ತಮ್ಮ ಸಾವಿನ ಬಗ್ಗೆಯೇ ಭವಿಷ್ಯ ನುಡಿದಿದ್ದರು ಬಾಬಾ ವಂಗಾ! ಅತೀಂದ್ರಿಯ ಭವಿಷ್ಯಗಾರ್ತಿಯ ಮರಣ ಹೇಗಿತ್ತು? Baba Vanga

ತಮ್ಮ ಸಾವಿನ ಬಗ್ಗೆಯೇ ಭವಿಷ್ಯ ನುಡಿದಿದ್ದರು ಬಾಬಾ ವಂಗಾ! ಅತೀಂದ್ರಿಯ ಭವಿಷ್ಯಗಾರ್ತಿಯ ಮರಣ ಹೇಗಿತ್ತು? Baba Vanga
ತಮ್ಮ ಸಾವಿನ ಬಗ್ಗೆಯೇ ಭವಿಷ್ಯ ನುಡಿದಿದ್ದರು ಬಾಬಾ ವಂಗಾ! ಅತೀಂದ್ರಿಯ ಭವಿಷ್ಯಗಾರ್ತಿಯ ಮರಣ ಹೇಗಿತ್ತು? Baba Vanga
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿ ವರ್ಷ ಆರಂಭದಲ್ಲಿ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಭಾರಿ ಸದ್ದು ಮಾಡುತ್ತವೆ
  • ಬಾಬಾ ವಂಗಾ ಅವರು ನುಡಿದಿರುವ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ
  • ದೃಷ್ಟಿ ಕಳೆದುಕೊಂಡ ನಂತರವೇ ಬಾಬಾ ವಂಗಾ ಭವಿಷ್ಯ ನುಡಿಯುವ ಅತೀಂದ್ರಿಯ ಶಕ್ತಿಯನ್ನು ಪಡೆದರಂತೆ
  • ತಮ್ಮ ಸಾವಿನ ಬಗ್ಗೆಯೂ ಮೊದಲೇ ಭವಿಷ್ಯ ನುಡಿದಿದ್ದರಂತೆ ಬಾಬಾ ವಂಗಾ
Baba Vanga : ವರ್ಷಗಳೇ ಕಳೆಯಲಿ ಪ್ರತಿ ವರ್ಷ ಆರಂಭದಲ್ಲಿ ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಹೆಸರಾಗಿರುವ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಭಾರಿ ಸದ್ದು ಮಾಡುತ್ತವೆ. ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಹಿಡಿದು, ರಾಷ್ಟ್ರೀಯ ಹಾಗೂ ಸ್ಥಳೀಯ ಮಾಧ್ಯಮಗಳಲ್ಲೂ ಬಾಬಾ ವಂಗಾ ಅವರ ಭವಿಷ್ಯವಾಣಿಗಳ ಕುರಿತು ಒಂದು ವಿಶೇಷ ವರದಿ ಪ್ರಕಟವಾಗುತ್ತವೆ. ಏಕೆಂದರೆ, ಅವರು ನುಡಿದಿರುವ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಆದ್ದರಿಂದ ಬಾಬಾ ವಂಗಾ ವಿಶ್ವ ವಿಖ್ಯಾತಿ ಪಡೆದಿದ್ದಾರೆ.
ಜಗತ್ತಿನ ಭವಿಷ್ಯವಾಣಿ ವಿಚಾರಕ್ಕೆ ಬಂದರೆ, ಮೊದಲು ನೆನಪಿಗೆ ಬರುವ ವ್ಯಕ್ತಿ ಅಂದರೆ ಅದು ಬಾಬಾ ವಂಗಾ. ಅವರ ಭವಿಷ್ಯವಾಣಿಗಳನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ ಎಂದು ಪರಿಗಣಿಸಲಾಗಿದೆ, ಇಲ್ಲಿಯವರೆಗೆ ಅವರ ಭವಿಷ್ಯವಾಣಿಗಳಲ್ಲಿ 85 ಪ್ರತಿಶತಕ್ಕೂ ಹೆಚ್ಚು ನಿಜವಾಗಿವೆ.

