ನಮ್ಮವರನ್ನೇ ಟಾರ್ಗೆಟ್​ ಮಾಡಿದ್ದಾರೆ! 'ಅಪರಿಚಿತ ಬಂದೂಕುಧಾರಿ' ಗುಂಡಿಗೆ 30 ಕ್ಕೂ ಅಧಿಕ ಉಗ್ರರು ಮಟಾಶ್​​; ಲಷ್ಕರ್​ ಕಮಾಂಡರ್​ ರಿಜ್ವಾನ್ ಹನೀಫ್ ವಿಡಿಯೋ ವೈರಲ್​! Rizwan Hanif on Unknown Gunman

ಲಷ್ಕರ್-ಎ-ತೋಯ್ಬಾ ಕಮಾಂಡರ್ ರಿಜ್ವಾನ್ ಹನೀಫ್‌ನ ಸ್ಫೋಟಕ ವಿಡಿಯೋ ವೈರಲ್
ಲಷ್ಕರ್-ಎ-ತೋಯ್ಬಾ ಕಮಾಂಡರ್ ರಿಜ್ವಾನ್ ಹನೀಫ್‌ನ ಸ್ಫೋಟಕ ವಿಡಿಯೋ ವೈರಲ್
Published on

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದಲ್ಲಿ 'ಅಪರಿಚಿತ ಬಂದೂಕುಧಾರಿ' ಗುಂಡಿಗೆ 30ಕ್ಕೂ ಅಧಿಕ ಲಷ್ಕರ್ ಉಗ್ರರು ಹತ್ಯೆ!
  • ಲಷ್ಕರ್-ಎ-ತೋಯ್ಬಾ ಕಮಾಂಡರ್ ರಿಜ್ವಾನ್ ಹನೀಫ್‌ನ ಸ್ಫೋಟಕ ವಿಡಿಯೋ ವೈರಲ್
  • ನಮ್ಮವರನ್ನು ಗುರಿಯಾಗಿಸಿ ಈ ಕಾರ್ಯಚರಣೆ ನಡೆಯುತ್ತಿದೆ
ನವದೆಹಲಿ: ಕೆಲ ತಿಂಗಳುಗಳ ಹಿಂದೆ ಬಿಡುಗಡೆಯಾಗಿದ್ದ ಬಾಲಿವುಡ್​ ಸಿನಿಮಾ ಧುರಂಧರ್​ನಲ್ಲಿ ಭಾರತದ ಗೂಢಚರರು 'ಅಪರಿಚಿತ ಬಂದೂಕುಧಾರಿ' ಗಳಾಗಿ ಪಾಕಿಸ್ತಾನದಲ್ಲಿರುವ ಉಗ್ರರನ್ನು ಕೊಲ್ಲುವ ದೃಶ್ಯಗಳನ್ನು ತೋರಿಸಿದ್ದರು.
ಈಗ ಆ ಸಿನಿಮಾದಲ್ಲಿ ತೋರಿಸಿದಂತೆ, ಅಪರಿಚಿತ ಬಂದೂಕುಧಾರಿಗಳು ಕುಖ್ಯಾತ ಭಯೋತ್ಪಾದನಾ ಸಂಘಟನೆಯಾದ ಲಷ್ಕರ್​-ಎ- ತೊಯ್ಬಾದ ಸುಮಾರು 30 ಕ್ಕೂ ಅಧಿಕ ಉಗ್ರರನ್ನು ಕೊಂದಿದ್ದಾರೆಂದು, ಖುದ್ದು ಈ ಸಂಘಟನೆಯ ಭಯೋತ್ಪಾದಕ (Rizwan Hanif on Unknown Gunman) ಒಪ್ಪಿಕೊಂಡಿರುವ ವಿಡಿಯೋವೊಂದು ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದೆ.

ನಮ್ಮವರನ್ನು ಕೊಲ್ಲಲಾಗುತ್ತಿದೆ!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋನಲ್ಲಿ, ಲಷ್ಕರ್​ ಸಂಘಟನೆಯ ಭಯೋತ್ಪಾದಕ ರಿಜ್ವಾನ್ ಹನೀಫ್, ಕಳೆದ ನಾಲ್ಕು ವರ್ಷಗಳಿಂದ ನಮ್ಮ ಸುಮಾರು 30 ಕ್ಕೂ ಹೆಚ್ಚು ಜನರನ್ನು ಅಪರಿಚಿತ ಬಂದೂಕುಧಾರಿಗಳ ಕೈಯಲ್ಲಿ ಸಾವನ್ನಪ್ಪಿದ್ದಾರೆ.

2008 ರಲ್ಲಿ ಮುಂಬೈ ಮೇಲೆ ಭಯೋತ್ಪಾದಕ ಕೃತ್ಯ ನಡೆಸಿ ಸುಮಾರು 166 ಜನರ ಸಾವಿಗೆ ಕಾರಣವಾಗಿರುವ ಈ ಸಂಘಟನೆಯ ಬಹುತೇಕ ಸದಸ್ಯರನ್ನು ಪೇಶಾವರ, ರಾವಲ್​ಪಿಂಡಿ, ಕರಾಚಿ, ರಾವಲ್​ಕೋಟ್​ ಹಾಗೂ ಮುಜಾಫರ್​ಬಾದ್​ನಲ್ಲಿ ಹತ್ಯೆ ಮಾಡಲಾಗುತ್ತಿದೆ ಎಂದು ಹನೀಫ್ ವಿಡಿಯೋನಲ್ಲಿ ಹೇಳಿದ್ದಾರೆ.


ಈ ವಿಡಿಯೋನಲ್ಲಿ ಮಾತನಾಡಿರುವ ಉಗ್ರ ರಿಜ್ವಾನ್​ ಹನೀಫ್ ಕೂಡ ಭಾರತದ ಹಿಟ್​ ಲಿಸ್ಟ್​ನಲ್ಲಿದ್ದು, ಇವನ ಮೇಲೆ ವಾರೆಂಟ್​ಅನ್ನು ಜಾರಿ ಮಾಡಲಾಗಿದೆ. ಆದರೆ ಪಾಕಿಸ್ತಾನದ ನೆಲದಲ್ಲಿ ನಡೆಯುತ್ತಿರುವ ಈ ಅಪರಿಚಿತ ಬಂದೂಕುಧಾರಿ ಕಾರ್ಯಾಚರಣೆಯಲ್ಲಿ ಭಾರತದ ಯಾವುದೇ ಪಾತ್ರವಿಲ್ಲ ಎಂದು ಗುಪ್ತಚರ ಇಲಾಖೆ ಸ್ಪಷ್ಟ ಪಡಿಸಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net