ಪಾಕ್ ಸರ್ಕಾರಕ್ಕೆ ಲಷ್ಕರ್ ಉಗ್ರನ ಡೆಡ್ಲಿ ವಾರ್ನಿಂಗ್: ಇಸ್ರೇಲ್, ಅಮೆರಿಕ ಸ್ನೇಹ ಮುಂದುವರೆಸಿದರೆ ಪ್ರಧಾನಿ, ಸೇನಾ ಮುಖ್ಯಸ್ಥರಿಗೆ ಕೊಲೆ ಬೆದರಿಕೆ! Saifullah Kasuri threats PM and Army Chief

ಪ್ರಧಾನಿ ಶಹಬಾಜ್​ ಶರೀಫ್​ ಹಾಗೂ ಸೇನಾ ಮುಖ್ಯಸ್ಥ ಫೀಲ್ಡ್​ ಮಾರ್ಷಲ್​ ಆಸಿಮ್​ ಮುನೀರ್​ಗೆ ಬೆದರಿಕೆ
ಪ್ರಧಾನಿ ಶಹಬಾಜ್​ ಶರೀಫ್​ ಹಾಗೂ ಸೇನಾ ಮುಖ್ಯಸ್ಥ ಫೀಲ್ಡ್​ ಮಾರ್ಷಲ್​ ಆಸಿಮ್​ ಮುನೀರ್​ಗೆ ಬೆದರಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ- ಇಸ್ರೇಲ್​ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಡಿ
  • ಆಸೀಮ್​ ಮುನೀರ್​ ಹಾಗೂ ಶಹಬಾಜ್​ ಶರೀಫ್​ಗೆ ಕೊಲೆ ಬೆದರಿಕೆ ಹಾಕಿದ ಲಷ್ಕರ್​ ಉಗ್ರ
  • ಲಷ್ಕರ್​-ಎ-ತೊಯ್ಬಾದ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಇಂದ ಜೀವ ಬೆದರಿಕೆ
ಇಸ್ಲಾಮಾಬಾದ್​: ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್​ ಶರೀಫ್​ ಹಾಗೂ ಸೇನಾ ಮುಖ್ಯಸ್ಥ ಫೀಲ್ಡ್​ ಮಾರ್ಷೆಲ್​ ಆಸಿಮ್​ ಮುನೀರ್​, ಅಮೆರಿಕ ಹಾಗೂ ಇಸ್ರೇಲ್​ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ.
ಈ ಕೆಲಸ ಹೀಗೆ ಮುಂದುವರೆದರೆ ನಿಮ್ಮಿಬ್ಬರನ್ನು ಕೊಂದು ಹಾಕುವುತ್ತೇವೆಂದು ಭಯೋತ್ಪಾದನಾ ಸಂಘಟನೆ ಲಷ್ಕರ್​-ಎ-ತೊಯ್ಬಾದ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ (Saifullah Kasuri threats PM and Army Chief) ಬೆದರಿಕೆ ಹಾಕಿದ್ದಾರೆಂದು ವರದಿಯಾಗಿದೆ.

ಇಸ್ರೇಲ್​ಗೆ ಬೆಂಬಲ ಕೊಟ್ಟರೆ ಕೊಲೆ!

ಈಗಿರುವ ಪಾಕಿಸ್ತಾನದ ನಾಯಕರಾದ ಪಿಎಂ ಶಹಬಾಜ್​ ಶರೀಫ್​ ಹಾಗೂ ಫೀಲ್ಡ್​ ಮಾರ್ಷಲ್​ ಆಸಿಮ್​ ಮುನೀರ್​ ಇಸ್ರೇಲ್​ ಜೊತೆ ಗುರುತಿಸಿ ಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನು ದೇಶ ಎಂದು ಕೂಡ ಒಪ್ಪಿಕೊಳ್ಳಬಹುದು. ಈ ರೀತಿಯ ಕೆಲಸವೇನಾದರೂ ನಡೆದರೆ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲ ಎಂದು ಉಗ್ರ ಕಸೂರಿ ಎಚ್ಚರಿಕೆ ನೀಡಿದ್ದಾನೆ.

ಅಮೆರಿಕವನ್ನು ಬೆಂಬಲಿಸುವುದನ್ನು ನಿಲ್ಲಿಸಿ

ಪಾಕಿಸ್ತಾನದಲ್ಲಿ ಭಾಷಣ ಮಾಡಿರುವ ಉಗ್ರ ಸೈಫುಲ್ಲಾ ಕಸೂರಿ ಪಾಕಿಸ್ತಾನದ ಪ್ರಧಾನಿ ಮತ್ತು ಫೀಲ್ಡ್​ ಮಾರ್ಷಲ್​ ಅಮೆರಿಕದೊಂದಿಗೆ ಸ್ನೇಹವೃದ್ಧಿ ಮಾಡುವಲ್ಲಿ ತೊಡಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ನಮಗೆ ತೊಂದರೆಯಾಗಲಿದೆ ಎಂದು ಅವರು ಯೋಚನೆ ಮಾಡುತ್ತಿಲ್ಲ ಎಂದು ಲಷ್ಕರ್​-ಎ-ತೊಯ್ಬಾ ಮುಖ್ಯಸ್ಥ ಹೇಳಿದ್ದಾನೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net