ಯಾರೀ ಬಾಬಾ ವಂಗಾ?

ವರದಿಗಳ ಪ್ರಕಾರ, ಬಾಬಾ ವಂಗಾ ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. ಕೆಲವರು ಆಕೆಗೆ ಸಿಡಿಲು ಬಡಿದಿದೆ ಎಂದು ಹೇಳುತ್ತಾರೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.
ಅಂದಹಾಗೆ, ಬಾಬಾ ವಂಗಾ ದೃಷ್ಟಿ ಕಳೆದುಕೊಂಡ ನಂತರವೇ ಭವಿಷ್ಯ ನುಡಿಯುವ ಅತೀಂದ್ರಿಯ ಶಕ್ತಿಯನ್ನು ಪಡೆದರು ಎಂದು ಹೇಳಲಾಗುತ್ತದೆ. ವಿಶ್ವ ಘಟನೆಗಳ ಬಗ್ಗೆ ಬಾಬಾ ವಂಗಾ ಅವರು ನುಡಿದಿರುವ ಭವಿಷ್ಯವಾಣಿಗಳು ಸುಮಾರು 85 ಪ್ರತಿಶತ ನಿಜವಾಗಿವೆ. ಆದ್ದರಿಂದ, ಅವರ ಭವಿಷ್ಯವಾಣಿಗಳು ಜನರಲ್ಲಿ ಹೆಚ್ಚಿನ ನಿರೀಕ್ಷೆ ಮತ್ತು ವಿಶ್ವಾಸವನ್ನು ಗಳಿಸುತ್ತಿವೆ.

ಯಾವೆಲ್ಲ ಭವಿಷ್ಯವಾಣಿಗಳು ನಿಜವಾಗಿವೆ?

ಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್‌ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್‌ ಸುನಾಮಿ, ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು…ಇಂಥ ನೂರಾರು ಘಟನೆಗಳ ಕುರಿತು ಹಲವು ದಶಕಗಳ ಮುಂಚೆಯೇ ನುಡಿದಿದ್ದರು ಇವರು. ಅಷ್ಟೇ ಏಕೆ ಮಹಾಮಾರಿ ಕರೊನಾ ವೈರಸ್​ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದೆ. 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಇತ್ತೀಚೆಗೆ ನಡೆಯುತ್ತಿರುವ ಅಮೆರಿಕ, ಇಸ್ರೇಲ್​ ಹಾಗೂ ಇರಾನ್​ ನಡುವಿನ ಯುದ್ಧದ ಬಗ್ಗೆಯೂ ಬಾಬಾ ವಂಗಾ ಮೊದಲೇ ಭವಿಷ್ಯ ನುಡಿದ್ದಿದ್ದರು ಎಂದು ಹೇಳಲಾಗುತ್ತಿದೆ.

ತಮ್ಮ ಸಾವಿನ ಬಗ್ಗೆಯೂ ಭವಿಷ್ಯ ನುಡಿದಿದ್ದರು

ನಮಗೆ ಸಾಯುವ ದಿನ ಮೊದಲೇ ತಿಳಿದಿದ್ದರೆ, ಬದುಕುವ ದಿನಗಳು ನರಕವಾಗುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಅಚ್ಚರಿಯ ವಿಷಯವೆಂದರೆ ಬಾಬಾ ವಂಗಾ ಅವರಿಗೆ ತಮ್ಮ ಸಾವಿನ ದಿನಾಂಕ ಮೊದಲೇ ತಿಳಿದಿತ್ತು. 1996, ಆಗಸ್ಟ್ 11 ರಂದು ತಮ್ಮ 85ನೇ ವಯಸ್ಸಿನಲ್ಲಿ ತಾನು ಸಾಯುವುದಾಗಿ ನಿಖರವಾಗಿ ಭವಿಷ್ಯ ನುಡಿದಿದ್ದರು ಎಂದು ಹೇಳಲಾಗುತ್ತದೆ. ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಬಾಬಾ ವಂಗಾ ಅವರು ಭವಿಷ್ಯ ನುಡಿದ ದಿನಾಂಕದಂದೇ ನಿಧನರಾದರು. ಅವರು ಸೋಫಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು ಎಂದು ಹೇಳಲಾಗುತ್ತದೆ.

