಾಡಿಕೊಂಡಿತ್ತಂತೆ, ಕಪಾಟಿನಲ್ಲಿದ್ದ ವಸ್ತುಗಳನ್ನೆಲ್ಲಾ ಹೊರಗೆಳೆದು ಚೆಲ್ಲಾಪಿಲ್ಲಿ ಮಾಡುವುದು ಅದರ ಫೇವರಿಟ್ ಆಟ. ಹಂದಿಗಳಿಗೆ ಸಹಜವಾಗಿಯೇ ನೆಲವನ್ನು ಮೂಗಿನಿಂದ ಅಗೆಯುವ ಮತ್ತು ಕೆದಕುವ ಸ್ವಭಾವವಿರುವುದರಿಂದ, ಮನೆಯ ಬೆಲೆಬಾಳುವ ವಸ್ತುಗಳು ಹಾಗೂ ಕಾರ್ಪೆಟ್‌ಗಳನ್ನು ಡೈಸಿಯ ತುಂಟಾಟದಿಂದ ರಕ್ಷಿಸಲು ಗೈಲಾ ವಿಶೇಷ ಎಚ್ಚರಿಕೆ ವಹಿಸಬೇಕಾಯಿತು.

'ಚಾರ್ಲೆಟ್ಸ್ ವೆಬ್' ಚಿತ್ರದ ಹುಡುಗಿಯೇ ನಾನು

ಡೈಸಿಯೊಂದಿಗಿನ ತಮ್ಮ ಅಪರೂಪದ ಬಾಂಧವ್ಯವನ್ನು ನೆನೆಯುವ ಗೈಲಾ, ಹಾಲಿವುಡ್‌ನ ಜನಪ್ರಿಯ 'ಚಾರ್ಲೆಟ್ಸ್ ವೆಬ್' (Charlotte's Web) ಸಿನಿಮಾದ ಪುಟ್ಟ ಹುಡುಗಿಯ ಪಾತ್ರವನ್ನು ನೆನಪಿಸಿಕೊಳ್ಳುತ್ತಾರೆ. ಆ ಸಿನಿಮಾದಲ್ಲಿ ಹಂದಿಯ ಮೇಲೆ ಅಪಾರ ಪ್ರೀತಿ ತೋರಿಸುವ ಪುಟ್ಟ ಹುಡುಗಿ ನಾನೇ ಎಂದು ನನಗೆ ಭಾಸವಾಗುತ್ತದೆ ಎನ್ನುತ್ತಾರೆ ಅವರು.

ಗೈಲಾ ಅವರಿಗೆ ಮೂಕಪ್ರಾಣಿಗಳ ಮೇಲಿನ ಈ ಪ್ರೀತಿ ಹೊಸದೇನಲ್ಲ. ಈ ಹಿಂದೆಯೂ ಗಾಯಗೊಂಡಿದ್ದ ಅನೇಕ ಪುಟ್ಟ ಪಕ್ಷಿಗಳನ್ನು ರಕ್ಷಿಸಿ, ಅವುಗಳಿಗೆ ಆರೈಕೆ ಮಾಡಿ ಮರುಜೀವ ನೀಡಿದ್ದಾರೆ. "ನಾನು ಯಾವಾಗಲೂ ಪುಟ್ಟ ಪಕ್ಷಿಗಳನ್ನು ರಕ್ಷಿಸಿ ಬೆಳೆಸುತ್ತಿದ್ದೆ. ಹೀಗಿರುವಾಗ ಮನೆಯಲ್ಲಿ ಹಂದಿಯನ್ನು ಸಾಕುವುದು ನನಗೆ ದೊಡ್ಡ ವಿಷಯವೇನಲ್ಲ. ಇದು ನನ್ನ ಬಹುದಿನಗಳ ಕನಸಾಗಿತ್ತು, ಕೊನೆಗೂ ಅದನ್ನು ನನಸಾಗಿಸಿಕೊಂಡಿದ್ದೇನೆ" ಎಂದು ಗೈಲಾ ಸಂತಸ ವ್ಯಕ್ತಪಡಿಸಿದ್ದಾರೆ. ಒಂದು ದಾಂಪತ್ಯದ ಅಂತ್ಯ ಗೈಲಾ ಅವರ ಜೀವನದಲ್ಲಿ ಹೊಸ ಬೆಳಕು ಹಾಗೂ ಕನಸಿನ ಆರಂಭಕ್ಕೆ ನಾಂದಿ ಹಾಡಿದೆ. ಡೈಸಿಯ ಕ್ಯೂಟ್ ತುಂಟಾಟಗಳು ಮತ್ತು ಗೈಲಾ ಅವರ ಅಪರಿಮಿತ ಪ್ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ.