"ಇದೆಲ್ಲಾ ನೆತನ್ಯಾಹು ಎಲೆಕ್ಷನ್​ ಗಿಮಿಕ್​": ಫ್ಲೈದುಬೈ ವಿಮಾನ ದಾಳಿ ಪ್ರಕರಣ; ಇಸ್ರೇಲ್​ ಪ್ರಧಾನಿ ವಿರುದ್ಧ ಇರಾನ್​ ಗಂಭೀರ ಆರೋಪ! Flydubai Attack

ಫ್ಲೈದುಬೈ ವಿಮಾನ ದಾಳಿ ಪ್ರಕರಣ ಕೇವಲ ನೆತನ್ಯಾಹು ಅವರ ರಾಜಕೀಯ ಚುನಾವಣಾ ಗಿಮಿಕ್ ಎಂದು ಇರಾನ್ ಗಂಭೀರ ಆರೋಪ ಮಾಡಿದೆ. ಈ ರೋಚಕ ಅಂತಾರಾಷ್ಟ್ರೀಯ ರಾಜಕೀಯ ಬೆಳವಣಿಗೆಯ ಸಂಪೂರ್ಣ ವಿವರ ಇಲ್ಲಿದೆ.
Iran makes serious allegation that the Flydubai plane attack incident is a Netanyahu election gimmick.
ಫ್ಲೈದುಬೈ ವಿಮಾನ ದಾಳಿ ಪ್ರಕರಣ ನೆತನ್ಯಾಹು ಚುನಾವಣಾ ಗಿಮಿಕ್ ಎಂದು ಇರಾನ್ ಗಂಭೀರ ಆರೋಪ
Published on: 

ಟೆಹ್ರಾನ್​: ಬುಧವಾರ (ಸೆ. 30) ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ (flydubai) ವಿಮಾನ FZ1073 ರ ಕಾಕ್‌ಪಿಟ್‌ನಲ್ಲಿ ನಡೆದ ಕರಾಳ ಘಟನೆಯೊಂದು ಇಡೀ ವಿಶ್ವವೇ ಬೆಚ್ಚಿಬೀಳುವಂತೆ ಮಾಡಿತ್ತು. ವಿಮಾನದ ಕ್ಯಾಪ್ಟನ್​ ಆಗಿದ್ದ ಭಾರತ ಮೂಲದ ಪೈಲಟ್​ ಸ್ಮಿತ್​ ಮಚ್ಚಾರ್​ ಮೇಲೆ ಓಮನ್​ ಮೂಲದ ಸಹ-ಪೈಲಟ್​ ಚಾಕುವಿನಿಂದ ದಾಳಿ ಮಾಡಿದ್ದ.

ಹಲ್ಲೆ ನಡೆಸಿ, ವಿಮಾನವನ್ನು ತನ್ನ ಹತೋಟಿಗೆ ತೆಗೆದುಕೊಂಡು, ತನ್ನನ್ನು ಸೇರಿದಂತೆ ಆ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೊಲ್ಲುವುದು ಆ ವ್ಯಕ್ತಿಯ ಉದ್ದೇಶವಾಗಿತ್ತೆಂದು ಹೇಳಲಾಗುತ್ತಿದೆ. ಆದರೆ ಕ್ಯಾಪ್ಟನ್​ ಮಚ್ಚಾರ್​​ ಅವರ ಸಾಹಸದ ಫಲವಾಗಿ ವಿಮಾನ, ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿ ವಿಮಾದಲ್ಲಿದ್ದ ಜನರ ಪ್ರಾಣ ಉಳಿದಿದೆ.

Also Read
ದೆಹಲಿಯಲ್ಲಿ ಬೃಹತ್​​ ಪ್ರತಿಭಟನೆ: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಎಎಪಿ ಪಟ್ಟು; 50 ಕ್ಕೂ ಹೆಚ್ಚು ನಾಯಕರು ಅರೆಸ್ಟ್, 11 ಮೆಟ್ರೋ ನಿಲ್ದಾಣ ಬಂದ್! AAP Protest
Iran makes serious allegation that the Flydubai plane attack incident is a Netanyahu election gimmick.

ಆದರೆ, ಈ ಭಯೋತ್ಪಾದಕ ಕೃತ್ಯ ಏಕೆ ನಡೆಯಿತು? ಎಂಬ ಗಂಭೀರ ಪ್ರಶ್ನೆ ಎಲ್ಲರ ಮನದಲ್ಲಿ ಉದ್ಭವಿಸಿದೆ. ಇದಕ್ಕೆ, ಅಮೆರಿಕ ಅಧ್ಯಕ್ಷ ಈ ದಾಳಿಯ ಹಿಂದೆ ಇರಾನ್​ ದೇಶದ ಕೈವಾಡವಿದೆ ಎಂದು ಆರೋಪಿಸಿದ್ದು, ತಾನು ಸ್ವತಂತ್ರ ತನಿಖೆ ನಡೆಸಲಾಗುತ್ತಿದೆ ಎಂದು ಟ್ರಂಪ್​ ಹೇಳಿದ್ದರು.

