ಯುದ್ಧ ಮಾತ್ರವಲ್ಲ ಬಾಬಾ ವಂಗಾ ಹೇಳಿದ ಈ ಭವಿಷ್ಯವೂ ನಿಜವಾಗ್ತಿದೆ...ಇದು ಮುಂದುವರಿದ್ರೆ ಜಗತ್ತು ಸರ್ವನಾಶ! Baba Vanga

ಯುದ್ಧ ಮಾತ್ರವಲ್ಲ ಬಾಬಾ ವಂಗಾ ಹೇಳಿದ ಈ ಭವಿಷ್ಯವೂ ನಿಜವಾಗ್ತಿದೆ...ಇದು ಮುಂದುವರಿದ್ರೆ ಜಗತ್ತು ಸರ್ವನಾಶ! Baba Vanga
ಯುದ್ಧ ಮಾತ್ರವಲ್ಲ ಬಾಬಾ ವಂಗಾ ಹೇಳಿದ ಈ ಭವಿಷ್ಯವೂ ನಿಜವಾಗ್ತಿದೆ...ಇದು ಮುಂದುವರಿದ್ರೆ ಜಗತ್ತು ಸರ್ವನಾಶ! Baba Vanga
Published on

ಪ್ರಮುಖ ಮುಖ್ಯಾಂಶಗಳು

  • ತಮ್ಮ ಭವಿಷ್ಯವಾಣಿಗಳಿಂದಲೇ ವಿಶ್ವವಿಖ್ಯಾತಿಯಾಗಿರುವ ಬಾಬಾ ವಂಗಾ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ
  • ಪ್ರಸ್ತುತ ಇಸ್ರೇಲ್​ ಮತ್ತು ಅಮೆರಿಕ ಒಟ್ಟಿಗೆ ಸೇರಿ ಇರಾನ್​ ಮೇಲೆ ಯುದ್ಧ ಮಾಡುತ್ತಿರುವುದು ಗೊತ್ತೇ ಇದೆ
  • ಯುದ್ಧದ ಸನ್ನಿವೇಶ 2026ನೇ ಇಸವಿಯಲ್ಲಿ ಬರುತ್ತೆ ಎಂದು ಬಾಬಾ ವಂಗಾ ಮೊದಲೇ ಹೇಳಿದ್ದರು
Baba Vanga : ತಮ್ಮ ಭವಿಷ್ಯವಾಣಿಗಳಿಂದಲೇ ವಿಶ್ವವಿಖ್ಯಾತಿಯಾಗಿರುವ ಬಾಬಾ ವಂಗಾ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದೇನೆಂದರೆ, ಅವರು ನುಡಿದಿರುವ ಭವಿಷ್ಯವಾಣಿಗಳು ಮತ್ತೆ ನಿಜವಾಗುತ್ತಿವೆ. ಪ್ರಸ್ತುತ ಇಸ್ರೇಲ್​ ಮತ್ತು ಅಮೆರಿಕ ಒಟ್ಟಿಗೆ ಸೇರಿ ಇರಾನ್​ ಮೇಲೆ ಯುದ್ಧ ಮಾಡುತ್ತಿರುವುದು ಗೊತ್ತೇ ಇದೆ. ಇಂಥದ್ದೊಂದು ಸನ್ನಿವೇಶ 2026ನೇ ಇಸವಿಯಲ್ಲಿ ಬರುತ್ತೆ ಎಂದು ಬಾಬಾ ವಂಗಾ ಮೊದಲೇ ಹೇಳಿದ್ದರು. ಇದೀಗ ನಿಜವಾಗಿದೆ. ಈ ಒಂದು ಸಂಘರ್ಷ ಇಲ್ಲಿಗೆ ನಿಂತರೆ ಇಡೀ ಭೂಮಿಗೆ ಒಳ್ಳೆಯದು. ಒಂದು ವೇಳೆ ಬಾಬಾ ವಂಗಾ ಹೇಳಿರುವ ಈ ಸ್ಥಿತಿ ನಿರ್ಮಾಣವಾದರೆ ಇಡೀ ಜಗತ್ತು ಸರ್ವನಾಶ ಆಗುವುದರಲ್ಲಿ ಸಂದೇಹವೇ ಬೇಡ. ಆಘಾತಕಾರಿ ಸಂಗತಿ ಏನೆಂದರೆ, ಬಾಬಾ ವಂಗಾ ಹೇಳಿರುವ ಆ ವಿಷಮ ಸನ್ನಿವೇಶವು ಕೂಡ ಇದೀಗ ಎದುರಾಗುತ್ತಿದೆ. ಈ ಸನ್ನಿವೇಶ ದೀರ್ಘಕಾಲ ಉಳಿದರೆ, ಇಡೀ ಜಗತ್ತಿನಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗಿ ವಿಶ್ವ ನಾಶವಾಗುತ್ತದೆ. 
