ಬೀಚ್‌ನಲ್ಲಿ ನಡೆದ ಅಚ್ಚರಿ: ಪ್ರವಾಸಿಗರ ಬಿಯರ್ ಕುಡಿದ ಮಂಗಗಳು; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್! Monkey Drinks Beer
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಮಂಗಗಳ ಬಿಯರ್ ಕುಡಿಯುವ ದೃಶ್ಯ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಮಂಗಗಳ ಬಿಯರ್ ಕುಡಿಯುವ ದೃಶ್ಯ
ಪ್ರವಾಸಿಗರು ಬಿಟ್ಟುಹೋದ ಬಿಯರ್ ಬಾಟಲಿಗಳು
ಇಂಡೋನೇಷ್ಯಾದ ಲಾಂಬೋಕ್ ದ್ವೀಪದ ಬೀಚ್‌ನಲ್ಲಿ ಸೆರೆಯಾದ ದೃಶ್ಯ
ವೈರಲ್: ಇಂಡೋನೇಷ್ಯಾದ ಲಾಂಬೋಕ್ ದ್ವೀಪದಲ್ಲಿ ಪ್ರವಾಸಿಗರು ಕುಡಿದು ಎಸೆದು ಹೋಗಿದ್ದ ಬಿಯರ್ ಬಾಟಲಿಗಳನ್ನು ಅಲ್ಲಿಗೆ ಬಂದ ಮಂಗಗಳು ಕೈಗೆತ್ತಿಕೊಂಡು ಬಿಯರ್ (Monkey Drinks Beer) ಕುಡಿಯಲು ಯತ್ನಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದ್ದಂತೆ ಪರಿಸರ ಹಾಗೂ ಪ್ರಾಣಿ ಪ್ರೇಮಿಗಳ ಕೋಪದ ಕಟ್ಟೆ ಒಡೆದಿದೆ. ಮೊದಲನೆದಾಗಿ ಬೀಚ್‌ನಲ್ಲಿ ಬಿಯರ್ ಕುಡಿದಿರುವುದು ತಪ್ಪು. ಆಯ್ತು ಏನೋ ಮೋಜಿಗೆ ಬಿಯರ್ ಹೀರಿದ ನಂತರ ಅದನ್ನು ತಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು. ಅದನ್ನು ಬಿಟ್ಟು ಹೀಗೆ ಎಲ್ಲಿ ಬೇಕೋ ಅಲ್ಲಿ ಎಸೆದು ಹೋದರೆ ಹೇಗೆ? ಅದನ್ನು ಆ ಕೋತಿಗಳು ಕುಡಿದು ಅವುಗಳ ಜೀವಕ್ಕೆ ಏನಾದರೂ ಅನಾಹುತವಾದರೆ ಹೇಗೆ? ಇದಕ್ಕೆ ಯಾರು ಹೊಣೆ? ಎಂದು ಕಿಡಿಕಾರಿದ್ದಾರೆ.
ನೆಟ್ಟಿಗರ ಫನ್ನಿ ಕಮೆಂಟ್ಸ್!
ಒಂದು ಕಡೆ ಪ್ರಾಣಿ ಪ್ರೇಮಿಗಳು ಮತ್ತು ಪರಿಸರವಾದಿಗಳು ಈ ವಿಡಿಯೋಗೆ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೊಂದು ಕಡೆ ನೆಟ್ಟಿಗರು ಫನ್ನಿ ಕಮೆಂಟ್ ಮಾಡುತ್ತಿದ್ದಾರೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಕೋತಿಗಳು ಪಾನಮತ್ತವಾಗಿ ತುಗಾಡುತ್ತಿದ್ದವು. ಆಗ ವಿಡಿಯೋ ಮಾಡಿದ್ದರೆ ಇನ್ನೂ ಮಜವಾಗಿರುತ್ತಿತ್ತು ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ.
ಮಂಗನಿಂದ ಮಾನವನಾದರೆ, ಈಗ ಮಾನವನ ಚಟವನ್ನು ಮಂಗಗಳು ಕಲಿಯುತ್ತಿವೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಈಗ ಮಂಗಗಳಿಗೆ ಈ ಚಟ ಅಭ್ಯಾಸವಾದರೆ ನಾಳೆಯಿಂದ ಬಾಳೆಹಣ್ಣಿನ ಬದಲು ಬಿಯರ್ನ್ನೇ ಕೇಳುತ್ತವೆ ಎಂದು ಮತ್ತೊಬ್ಬರು ಹೇಳಿದ್ದಾರೆ, (ಏಜನ್ಸೀಸ್).