ಫಾರ್ಚೂನ್ ಇಂಡಿಯಾ 2026 ಲಿಸ್ಟ್ ಔಟ್: ಅಗ್ರಸ್ಥಾನ ಪಡೆದ ನೀತಾ ಅಂಬಾನಿ; ದೇಶದ ಅತ್ಯಂತ ಪ್ರಭಾವಿ ಮಹಿಳೆಯಾದ ರಿಲಯನ್ಸ್ ಒಡತಿ! Nita Ambani

ರಿಲಯನ್ಸ್ ಫೌಂಡೇಶನ್‌ನ ನೀತಾ ಅಂಬಾನಿ ಭಾರತದ ನಂಬರ್ 1 ಪ್ರಭಾವಿ ಮಹಿಳೆ
ರಿಲಯನ್ಸ್ ಫೌಂಡೇಶನ್‌ನ ನೀತಾ ಅಂಬಾನಿ ಭಾರತದ ನಂಬರ್ 1 ಪ್ರಭಾವಿ ಮಹಿಳೆ
Published on

ಪ್ರಮುಖ ಮುಖ್ಯಾಂಶಗಳು

  • ಫಾರ್ಚೂನ್ ಇಂಡಿಯಾ ಅತ್ಯಂತ ಶಕ್ತಿಶಾಲಿ ಮಹಿಳೆಯರು 2026ರ ಪಟ್ಟಿ ಬಿಡುಗಡೆ!
  • ರಿಲಯನ್ಸ್ ಫೌಂಡೇಶನ್‌ನ ನೀತಾ ಅಂಬಾನಿ ಭಾರತದ ನಂಬರ್ 1 ಪ್ರಭಾವಿ ಮಹಿಳೆ
  • ಮುಂಬೈನಲ್ಲಿ ನಡೆದ ಬ್ಯುಸಿನೆಸ್ ನಾಯಕಿಯರ ಅದ್ಧೂರಿ ಸಮಾವೇಶ
ಮುಂಬೈ: ಭಾರತದ ಬ್ಯುಸಿನೆಸ್, ತಂತ್ರಜ್ಞಾನ, ಫೈನಾನ್ಸ್ ಮತ್ತು ಹೆಲ್ತ್‌ಕೇರ್ ಕ್ಷೇತ್ರಗಳಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿರುವ ದೇಶದ 100 ಸೂಪರ್​ ಮಹಿಳೆಯರ ಪಟ್ಟಿಯನ್ನು ಫಾರ್ಚೂನ್ ಇಂಡಿಯಾ ಬಿಡುಗಡೆ ಮಾಡಿದೆ. ಮುಂಬೈನ ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ "ಮೋಸ್ಟ್ ಪವರ್‌ಫುಲ್ ವುಮೆನ್ 2026 ಪಟ್ಟಿಯನ್ನು ಅನಾವರಣಗೊಳಿಸಲಾಯಿತು.

ನಂಬರ್ 1 ಪಟ್ಟಕ್ಕೇರಿದ ನೀತಾ ಅಂಬಾನಿ!

