ದೇವಭೂಮಿಯಲ್ಲಿ ಶಾಂತಿ ಸ್ಥಾಪನೆ: ಸತತ ಮಾತುಕತೆ ಯಶಸ್ವಿ; ನಿಹಾಂಗ್ ಸಿಖ್ಖರ ಹಿಡಿತದಿಂದ ಮುಕ್ತವಾದ ನಗರಸು ಗುರುದ್ವಾರ! Nihang Sikhs in Nagarsu Gurudwara

ನಿಹಾಂಗ್ ಸಿಖ್ಖರ ಹಿಡಿತದಿಂದ ನಗರಸು ಗುರುದ್ವಾರ ಮುಕ್ತ
ನಿಹಾಂಗ್ ಸಿಖ್ಖರ ಹಿಡಿತದಿಂದ ನಗರಸು ಗುರುದ್ವಾರ ಮುಕ್ತ
Published on

ಪ್ರಮುಖ ಮುಖ್ಯಾಂಶಗಳು

  • ರುದ್ರಪ್ರಯಾಗದ ನಗರಸು ಗುರುದ್ವಾರದಲ್ಲಿ ನಡೆದ ಹೈಡ್ರಾಮಾ ಅಂತ್ಯ
  • ಸತತ ಮಾತುಕತೆ ಯಶಸ್ವಿ
  • ನಿಹಾಂಗ್ ಸಿಖ್ಖರ ಹಿಡಿತದಿಂದ ನಗರಸು ಗುರುದ್ವಾರ ಮುಕ್ತ
ರುದ್ರಪ್ರಯಾಗ: ಪಾರ್ಕಿಂಗ್​ಗಾಗಿ ಪ್ರಾರಂಭವಾದ ಚಿಕ್ಕ ಗಲಾಟೆ ಗುರುದ್ವಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಮಟ್ಟಿಗಿನ ಉದ್ವಿಗ್ನ ಘಟನೆ ಉತ್ತರಾಖಂಡ ರಾಜ್ಯದ ರುದ್ರಪ್ರಯಾಗನಲ್ಲಿ ನಡೆದಿತ್ತು.
ಶನಿವಾರ (ಜೂ. 20) ನಗರಸು ಗುರುದ್ವಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದ ನಿಹಾಂಗ್​ ಸಿಖ್​ಗಳು (Nihang Sikhs in Nagarsu Gurudwara) ನಿನ್ನೆ (ಮಂಗಳವಾರ, ಜೂ.23) ಮಾತುಕತೆಗೆ ಒಪ್ಪಿದ್ದು ಗುರುದ್ವಾರವನ್ನು ತೊರೆಯುವುದಾಗಿ ಭರವಸೆ ನೀಡಿದ್ದಾರೆ.

ಎಲ್ಲಾ ಸಮಸ್ಯೆ ಪರಿಹಾರವಾಗಿದೆ!

ಕಳೆದ ನಾಲ್ಕು ದಿನಗಳಿಂದ ನಗರಸು ಗುರುದ್ವಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದ ನಿಹಾಂಗ್​ ಸಿಖ್​ರು, ಪೊಲೀಸರಿಂದ ಬಂಧಿತರಾದ ತಮ್ಮ ಸಂಗಡಿಗರ ಬಿಡುಗಡೆಗೆ ಪಟ್ಟು ಹಿಡಿದು, ಗುರುದ್ವಾರದಲ್ಲಿದ್ದ ಭಕ್ತರನ್ನು ಬಂಧಿಗಳನ್ನಾಗಿಸಿ ಕೊಂಡಿದ್ದರು. ನಂತರ ನಿಹಾಂಗ್​ಗಳನ್ನು ಸಮಾಧಾನ ಪಡಿಸಲು, ಸ್ಥಳೀಯ ಆಡಳಿತಾಧಿಕಾರಿಗಳು, ಪೊಲೀಸ್​ ವರಿಷ್ಟಾಧಿಕಾರಿಗಳು ಹಾಗೂ ಅರೆ ಮಿಲಿಟರಿ ಪಡೆಯನ್ನು ಸ್ಥಳಕ್ಕೆ ರವಾನಿಸಲಾಗಿತ್ತು.
ಸತತ ಮಾತುಕತೆ ನಂತರ, ಗುರುದ್ವಾರವನ್ನು ನಿಹಾಂಗ್​ಗಳು ತಮ್ಮ ಹಿಡಿತದಿಂದ ಕೈಬಿಟ್ಟಿದ್ದಾರೆ, ಅವರ ಮನವಿಯನ್ನು ನಾವು ಸ್ವೀಕರಿಸಿದ್ದೆವೆ. ಈಗ ಸ್ಥಳದಲ್ಲಿ ಶಾಂತಿ ವಾತಾವರಣ ನಿರ್ಮಾಣವಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಲ್ ಮಿಶ್ರಾ ತಿಳಿಸಿದ್ದಾರೆ.

