ಅವಳು ದೊಡ್ಡ ಕುಡುಕಿ ಆಗಿದ್ದಳು..ನಮ್ಮಿಂದ ಸತ್ಯವನ್ನು ಮುಚ್ಚಿಟ್ಟರು: ಪುಣೆ ಕೇತನ್ ಅಗರ್‌ವಾಲ್ ಕೊಲೆ ಪ್ರಕರಣ; ಆರೋಪಿ ಸಿಯಾ ಮೇಲೆ ಭಾವಿ ಅತ್ತೆ ಆರೋಪ! Ketan Agarwal Murder Case

ಪುಣೆ ಉದ್ಯಮಿ ಕೇತನ್ ಅಗರ್‌ವಾಲ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಪುಣೆ ಉದ್ಯಮಿ ಕೇತನ್ ಅಗರ್‌ವಾಲ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
Published on

ಪ್ರಮುಖ ಮುಖ್ಯಾಂಶಗಳು

  • ಪುಣೆ ಉದ್ಯಮಿ ಕೇತನ್ ಅಗರ್‌ವಾಲ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
  • ಮದುವೆಯಾಗಲಿದ್ದ ಸಿಯಾ ಗೋಯಲ್ ದೊಡ್ಡ ಕುಡುಕಿಯಾಗಿದ್ದಳು, ಆಕೆ ಮನೆಯವರು ಸತ್ಯ ಮುಚ್ಚಿಟ್ಟಿದ್ದರು
  • ನನ್ನ ಮಗನನ್ನು ಕೊಂದ ಸಿಯಾ ಮತ್ತು ಆಕೆಯ ಪ್ರಿಯಕರನಿಗೆ ಕಠಿಣ ಶಿಕ್ಷೆ ವಿಧಿಸಿ: ಕೇತನ್​ ತಾಯಿ
ಪುಣೆ: ಜೂನ್​ 18 ರಂದು ಯುವ ಉದ್ಯೋಮಿ ಕೇತನ್ ಅಗರ್‌ವಾಲ್ ಪುಣೆಯ ಲೋಹಾಗಢ ಕೋಟೆ ಸಮೀಪ ಸುಮಾರು 400 ಅಡಿ ಕೆಳಗೆ ಬಿದ್ದು ಮೃತಪಟ್ಟಿದ್ದ. ನಂತರ ನಡೆದ ತನಿಖೆಯಲ್ಲಿ ಇದು ಆಕಸ್ಮಿಕ ಸಾವಲ್ಲ, ಬದಲಿಗೆ ಕೇತನ್ (Ketan Agarwal Murder Case) ​ನನ್ನು ಮುದುವೆಯಾಗಲಿದ್ದ ಸಿಯಾ ಗೋಯಲ್ ಹಾಗೂ ಪ್ರಿಯಕರ ಚೇತನ್ ಚೌಧರಿ ನಡೆಸಿದ ವ್ಯವಸ್ಥಿತ ಕೊಲೆಯೆಂದು ತನಿಖೆಯಲ್ಲಿ ಬಹಿರಂಗಗೊಂಡಿದೆ.

ಅವಳು ದೊಡ್ಡ ಕುಡುಕಿ ಆಗಿದ್ದಳು!

ತನ್ನ ಮಗನ ಸಾವಿನ ನಂತರ ಮೊದಲ ಪ್ರತಿಕ್ರಿಯೆ ನೀಡಿರುವ ಕೇತನ್ ಅಗರ್‌ವಾಲ್ ತಾಯಿ, ಸಿಯಾಳಿಗೆ ಕುಡಿತದ ಚಟವಿತ್ತು, ಇದನ್ನು ಅವರ ತಂದೆ-ತಾಯಿ ನಮ್ಮಿಂದ ಮುಚ್ಚಿಟ್ಟಿದ್ದರು ಎಂದು ಆರೋಪಿಸಿದ್ದಾರೆ.
ನಿಶ್ಚಿತಾರ್ತವಾದ ಬಳಿಕ ಸಿಯಾ ನಮ್ಮ ಮನೆಗೆ 3-4 ಬಾರಿ ಬಂದಿದ್ದಳು. ಒಮ್ಮೊ ಮನೆಯ ಪೂಜೆ ಆಕೆ ಬಂದಿದ್ದಾಗ, ನೋಡಮ್ಮ ನಮ್ಮ ಮನೆಯಲ್ಲಿ ಮದ್ಯಪಾನ ನಿಷಿದ್ಧ, ನೀವು ಪಾರ್ಟಿಗೆ ಹೋಗಿ ಕುಡಿಯುವಂತಿಲ್ಲ ಎಂದು ಹೇಳಿದ್ದೆ. ಆದರೆ ಅವಳು ತನ್ನ ಕುಡಿತವನ್ನು ಕಡಿಮೆ ಮಾಡಿರಲಿಲ್ಲ, ಇದನ್ನು ಅವರ ಮನೆಯವರು ನಮಗೆ ತಿಳಿಸಿರಲೇ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ನನ್ನ ಮಗನ ಸಾವಿಗೆ ನ್ಯಾಯ ದೊರಕಿಸಿ!

