ಶಸ್ತ್ರಾಸ್ತ್ರ, ಉಪಗ್ರಹ ಸಾಧನಗಳಿದ್ದ ಹಡಗು ಹೈಜಾಕ್: 6 ಭಾರತೀಯರು ಸೇರಿ 10 ಮಂದಿ ಕಡಲ್ಗಳ್ಳರ ವಶ! Indians captured by Pirates
ಶಸ್ತ್ರಾಸ್ತ್ರ ಹಾಗೂ ಉಪಗ್ರಹ ಸಾಧನಗಳಿದ್ದ ಹಡಗನ್ನು ಹೈಜಾಕ್ ಮಾಡಿದ ಸೋಮಾಲಿಯಾದ ಕಡಲ್ಗಳ್ಳರು
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಸ್ತ್ರಾಸ್ತ್ರ ಹಾಗೂ ಉಪಗ್ರಹ ಸಾಧನಗಳಿದ್ದ ಹಡಗನ್ನು ಹೈಜಾಕ್ ಮಾಡಿದ ಸೋಮಾಲಿಯಾದ ಕಡಲ್ಗಳ್ಳರು
10 ಒತ್ತೆಯಾಳುಗಳಲ್ಲಿ 6 ಜನ ಭಾರತೀಯರೆಂಬ ಮಾಹಿತಿ
ಟರ್ಕಿ ದೇಶಕ್ಕೆ ಸೇರಿದ್ದ ಹಡಗು
ಸೋಮಾಲಿಯಾ: ಸೋಮವಾರ (ಆ.17) ಪಂಟ್ಲ್ಯಾಂಡ್‌ನ ಐಲ್ ಜಿಲ್ಲೆಯ ಮರ್ರಾಯದಿಂದ ಸುಮಾರು 3.5 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸೋಮಾಲಿಯಾದ ಕಡಲ್ಗಳ್ಳರು ವಶಪಡಿಸಿಕೊಂಡಿರುವ ಹಡಗಿನ ಹತ್ತು ಜನ ಸಿಬ್ಬಂದಿಗಳಲ್ಲಿ ಆರು ಜನ ಭಾರತೀಯ (Indians captured by Pirates) ರಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಈ ಹಡಗಿನಲ್ಲಿ ಟರ್ಕಿ ದೇಶಕ್ಕೆ ಸೇರಿದ್ದ ಶಸ್ತ್ರಾಸ್ತ್ರಗಳು, ಸಂವಹನ ಹಾಗೂ ಉಪಗ್ರಹ ಸಾಧನಗಳು ಇದ್ದವೆಂದು ತಿಳಿದು ಬಂದಿದ್ದು, ಆರು ಭಾರತೀಯರ ಜೊತೆ ಒಬ್ಬ ಟರ್ಕಿಶ್ ಪ್ರಜೆ, ಒಬ್ಬ ಜಾರ್ಜಿಯನ್ ಮತ್ತು ಇಬ್ಬರು ಸರ್ಬಿಯನ್ ಭದ್ರತಾ ಸಿಬ್ಬಂದಿ ಇದ್ದರು ಎಂದು ಸೋಮಾಲಿ ಅಧಿಕಾರಿಗಳು ತಿಳಿಸಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ, ಸೋಮಾಲಿಯಾದ 8 ಜನ ಕಡಲ್ಗಳ್ಳರು ಈ ಹಡಗನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಹೇಳಲಾಗುತ್ತಿದೆ. ವಶಕ್ಕೆ ತೆಗೆದುಕೊಂಡ ಹಡಗನ್ನು ಪಂಟ್ಲ್ಯಾಂಡ್‌ನ ಡಂಗೊರೊಯೊ ಜಿಲ್ಲೆಯ ಗರ್ಮಾಲ್ ಬಳಿಯ ಕರಾವಳಿಗೆ ಸಾಗಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಇದರ ಮೇಲೆ ಟರ್ಕಿಯ ಡ್ರೋನ್ಗಳು ಹಣ್ಣಿಟ್ಟಿವೆ ಎನ್ನಲಾಗುತ್ತಿದೆ.
ಆದರೆ, ಈ ಕಳ್ಳತನ ಹೇಗಾಯಿತು? ಯಾವ ತಂಡ ಮಾಡಿದೆ? ಮತ್ತು ಒತ್ತೆಯಾಳುಗಳ ಪರಿಸ್ಥಿತಿ ಹೇಗಿದೆ? ಎಂಬೆಲ್ಲಾ ಮಾಹಿತಿಗಳು ಸದ್ಯ ದೊರೆತಿಲ್ಲ.
ಯಾರು ಈ ಸೋಮಾಲಿಯನ್ ಪೈರೇಟ್ಸ್?
ಪೂರ್ವ ಆಫ್ರಿಕಾದ ಸೊಮಾಲಿಯಾ ದೇಶದ ಕಡಲ ತೀರದಲ್ಲಿ ಸಕ್ರಿಯವಾಗಿರುವ ಸಶಸ್ತ್ರ ಕಡಲ್ಗಳ್ಳರನ್ನು 'ಸೊಮಾಲಿಯನ್ ಪೈರೇಟ್ಸ್' ಎಂದು ಕರೆಯಲಾಗುತ್ತದೆ. ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ಸಂಚರಿಸುವ ದೊಡ್ಡ ಸರಕು ಸಾಗಣೆ ಹಡಗುಗಳು ಮತ್ತು ತೈಲ ಟ್ಯಾಂಕರ್‌ಗಳನ್ನು ಅಪಹರಿಸಿ, ಹಡಗಿನ ಸಿಬ್ಬಂದಿಯನ್ನು ಒತ್ತೆಯಾಳಾಗಿಟ್ಟುಕೊಂಡು ಕೋಟ್ಯಂತರ ರೂಪಾಯಿ ಹಣವನ್ನು ವಸೂಲಿ ಮಾಡುವುದು ಇವರ ಮುಖ್ಯ ಕೃತ್ಯವಾಗಿದೆ.
ಸೊಮಾಲಿಯಾದಲ್ಲಿ ದೀರ್ಘಕಾಲದವರೆಗೆ ಸರಿಯಾದ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಇಲ್ಲದಿರುವುದು, ಹಾಗೆಯೇ ಅಲ್ಲಿನ ಕರಾವಳಿ ಪ್ರದೇಶದಲ್ಲಿ ಅಕ್ರಮ ಮೀನುಗಾರಿಕೆಯಿಂದ ಸ್ಥಳೀಯ ಮೀನುಗಾರರ ಜೀವನೋಪಾಯ ನಾಶವಾಗಿರುವುದು ಈ ಕಡಲ್ಗಳ್ಳತನ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ಅಂತರರಾಷ್ಟ್ರೀಯ ನೌಕಾಪಡೆಗಳು (ಭಾರತೀಯ ನೌಕಾಪಡೆ ಸೇರಿದಂತೆ) ಕಾಲಕಾಲಕ್ಕೆ ಈ ಕಡಲ್ಗಳ್ಳರ ವಿರುದ್ಧ ಕಠಿಣ ಕಾರ್ಯಾಚರಣೆಗಳನ್ನು ನಡೆಸಿ ಹಡಗುಗಳು ಮತ್ತು ಸಿಬ್ಬಂದಿಯನ್ನು ರಕ್ಷಿಸುತ್ತಾ ಬಂದಿವೆ, (ಏಜನ್ಸೀಸ್).