ಈ ದಾಳಿ ನಂತರ ಪತ್ರಿಕಾಗೋಷ್ಟಿ ನಡೆಸಿದ್ದ, ಇಸ್ರೇಲ್​ ಪ್ರಧಾನಿ ಬೆಂಜಾಮಿನ್​ ನೆತನ್ಯಾಹು ಕೂಡ, ಈ ದಾಳಿಯ ಹಿಂದೆ ಯಾರಿದ್ದರೆಂದು ಆದಷ್ಟು ಬೇಗ ಪತ್ತೆ ಹಚ್ಚುತ್ತೇವೆ. ಭಾರತದ ಕ್ಯಾಪ್ಟನ್​ ಸ್ಮಿತ್​ ಸಾಹಸಕ್ಕೆ ನಾನು ಸೆಲ್ಯೂಟ್​ ಮಾಡುತ್ತೇನೆ ಹಾಗೂ ಈ ದಾಳಿ ನಡೆಸಿದ ವ್ಯಕ್ತಿವೊಬ್ಬ ಇಸ್ಲಾಮಿಕ್​ ತೀವ್ರಗಾಮಿ ಎಂದು ಜರಿದಿದ್ದರು. ಆದರೆ, ತನ್ನ ಮೇಲೆ ಆರೋಪಗಳ ಸುರಿಮಳೆ ಅಬ್ಬರಿಸಿದ ಹಿನ್ನಲೆ ಇರಾನ್​, ಇದಕ್ಕೆ ನೀಡಿರುವ ಕೌಂಟರ್​ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ.

KannadaNews ಇದೆಲ್ಲಾ ನೆತನ್ಯಾಹು ಗಿಮಿಕ್​!

ಜಾಗತಿಕವಾಗಿ ಈ ಫ್ಲೈದುಬೈ ವಿಮಾನದ ಘಟನೆ ವರದಿಯಾಗುತ್ತಿದ್ದಂತೆ, ಇರಾನಿನ ಟಿವಿ ಚಾಲೆನ್​ವೊಂದು ಎಪಿಸೋಡ್​ನ್ನು ಬಿಡುಗಡೆಮಾಡಿದ್ದು, ಅದರಲ್ಲಿ ಇಂದು ನಡೆದಿರುವ ವಿಮಾನ ಹೈಜಾಕ್​ಗೆ ಮತ್ತು ಇರಾನ್​ಗೆ ಯಾವುದೇ ಸಂಬಂಧವಿಲ್ಲ, ಇದು ಇಸ್ರೇಲ್​ ಪ್ರಧಾನಮಂತ್ರಿ ಬೆಂಜಾಮಿನ್​ ನೆತನ್ಯಾಹು ಹಾಗೂ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮಾಡುತ್ತಿರುವ ಎಲೆಕ್ಷನ್​ ಗಿಮಿಕ್​ ಎಂದಿದೆ.

ಮುಂದಿನ ವರ್ಷ ಇಸ್ರೇಲ್​ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಆದರೆ ಅಲ್ಲಿಯ ಜನರಿಗೆ ನೆತನ್ಯಾಹು ಆಡಳಿತ ಸಂತೃಪ್ತಿಯನ್ನು ತಂದಿಲ್ಲ. ಹೀಗಾಗಿ ನೆತನ್ಯಾಹು, ಜನರಲ್ಲಿ ತನ್ನತ್ತ ಸಹಾನುಭೂತಿ ಮೂಡಲು ಹಾಗೂ ಇಸ್ಲಾಂ ವಿರುದ್ಧ ಜನರಲ್ಲಿ ದ್ವೇಷ ಹೆಚ್ಚಾಗಲು ಅಂತೆಯೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನನೆ ಹೆಚ್ಚಿಸಲು ಈ ಡ್ರಾಮಾ ಮಾಡಿದ್ದಾರೆಂದು ಗಂಭೀರ ಆರೋಪವನ್ನು ಮಾಡಿದೆ.

ಸುಳ್ಳು ಸುದ್ದಿ ಹಬ್ಬಿಸಿದರೆ ಹುಷಾರ್​!

ಇರಾನ್​ ಮಾಧ್ಯಮದಿಂದ ಈ ರೀತಿಯ ಸುದ್ದಿ ಬಿತ್ತರವಾಗುತ್ತಿದ್ದಂತೆ ಇಸ್ರೇಲ್​ನ ರಾಯಭಾರ ಕಚೇರಿ ಸಕ್ರಿಯವಾಗಿದೆ. ಯಹೂದಿಗಳು ಈ ರೀತಿಯ ನೀಚ ಕೆಲಸವನ್ನು ಎಂದಿಗೂ ಮಾಡುವುದಿಲ್ಲ, ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ವರದಿ ಹೊರಬಿದ್ದ ಮೇಲೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದೆ.

ನನಗೂ ಇರಾನ್​ ಮೇಲೆ ಡೌಟು!

ಈ ಫ್ಲೈದುಬೈ ವಿಮಾನದ ಘಟನೆನೆ ಪ್ರತಿಕ್ರಿಯೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ನಾನು ವೈಯಕ್ತಿಕವಾಗಿ ಹಾಗೂ ಅಮೆರಿಕದ ಪರವಾಗಿ ಈ ಘಟನೆಯನ್ನು ಖಂಡಿಸುತ್ತೆನೆ. ಅದಕ್ಕಾಗಿ ಸ್ವತಂತ್ರ ತನಿಖೆಗೆ ಆದೇಶವನ್ನು ಕೂಡ ನೀಡಿದ್ದೆನೆ ಎಂದಿದ್ದಾರೆ. ಆಗ ಪತ್ರಕರ್ತರು ನಿಮಗೆ ಯಾರ ಮೇಲಾದರೂ ಅನುಮಾನವಿದೆಯೇ? ಇದರಲ್ಲಿ ಇರಾನ್​ ಪಾತ್ರವಿದೆಯೇ? ಎಂದು ಕೇಳಿದಾಗ, ಇರಾನ್​ ಈ ಕೆಲಸ ಮಾಡಿದ್ದರೂ ಇರಬಹುದು. ಆದರೆ ತನಿಖೆ ನಡೆದು ವರದಿ ಬರುವವರೆಗೆ ಏನೂ ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಇರಾನ್​ಅನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net