ಟೆಹ್ರಾನ್, ಕೋಮ್, ನಜಾಫ್, ಕರ್ಬಲಾ ಮತ್ತು ಮಶಾದ್ ನಗರಗಳಲ್ಲಿ ಜಮಾಯಿಸಿದ್ದ ಲಕ್ಷಾಂತರ ಶೋಕತಪ್ತ ಜನರಿಗೆ ಧನ್ಯವಾದ ಅರ್ಪಿಸಿದ ಮೊಜ್ತಬಾ ಖಮೇನಿ, ಇದೊಂದು ಐತಿಹಾಸಿಕ ದಿನ ಎಂದಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಬಂದಿರುವುದು ದಿವಂಗತ ನಾಯಕನ ಪರಂಪರೆ ಮತ್ತು ಇಸ್ಲಾಮಿಕ್ ಕ್ರಾಂತಿಗೆ ಸಿಕ್ಕ ಜಯ ಎಂದು ಅವರು ಹೇಳಿದ್ದಾರೆ, (ಏಜನ್ಸೀಸ್).