ಘಟನೆ ಹಿನ್ನಲೆ

ಜೂನ್​ 16 ರಂದು ಕರ್ಣಪ್ರಯಾಗದಲ್ಲಿ ಪಾರ್ಕಿಂಗ್​ಗಾಗಿ ಸ್ಥಳೀಯರೊಂದಿಗೆ ನಿಹಾಂಗ್​ ಸಿಖ್​ರ ಜಗಳವಾಗಿತ್ತು. ಸ್ಥಳೀಯರು, ನಿಹಾಂಗ್​ಗಳು ತಮ್ಮ ತಲ್ವಾರ್​ ಮತ್ತು ಕೃಪಾಣಗಳ ಮೂಲಕ ಹಲ್ಲೆ ನಡೆಸಿದ್ದಾರೆಂದು ಪೊಲೀಸರಿಗೆ ದೂರನ್ನು ನೀಡಿದ್ದು, ನಾಲ್ಕು ಜನ ನಿಹಾಂಗ್​ಗಳನ್ನು ಬಂಧಿಸಲಾಗಿತ್ತು.
ಆದರೆ ನಿಹಾಂಗ್​ಗಳ ಪ್ರಕಾರ, ಈ ಪ್ರಕರಣದಲ್ಲಿ ಪೊಲೀಸರು ಕೇವಲ ಸ್ಥಳೀಯರ ಮಾತನ್ನು ಕೇಳಿದ್ದು, ತಮ್ಮ ವಾದವನ್ನು ಆಲಿಸಿಯೇ ಇಲ್ಲ. ಅಷ್ಟೇ ಅಲ್ಲದೆ ಬಂಧಿಸಿದ ನಿಹಾಂಗ್​ಗಳ ಮೇಲೆ ಪೊಲೀಸರು ಹಲ್ಲೆ ನಡೆಸಿ, ಅವರ ತಲೆ ಮೇಲಿದ್ದ ಪಗಡಿಯನ್ನು ತೆಗಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನಿಹಾಂಗ್​ಗಳ ಕೋಪಕ್ಕೆ ಕಾರಣವಾಗಿತ್ತು.
ಈ ಘಟನೆ ಬಳಿಕ ನಗರಸು ಗುರುದ್ವಾರಕ್ಕೆ ಮರಳಿದ ನಿಹಾಂಗ್​ಗಳು ನಾಳೆ ಪಂಜಾಬ್​ನಿಂದ ಹೋರಾಟಗಾರರು ಬರಲಿದ್ದಾರೆ ನಮಗೆ 50-60 ಕೋಣೆಗಳನ್ನು ವ್ಯವಸ್ಥೆ ಮಾಡಿ ಎಂದು ಗುರುದ್ವಾರ ಆಡಳಿತ ಮಂಡಳಿಗೆ ಕೇಳಿಕೊಂಡಿದ್ದರು. ಆದರೆ ಅವರ ಈ ಮನವಿ ಅಂಗೀಕಾರವಾಗದ ಹಿನ್ನಲೆ ಗುರುದ್ವಾರವನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net