ಟೆಲ್ ಅವಿವ್: ಅಕ್ಟೋಬರ್ 7ರ ರಕ್ತಪಾತದ ರೂವಾರಿಗಳಲ್ಲಿ ಒಬ್ಬನಾದ ಹಮಾಸ್ ಮಿಲಿಟರಿ ಇಂಟೆಲಿಜೆನ್ಸ್ ಕಾರ್ಯಾಚರಣೆಯ ಮುಖ್ಯಸ್ಥ ಇಯಾದ್ ಅಹ್ಮದ್ ಅಬ್ದ್ ಅಲ್-ರಹಮಾನ್ ಶಂಬಾರಿಯನ್ನು(Iyad Ahmad Abd Al-Rahman Shambari) ಇಸ್ರೇಲ್ ರಕ್ಷಣಾ ಪಡೆಗಳು (IDF) ಹೊಡೆದುರುಳಿಸಿವೆ. ಈ ಕಾರ್ಯಾಚರಣೆಯು ಹಮಾಸ್ ಸಂಘಟನೆಗೆ ದೊಡ್ಡ ಹೊಡೆತ ನೀಡಿದ್ದು, ಗಾಜಾದಲ್ಲಿ ಕದನ ವಿರಾಮದ ನಡುವೆಯೂ ಉದ್ವಿಗ್ನತೆ ಮಿತಿಮೀರಿದೆ.