ನನ್ನ ಮಗನನ್ನು, ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿಕೊಂಡು ಕೊಂದಿದ್ದಾರೆ. ಅವರಿಬ್ಬರಿಗೆ ಮೊದಲಿನಿಂದಲೂ ಸಂಬಂಧವಿತ್ತು. ಇದನ್ನು ನಮಗೆ ಮೊದಲೇ ತಿಳಿಸಿದ್ದರೆ ನನ್ನ ಮಗನ ಜೀವ ಉಳಿಯುತ್ತಿತ್ತು.
ಈಗ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಬ್ಬರಿಗೆ ಕಠಿಣ ಶಿಕ್ಷೆಯಾದರೇ ಮಾತ್ರ ನನ್ನ ಮಗನ ಆತ್ಮಕ್ಕೆ ಶಾಂತಿ ಸಿಗುತ್ತದೆ. ಅಕೆ ಮಹಿಳೆ ಹಾಗೇ-ಹೀಗೆ ಎಂದು ಪ್ರಕರಣದಿಂದ ಪಾರಾಗಲು ಬಿಡಬಾರದೆಂದು ಪೊಲೀಸರಲ್ಲಿ ಹಾಗೂ ನ್ಯಾಯಾಲಯಕ್ಕೆ ಕೇತನ್​ ತಾಯಿ ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ

ಮಹಾರಾಷ್ಟ್ರದ ಖ್ಯಾತ ಉದ್ಯಮಿಯ ಪುತ್ರನಾದ ಕೇತನ್​ ಅಗರವಾಲ್ ಮತ್ತು ಸಿಯಾ ಗೋಯಲ್ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅರಮನೆಯೊಂದರಲ್ಲಿ ನವೆಂಬರ್​ನಲ್ಲಿ ಅದ್ದೂರಿ ವಿವಾಹವನ್ನು ಯೋಜಿಸಲಾಗಿತ್ತು. ಆದರೆ ಜೂನ್ 18ರಂದು ಪುಣೆ ಸಮೀಪದ ಲೋಹಗಢ ಕೋಟೆಯಲ್ಲಿ ಸಿಯಾ ಹಾಗೂ ಆಕೆಯ ಪ್ರಿಯಕರ ಚೇತನ್ ಸೇರಿ ಕೇತನ್​ನನ್ನು ಕಣಿವೆಗೆ ತಳ್ಳಿದ ಪರಿಣಾಮ ಮೃತಪಟ್ಟಿದ್ದಾರೆ ಎಂದು ತನಿಖೆ ಬಹಿರಂಗಪಡಿಸಿದೆ.
22 ವರ್ಷದ ಚೇತನ್ ಬಬುಲಾಲ್ ಚೌಧರಿ ಎಂಬಾತನೊಂದಿಗೆ ಸಿಯಾ ಕಳೆದ ವರ್ಷ ಸಭೆಯೊಂದರಲ್ಲಿ ಪರಿಚಯವಾಗಿದ್ದಳು. ಸಿಯಾ ಬೇಕರಿ ವ್ಯವಹಾರ ನಡೆಸುತ್ತಿದ್ದರೆ, ಚೇತನ್ ಡ್ರೈ ಫ್ರೂಟ್ಸ್ ವ್ಯಾಪಾರ ಮಾಡುತ್ತಿದ್ದನು. ಇವರಿಬ್ಬರ ಸಂಬಂಧ 2025ರ ನವೆಂಬರ್‌ನಲ್ಲಿ ಆರಂಭವಾಗಿತ್ತು. ಅದೇ ವೇಳೆಗೆ ಸಿಯಾ ಮತ್ತು ಕೇತನ್​ ಅವರ ಕುಟುಂಬಗಳು ಮದುವೆ ಸಿದ್ಧತೆಯಲ್ಲಿ ತೊಡಗಿದ್ದವು.
ಪೊಲೀಸರ ಪ್ರಕಾರ, ಸಿಯಾ ಮತ್ತು ಕೇತನ ನಡುವಿನ ಸಂಬಂಧದಿಂದ ಚೇತನ್ ಅಸಮಾಧಾನಗೊಂಡಿದ್ದನು. ಕೇತನ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆ ಎಂದು ಭಾವಿಸಿ ಇಬ್ಬರೂ ಸೇರಿ ಕೊಲೆ ಸಂಚು ರೂಪಿಸಿದ್ದರು. ಸಿಯಾ, ಪ್ರವಾಸದ ನೆಪದಲ್ಲಿ ಕೇತನನನ್ನು ಲೋಹಗಢ ಕೋಟೆಗೆ ಕರೆದುಕೊಂಡು ಹೋಗಿದ್ದಳು. ಬಳಿಕ ಚೇತನ್ ಸ್ಥಳಕ್ಕೆ ಆಗಮಿಸಿದ್ದಾನೆ. ಇಬ್ಬರೂ ಸೇರಿ ಕೇತನ್​ನನ್ನು ಹಿಂಬದಿಯಿಂದ ತಳ್ಳಿದ ಪರಿಣಾಮ ಆಳವಾದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net