ಪ್ರಪಂಚದ ಅನೇಕ ದೇಶಗಳ ನಡುವೆ ಯುದ್ಧ ನಡೆಯುತ್ತದೆ ಮತ್ತು ಆ ಯುದ್ಧ ಕ್ಷಾಮ ಮತ್ತು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ಅವರು ಭವಿಷ್ಯ ನುಡಿದಂತೆ, ಭಾರತದಲ್ಲಿ ಸಿಲಿಂಡರ್‌ಗಳ ಕೊರತೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಇದೆ. ಇದು ಇನ್ನೂ ದೊಡ್ಡ ಪ್ರಮಾಣದಲ್ಲಿ ಸಂಭವಿಸಿಲ್ಲ. ಒಂದು ವೇಳೆ ಈ ಸಮಸ್ಯೆ ಮುಂದುವರಿದರೆ ದೇಶದ ವ್ಯವಸ್ಥೆ ಹದಗೆಡಲಿದೆ. ಇದೇ ಸಮಸ್ಯೆ ಇಡೀ ಜಗತ್ತಿನಾದ್ಯಂತ ಹರಡಿದರೆ, ಅನೇಕ ಸಮಸ್ಯೆಗಳು ಉಲ್ಬಣಗೊಂಡು ಸಾಕಷ್ಟು ತೊಂದರೆಯಾಗಲಿದೆ. ಏಕೆಂದರೆ, ತೈಲ ಮತ್ತು ಇಂಧನ ಇಂದು ಜೀವನದ ಅವಿಭಾಜ್ಯ ಅಂಗವಾಗಿದೆ. ಕೇವಲ 15 ದಿನಗಳ ಯುದ್ಧಕ್ಕೆ ಭಾರತ ಸೇರಿದಂತೆ ಕೆಲ ರಾಷ್ಟ್ರಗಳು ಇಷ್ಟೊಂದು ಪರದಾಡುತ್ತಿರುವಾಗ ಇದೇ ಯುದ್ಧ, ರಷ್ಯಾ ಮತ್ತು ಯೂಕ್ರೇನ್​ ರೀತಿ ಅನೇಕ ವರ್ಷಗಳ ಕಾಲ ಮುಂದುವರಿದರೆ ಜಗತ್ತಿನ ಅನೇಕ ಕಡೆ ಸನ್ನಿವೇಶ ಬಹಳ ಉಸಿರುಗಟ್ಟುವಂತಾಗುತ್ತದೆ. 
ಇನ್ನು ಇದೇ ಯುದ್ಧ ಮತ್ತಷ್ಟು ದೇಶಗಳಿಗೆ ಹರಡಿದರೆ ಜಗತ್ತಿನ ಕತೆ ಮುಗಿದಂತೆ. ಈಗಾಗಲೇ ರಷ್ಯಾ ಮತ್ತು ಯೂಕ್ರೇನ್​ ಯುದ್ಧ ನಡೆಯುತ್ತಿದೆ. ಇನ್ನೊಂದೆಡೆ ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ನಡುವೆಯೂ ಪರಿಸ್ಥಿತಿ ಚೆನ್ನಾಗಿಲ್ಲ. ಭಾರತ ಮತ್ತು ಪಾಕಿಸ್ತಾನದ ಸ್ಥಿತಿಯನ್ನು ವಿಶೇಷವಾಗಿ ಹೇಳಬೇಕಿಲ್ಲ. ಯಾವಾಗ? ಏನು ಬೇಕಾದರೂ ನಡೆಯಬಹುದು. ಅತ್ತ ಚೀನಾದವರು ಮತ್ತು ತೈವಾನ್​ ನಡುವಿನ ಮುಸುಕಿನ ಗುದ್ದಾಟ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈಗಾಗಲೇ ವೆನೆಜುವೆಲಾ ಮೇಲೆ ದಾಳಿ ಮಾಡಿರುವ ಅಮೆರಿಕದ ಕಣ್ಣು ಇದೀಗ ಇರಾನ್​ ಮೇಲೆ ನೆಟ್ಟಿದೆ. ಮುಂಬರುವ ದಿನಗಳಲ್ಲಿ ಮೆಕ್ಸಿಕೋ, ಕ್ಯೂಬಾ ಹಾಗೂ ಗ್ರೀನ್​ಲ್ಯಾಂಡ್​ ಮೇಲೆ ಟ್ರಂಪ್​ ತನ್ನ ಕೆಂಗಣ್ಣು ಬೀರಿದರೆ ಅಚ್ಚರಿಪಡಬೇಕಿಲ್ಲ. 2025ರಿಂದಲೇ ಜಗತ್ತಿನ ಅಂತ್ಯ ಆರಂಭವಾಗುತ್ತದೆ ಎಂದು ಬಾಬಾ ವಂಗಾ ಮೊದಲೇ ಹೇಳಿದ್ದಾರೆ. ಪ್ರಸ್ತುತ ಸ್ಥಿತಿ ನೋಡಿದರೆ ಇದು ನಿಜವಾಗುವ ಸೂಚನೆ ಸಿಗುತ್ತಿದೆ. ಒಂದು ವೇಳೆ ಯುದ್ಧದ ಸ್ಥಿತಿ ಹೀಗೆ ಹರಡಿದರೆ ಜಗತ್ತಿನ ಸರ್ವನಾಶ ಬಹಳ ದೂರವಿಲ್ಲ ಎಂದು ಹೇಳಬಹುದು.

