ಒಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಜೊತೆ ಸಂಧಾನ ನಡೆಯುತ್ತಿದೆ, ಯುದ್ಧ ಶೀಘ್ರವೇ ಕೊನೆಯಾಗಲಿದೆ ಎಂದು ಆಶಾವಾದ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇತ್ತ ಇರಾನ್ ಈ ಮಾತುಕತೆಯನ್ನು ನಿರಾಕರಿಸುತ್ತಲೇ ಸರಣಿ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ. ಈ ಗೊಂದಲದ ವಾತಾವರಣವನ್ನೇ ಕಿಮ್ ತನ್ನ ಆಯುಧವನ್ನಾಗಿ ಮಾಡಿಕೊಂಡಿದ್ದಾರೆ. ಅಮೆರಿಕದ ಭರವಸೆಗಳನ್ನು ನಂಬಲಾಗದು ಎಂಬ ಇರಾನ್‌ನ ನಿಲುವನ್ನೇ ಕಿಮ್ ಕೂಡ ಎತ್ತಿ ಹಿಡಿದಿದ್ದಾರೆ.