ಈ ವರ್ಷದ ಫಾರ್ಚೂನ್ ಇಂಡಿಯಾ ಪಟ್ಟಿಯಲ್ಲಿ ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ನೀತಾ ಅಂಬಾನಿ (Nita Ambani) ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇವಲ ಬ್ಯುಸಿನೆಸ್ ಮಾಡುವುದು ಮಾತ್ರ ನಾಯಕತ್ವ ಅಲ್ಲ, ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ನಾಯಕತ್ವ ಇಂದಿನ ಅಗತ್ಯ ಎಂದಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಬೆಳವಣಿಗೆಯಲ್ಲಿ ನಾವು ಮಾಡುವ ಹೂಡಿಕೆಯೇ ಭಾರತದ ಭವಿಷ್ಯದ ಅಡಿಪಾಯ, ಎಂದು ಅವರು ಜಾಗತಿಕ ವೇದಿಕೆಯಲ್ಲಿ ನುಡಿದ್ದಿದ್ದಾರೆ.
AI ಜಮಾನಾದಲ್ಲೂ ಹ್ಯೂಮನ್ ಟಚ್ ಮುಖ್ಯ!
ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಹೊಸ ಟೆಕ್ನಾಲಜಿಗಳು ಬ್ಯುಸಿನೆಸ್ ಜಗತ್ತನ್ನು ಆಳುತ್ತಿವೆ. ಆದರೆ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮನುಷ್ಯನ ಬುದ್ಧಿವಂತಿಕೆ, ತಾಳ್ಮೆ, ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಗುಣ ಮತ್ತು ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಬ್ಯುಸಿನೆಸ್ ಅನ್ನು ಮುನ್ನಡೆಸುವ ಛಲವೇ ಅಂತಿಮವಾಗಿ ಗೆಲ್ಲುತ್ತದೆ ಎಂದು ವೇದಿಕೆಯಲ್ಲಿದ್ದ ಮಹಿಳಾ ಉದ್ಯಮಿಗಳು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ಬರೀ ದುಡಿಯುವುದಲ್ಲ, ಹಣದ ನಿರ್ಧಾರವೂ ಹೆಣ್ಣುಮಕ್ಕಳದ್ದೇ ಆಗಬೇಕು!

ಮಹಿಳಾ ಸಬಲೀಕರಣದ ಬಗ್ಗೆ ಕಾರ್ಯಕ್ರಮದಲ್ಲಿ ಉತ್ತಮ ಚರ್ಚೆ ನಡೆಯಿತು. ಈಗಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಕೇವಲ ಬ್ಯಾಂಕ್ ಅಕೌಂಟ್ ಇದ್ದರೆ ಸಾಲದು. ಅವರು ಕೇವಲ ಹಣ ಗಳಿಸುವುದಷ್ಟೇ ಅಲ್ಲ, ಗಳಿಸಿದ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು, ಹೇಗೆ ಸಂಪತ್ತನ್ನು ಡಬಲ್ ಮಾಡಬೇಕು ಎಂಬ ಆರ್ಥಿಕ ನಿರ್ಧಾರಗಳನ್ನು ತಾವೇ ಸ್ವತಂತ್ರವಾಗಿ ತೆಗೆದುಕೊಳ್ಳಬೇಕು. ಆಗ ಮಾತ್ರ ನಿಜವಾದ ಮಹಿಳಾ ಸಬಲೀಕರಣ ಸಾಧ್ಯ ಎಂದು ಆರ್ಥಿಕ ತಜ್ಞರು ಹೇಳಿದರು.

ವಿಕಸಿತ ಭಾರತದ ಕನಸಿಗೆ ಮಹಿಳೆಯರೇ ಶಕ್ತಿ!

2047ರ ವೇಳೆಗೆ ಭಾರತವನ್ನು ಸೂಪರ್ ಪವರ್ ಮಾಡುವ 'ವಿಕಸಿತ ಭಾರತ' ಕನಸನ್ನು ನನಸು ಮಾಡಲು ಮಹಿಳೆಯರ ಪಾತ್ರ ದೊಡ್ಡದಿದೆ. ಕೇವಲ ಐಟಿ ಅಥವಾ ಕಾರ್ಪೊರೇಟ್ ವಲಯ ಮಾತ್ರವಲ್ಲದೆ, ಆರೋಗ್ಯ ರಕ್ಷಣೆ, ಪೌಷ್ಟಿಕಾಂಶ ಮತ್ತು ಹೊಸ ಉದ್ಯಮಶೀಲತೆಯಲ್ಲಿ (Entrepreneurship) ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಎಂದು ಮಹಿಳೆ ಸ್ವಾವಲಂಬಿ ಆಗುತ್ತಾಳೋ ಅಂದು ನಮ್ಮ ದೇಶ ಸೂಪರ್​ ಪವರ್​ ರಾಷ್ಟ್ರವಾಗುತ್ತದೆ ಎಂದು ಎಲ್ಲರು ಒಮ್ಮತದಿಂದ ಒಪ್ಪಿದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net