ರಷ್ಯಾ ಸೂಪರ್​ ಪವರ್​

ಇನ್ನು ಬಾಬಾ ವಂಗಾ ಅವರು ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಭಯಾನಕ ಯುದ್ಧ ನಡೆಯಬಹುದು, ಇದರಲ್ಲಿ ರಷ್ಯಾ ಮತ್ತು ಅಮೆರಿಕದಂತಹ ಎರಡು ಪ್ರಬಲ ದೇಶಗಳು ಕಾದಾಡಬಹುದು. ಈ ಯುದ್ಧವು ವಿಶ್ವದ ಪಶ್ಚಿಮ ಭಾಗದಲ್ಲಿರುವ ದೇಶಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಯುರೋಪ್ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಯುದ್ಧ ಪ್ರಾರಂಭವಾದ ನಂತರ, ಯುರೋಪ್ ಧ್ವಂಸಗೊಳ್ಳುತ್ತದೆ. ರಷ್ಯಾ ಸೂಪರ್ ಪವರ್ ಆಗುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇಲ್ಲಿಯವರೆಗೆ ಅವರ ಅನೇಕ ಭವಿಷ್ಯವಾಣಿಗಳು ನಿಖರವಾಗಿರುವುದರಿಂದ, ಈ ಯುದ್ಧ ಮುಂದುವರಿಯುತ್ತದೆ ಮತ್ತು ಭವಿಷ್ಯವಾಣಿಗಳು ನಿಜವಾಗುತ್ತವೆಯೇ ಎಂಬ ಭೀತಿಯಲ್ಲಿ ಜನರಿದ್ದಾರೆ.