5079ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ

ಇಡೀ ಜಗತ್ತಿನ ನೂರಾರು ವರ್ಷಗಳ ಹಾಗುಹೋಗುಗಳ ಬಗೆಗೆ ಭವಿಷ್ಯ ನುಡಿದಿರುವ ಬಾಗಾ ವಂಗಾ ಪ್ರಕಾರ, 5079ಕ್ಕೆ ಜಗತ್ತು ಕೊನೆಯಾಗುತ್ತದೆ. 2028ರಲ್ಲಿ ಮಾನವರು ಶುಕ್ರವನ್ನು ಭೇಟಿ ಮಾಡುತ್ತಾರೆ, 2033ರಲ್ಲಿ ಧ್ರುವೀಯ ಮಂಜುಗಡ್ಡೆಗಳು ಕರಗಿ, ಜಾಗತಿಕವಾಗಿ ಸಮುದ್ರ ಮಟ್ಟವು ವೇಗವಾಗಿ ಏರುತ್ತೆ, ಮುಸ್ಲಿಮರು 2043 ರಲ್ಲಿ ಯುರೋಪ್ ಅನ್ನು ಆಳುತ್ತಾರೆ, 2076ರಲ್ಲಿ ಕಮ್ಯುನಿಸಂ ಪ್ರಪಂಚದಾದ್ಯಂತ ಹರಡುತ್ತದೆ, 2130ರಲ್ಲಿ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಹೊಂದುತ್ತಾರೆ, 2170ರಲ್ಲಿ ಭೂಮಿಯ ಬಹುತೇಕ ಭಾಗಗಳಲ್ಲಿ ಬರ ಉಂಟಾಗುತ್ತದೆ, 3005ರಲ್ಲಿ ಭೂಮಿಯು ಮಂಗಳದ ನಾಗರಿಕತೆಯೊಂದಿಗೆ ಯುದ್ಧದಲ್ಲಿ ತೊಡಗುತ್ತದೆ, 3797ರಲ್ಲಿ ವಾಸಯೋಗ್ಯವಲ್ಲದ ಕಾರಣ ಮಾನವರು ಭೂಮಿಯಿಂದ ಸ್ಥಳಾಂತರವಾಗುತ್ತಾರೆ ಮತ್ತು 5079 ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ ಎಂದು ಬಾಂಬಾ ವಂಗಾರ ಭವಿಷ್ಯದ ಭವಿಷ್ಯವಾಣಿಗಳಾಗಿವೆ.
ಅಂದಹಾಗೆ, ಈ ಭವಿಷ್ಯವಾಣಿಗಳು ಬಾಬಾ ವಂಗಾ ಅವರ ಅನುಯಾಯಿಗಳಿಂದ ವ್ಯಾಖ್ಯಾನಿಸಲ್ಪಟ್ಟಿವೆ ಹೊರತು ಅದಕ್ಕೆ ನಿಖರ ದಾಖಲೆಗಳು ಇಲ್ಲ. ಹೀಗಾಗಿ ಈ ಭವಿಷ್ಯವಾಣಿಗಳನ್ನು ಕೇವಲ ಮನರಂಜನೆಯಾಗಿ ಅಥವಾ ಚಿಂತನೆಗೆ ಒಳಪಡಿಸಿ ನೋಡಿ. ಯಾವುದೇ ಕಾರಣಕ್ಕೂ ವೈಜ್ಞಾನಿಕವಾಗಿ ನಂಬಬೇಡಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net