ಯಾರೀ ಬಾಬಾ ವಂಗಾ?

ವರದಿಗಳ ಪ್ರಕಾರ, ಬಾಬಾ ವಂಗಾ ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

ಅನೇಕ ಭವಿಷ್ಯಗಳು ನಿಜವಾಗಿವೆ

ಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್‌ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್‌ ಸುನಾಮಿ, ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು…ಇಂಥ ನೂರಾರು ಘಟನೆಗಳ ಕುರಿತು ಹಲವು ದಶಕಗಳ ಮುಂಚೆಯೇ ನುಡಿದಿದ್ದರು ಇವರು. ಅಷ್ಟೇ ಏಕೆ ಮಹಾಮಾರಿ ಕರೊನಾ ವೈರಸ್​ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದೆ. 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಖರ ಎನ್ನಲಾಗುತ್ತಿದೆ.

2026ರ ಇನ್ನಿತರ ಭವಿಷ್ಯವಾಣಿಗಳು

ಪ್ರಸ್ತುತ ನಡೆಯುತ್ತಿರುವ ಯುದ್ಧದಿಂದಾಗಿ ಬಾಬಾ ವಂಗಾರ ಇನ್ನುಳಿದ 2026ರ ಭವಿಷ್ಯವಾಣಿಗಳನ್ನು ನೆನಪಿಸಿಕೊಳ್ಳುವಂತೆ ಮಾಡಿದೆ. ಬಾಬಾ ವಂಗಾ ಹೇಳಿದಂತೆ ಈ ವರ್ಷ ರಷ್ಯಾದಲ್ಲಿ ಹೊಸ ನಾಯಕ ಹೊರಹೊಮ್ಮುತ್ತಾನೆ. ಆ ನಾಯಕನನ್ನು ಜನರು ವಿಶ್ವ ನಾಯಕ ಎಂದು ಆಚರಿಸುತ್ತಾರಂತೆ. ಆತ ಅಂತಾರಾಷ್ಟ್ರೀಯ ಶಕ್ತಿ ಸಮೀಕರಣವನ್ನು ಬದಲಾಯಿಸುತ್ತಾನಂತೆ. ಜನರು ಹೆಚ್ಚು ಇಷ್ಟಪಡುವ ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳ ಬೆಲೆಗಳು ಅನಿರೀಕ್ಷಿತವಾಗಿ ಏರಿಕೆಯಾಗುತ್ತವೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇದು ಸಾಮಾನ್ಯ ಜನರಿಗೆ ತೊಂದರೆ ತರುತ್ತದೆ. ಅಲ್ಲದೆ, ಬ್ಯಾಂಕ್ ಸಂಸ್ಥೆಗಳ ಕುಸಿತ, ಬೆಲೆ ಏರಿಕೆ ಮತ್ತು ಹಣಕಾಸು ವ್ಯವಸ್ಥೆಯು ತೀವ್ರ ಸಂಕಷ್ಟ ಎದುರಿಸಲಿದೆ. ಇನ್ನು ಚಿನ್ನದ ಬೆಲೆಯು ಅಸಾಧಾರಣವಾಗಿ ಏರಿದ ನಂತರ ಕುಸಿಯಬಹುದು ಅಂತಾನೂ ಬಾಬಾ ವಂಗಾ ಹೇಳಿದ್ದಾರೆ. 2026ರ ನವೆಂಬರ್ ತಿಂಗಳಲ್ಲಿ ಒಂದು ದೊಡ್ಡ ಬಾಹ್ಯಾಕಾಶ ನೌಕೆ ಭೂಮಿಯನ್ನು ಸಮೀಪಿಸಲಿದೆ ಎಂದು ಊಹಿಸಲಾಗಿದೆ. ಇದು ಮಾನವರು ಮತ್ತೊಂದು ಪ್ರಪಂಚದೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಮತ್ತು ಅನ್ಯಗ್ರಹ ಜೀವಿಗಳು ಮನುಷ್ಯರೊಂದಿಗೆ ಮಾತನಾಡಲು ಅನುವು ಮಾಡಿಕೊಡುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಈ ರೀತಿಯ ಇನ್ನು ಸಾಕಷ್ಟು ಭವಿಷ್ಯವಾಣಿಗಳನ್ನು ಬಾಬಾ ವಂಗಾ ನುಡಿದಿದ್ದಾರೆ. 

5079ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ

ಇಡೀ ಜಗತ್ತಿನ ನೂರಾರು ವರ್ಷಗಳ ಹಾಗುಹೋಗುಗಳ ಬಗೆಗೆ ಭವಿಷ್ಯ ನುಡಿದಿರುವ ಬಾಗಾ ವಂಗಾ ಪ್ರಕಾರ, 5079ಕ್ಕೆ ಜಗತ್ತು ಕೊನೆಯಾಗುತ್ತದೆ. 2028ರಲ್ಲಿ ಮಾನವರು ಶುಕ್ರವನ್ನು ಭೇಟಿ ಮಾಡುತ್ತಾರೆ, 2033ರಲ್ಲಿ ಧ್ರುವೀಯ ಮಂಜುಗಡ್ಡೆಗಳು ಕರಗಿ, ಜಾಗತಿಕವಾಗಿ ಸಮುದ್ರ ಮಟ್ಟವು ವೇಗವಾಗಿ ಏರುತ್ತೆ, ಮುಸ್ಲಿಮರು 2043 ರಲ್ಲಿ ಯುರೋಪ್ ಅನ್ನು ಆಳುತ್ತಾರೆ, 2076ರಲ್ಲಿ ಕಮ್ಯುನಿಸಂ ಪ್ರಪಂಚದಾದ್ಯಂತ ಹರಡುತ್ತದೆ, 2130ರಲ್ಲಿ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಹೊಂದುತ್ತಾರೆ, 2170ರಲ್ಲಿ ಭೂಮಿಯ ಬಹುತೇಕ ಭಾಗಗಳಲ್ಲಿ ಬರ ಉಂಟಾಗುತ್ತದೆ, 3005ರಲ್ಲಿ ಭೂಮಿಯು ಮಂಗಳದ ನಾಗರಿಕತೆಯೊಂದಿಗೆ ಯುದ್ಧದಲ್ಲಿ ತೊಡಗುತ್ತದೆ, 3797ರಲ್ಲಿ ವಾಸಯೋಗ್ಯವಲ್ಲದ ಕಾರಣ ಮಾನವರು ಭೂಮಿಯಿಂದ ಸ್ಥಳಾಂತರವಾಗುತ್ತಾರೆ ಮತ್ತು 5079 ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ ಎಂದು ಬಾಂಬಾ ವಂಗಾರ ಭವಿಷ್ಯದ ಭವಿಷ್ಯವಾಣಿಗಳಾಗಿವೆ.
ಅಂದಹಾಗೆ, ಈ ಭವಿಷ್ಯವಾಣಿಗಳು ಬಾಬಾ ವಂಗಾ ಅವರ ಅನುಯಾಯಿಗಳಿಂದ ವ್ಯಾಖ್ಯಾನಿಸಲ್ಪಟ್ಟಿವೆ ಹೊರತು ಅದಕ್ಕೆ ನಿಖರ ದಾಖಲೆಗಳು ಇಲ್ಲ. ಹೀಗಾಗಿ ಈ ಭವಿಷ್ಯವಾಣಿಗಳನ್ನು ಕೇವಲ ಮನರಂಜನೆಯಾಗಿ ಅಥವಾ ಚಿಂತನೆಗೆ ಒಳಪಡಿಸಿ ನೋಡಿ. ಯಾವುದೇ ಕಾರಣಕ್ಕೂ ವೈಜ್ಞಾನಿಕವಾಗಿ ನಂಬಬೇಡಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net